ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಶ್ವರ್ಯ ರೈರಿಂದ ವಿವಾಹ ವಿಚ್ಛೇದನ ಕೋರಿದ್ದ ಅರ್ಜಿ ವಾಪಸ್!

|
Google Oneindia Kannada News

ಪಾಟ್ನಾ, ನವೆಂಬರ್ 29: ಬಿಹಾರದ ಮಾಜಿ ಮುಖ್ಯಮಂತ್ರಿಗಳಾದ ಲಾಲೂ ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಇಂದು ಎಲ್ಲರನ್ನು ಅಚ್ಚರಿಗೆ ದೂಡಿದ್ದಾರೆ. ಪತ್ನಿ ಐಶ್ವರ್ಯ ರೈ ಅವರಿಂದ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದಾರೆ.

ಇತ್ತೀಚೆಗಷ್ಟೇ ತಮ್ಮ ಪತ್ನಿ ಐಶ್ವರ್ಯ ರೈ ಅವರಿಗೆ ವಿಚ್ಛೇದನದ ನೋಟೀಸ್ ಕಳಿಸಿದ್ದರು.ಆದರೆ, ನನ್ನ ಕಕ್ಷಿದಾರ ತೇಜ್ ಪ್ರತಾಪ್ ಯಾದವ್ ಮನಸ್ಸು ಬದಲಿಸಿದ್ದಾರೆ. ವಿಚ್ಛೇದನ ವಿಷಯದ ಬಗ್ಗೆ ಮನೆಯವರ ಮಾತಿನಲ್ಲಿ ನಡೆದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ತೇಜ್ ಪ್ರತಾಪ್ ಅವರ ವಕೀಲರು ಹೇಳಿದ್ದಾರೆ.

ಸರ್ಕಾರಿ ಬಂಗಲೆಯಿಂದ ಲಾಲು ಪುತ್ರನ ಎತ್ತಂಗಡಿ ಸರ್ಕಾರಿ ಬಂಗಲೆಯಿಂದ ಲಾಲು ಪುತ್ರನ ಎತ್ತಂಗಡಿ

ಮದುವೆಯಾಗಿ ಆರು ತಿಂಗಳ ಮೊದಲೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ತೇಜ್ ಪ್ರತಾಪ್ ಯಾದವ್ ಗುರುವಾರ ಅರ್ಜಿ ವಾಪಸ್ ಪಡೆದಿದ್ದಾರೆ.

ಬಾಲಿವುಡ್ ಸಿನಿಮಾದಲ್ಲಿ ನಟಿಸಿದ ಲಾಲು ಪ್ರಸಾದ್ ಯಾದವ್ ಪುತ್ರಬಾಲಿವುಡ್ ಸಿನಿಮಾದಲ್ಲಿ ನಟಿಸಿದ ಲಾಲು ಪ್ರಸಾದ್ ಯಾದವ್ ಪುತ್ರ

ತೇಜ್ ಪ್ರತಾಪ್ ಯಾದವ್ ಹಾಗೂ ಐಶ್ವರ್ಯ ಮಧ್ಯೆ ಹೊಂದಾಣಿಕೆಯಿರಲಿಲ್ಲ. ತಂದೆಗೆ ಟಿಕೆಟ್ ನೀಡುವ ವಿಚಾರಕ್ಕೆ ಐಶ್ವರ್ಯ ಕಿರಿಕಿರಿ ಮಾಡಿದ್ದರು ಎಂದು ಆರೋಪಿಸಿ, ತೇಜ್ ಪ್ರತಾಪ್ ಯಾದವ್ ಕೋರ್ಟ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಕೂಡ ಸಲ್ಲಿಸಿದ್ದರು.

ಮದುವೆಯಾಗಿ 6 ತಿಂಗಳುಗಳಲ್ಲೇ ವಿಚ್ಛೇದನಕ್ಕೆ ಅರ್ಜಿ

ಮದುವೆಯಾಗಿ 6 ತಿಂಗಳುಗಳಲ್ಲೇ ವಿಚ್ಛೇದನಕ್ಕೆ ಅರ್ಜಿ

ತೇಜ್ ಪ್ರತಾಪ್ ಹಾಗೂ ಐಶ್ವರ್ಯಾ ಅವರು ಮೇ 2018ರಲ್ಲಿ ಮದುವೆಯಾಗಿದ್ದರು.

ಐಶ್ವರ್ಯಾ ಹಾಗೂ ತೇಜ್ ಪ್ರತಾಪ್ ಅವರ ಮದುವೆ ವಿಜೃಂಭಣೆಯಿಂದ ನಡೆದಿತ್ತು. ಮುಖ್ಯಮಂತ್ರಿ ನಿತೀಶ್ ಕುಮಾರ್, ರಾಜ್ಯಪಾಲ ಸತ್ಯಪಾಲ್ ಮಲಿಕ್, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಸೇರಿದಂತೆ ಹಲವಾರು ಗಣ್ಯಾತಿಗಣ್ಯರು ಪಾಲ್ಗೊಂಡಿದ್ದರು. ಬಹುಕೋಟಿ ಮೇವು ಹಗರಣ ಪ್ರಕರಣದಲ್ಲಿ ಜೈಲುವಾಸಿಯಾಗಿರುವ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ ಅವರು ಪೆರೋಲ್ ಪಡೆದುಕೊಂಡು, ಮಗನ ಮದುವೆಯಲ್ಲಿ ಪಾಲ್ಗೊಂಡಿದ್ದರು.

ಆದರೆ, ಮದುವೆಯಾದ 6 ತಿಂಗಳೀನಲ್ಲಿ ಹಿಂದೂ ವಿವಾಹ ಕಾಯ್ದೆಯಡಿಯಲ್ಲಿ ಪರಸ್ಪರ ಹೊಂದಾಣಿಕೆ ಇಲ್ಲದ ಕಾರಣ ವಿವಾಹ ವಿಚ್ಛೇದನ ಕೋರಿ ಅರ್ಜಿ ಹಾಕಲಾಗಿತ್ತು ಇಬ್ಬರ ನಡುವೆ ಸಾಮರಸ್ಯ ಇರಲಿಲ್ಲ ಎಂದು ತೇಜ್ ಪ್ರತಾಪ್ ಪರ ವಕೀಲ ಯಶವಂತಕುಮಾರ್ ಶರ್ಮ ವಾದಿಸಿದ್ದರು.

ಮಗನ ಸಂಸಾರ ಸರಿ ಮಾಡಿದ ರಾಬ್ರಿ ದೇವಿ

ಮಗನ ಸಂಸಾರ ಸರಿ ಮಾಡಿದ ರಾಬ್ರಿ ದೇವಿ

ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ ಬಳಿಕ ಮನೆ ತೊರೆದಿದ್ದ ತೇಜ್ ಪ್ರತಾಪ್ ಅವರು ವಾರಣಾಸಿಗೆ ತೆರಳಿದ್ದರು. ಯಾವುದೇ ಕಾರಣಕ್ಕೂ ಮತ್ತೆ ಐಶ್ವರ್ಯ ಜೊತೆ ಸಂಸಾರ ಸಾಧ್ಯವಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿದ್ದರು.
ಆದರೆ, ಮಗನ ಮಾತು ಒಪ್ಪಲು ತಯಾರಿಲ್ಲದ ತೇಜ್ ಪ್ರತಾಪ್ ತಾಯಿ ರಾಬ್ರಿ ದೇವಿ, ಸೊಸೆಯ ಪರವಾಗಿ ನಿಂತಿದ್ದಾರೆ. ಜೊತೆಗೆ, ವಿಚ್ಛೇದನಕ್ಕೆ ಲಾಲೂ ಪ್ರಸಾದ್ ಯಾದವ್ ಕೂಡಾ ಸಮ್ಮತಿಸುತ್ತಿಲ್ಲ. ಹೀಗಾಗಿ, ಲಾಲೂ ಕುಟುಂಬದ ಕೌಟುಂಬಿಕ ಸಮಸ್ಯೆ, ದಿನದಿಂದ ದಿನಕ್ಕೆ ಕಗ್ಗಂಟಾಗಿದ್ದ ಸಮಸ್ಯೆಯನ್ನು ಹೇಗೋ ನಿಭಾಯಿಸಿದ್ದಾರೆ. ಮನೆಯಲ್ಲಿ ಶಾಂತಿಗಾಗಿ ಕುಟುಂಬಸ್ಥರು ದೇವರ ಮೊರೆಹೋಗಿದ್ದು, ವಿವಿಧ ಹೋಮ ಹವನಗಳನ್ನು ನಡೆಸಿದ್ದು ಈಗ ಫಲ ನೀಡಿದೆ.

ವಿಜೃಂಭಣೆಯಿಂದ ನಡೆದಿದ್ದ ಮದುವೆ

ವಿಜೃಂಭಣೆಯಿಂದ ನಡೆದಿದ್ದ ಮದುವೆ

ಬಿಹಾರದ ಮಾಜಿ ಮುಖ್ಯಮಂತ್ರಿ ದುರ್ಗಾ ಪ್ರಸಾದ್ ರೈ ಅವರ ಮೊಮ್ಮಗಳು, ರಾಷ್ಟ್ರೀಯ ಜನತಾದಳದ ಮುಖಂಡ, ಬಿಹಾರದ ಪರ್ಸಾ ಕ್ಷೇತ್ರದ ಶಾಸಕರೂ ಆಗಿರುವ ಚಂದ್ರಿಕಾ ರೈ ಮಗಳು ಐಶ್ವರ್ಯ ಜೊತೆ, ಲಾಲೂ ಮೊದಲ ಮಗ ತೇಜ್ ಪ್ರತಾಪ್ ಮದುವೆ ಧಾಂಧೂಂ ಎಂದು ಆರು ತಿಂಗಳ ಹಿಂದೆ ರಾಜಧಾನಿ ಪಾಟ್ನಾದಲ್ಲಿ ನಡೆದಿತ್ತು. ತಾಯಿ ರಾಬ್ರಿ ದೇವಿ ಒಂದು ವರ್ಷ ವಧುವಿಗಾಗಿ ಹುಡುಕಾಟ ನಡೆಸಿದ್ದರು. ಇದೇ ವರ್ಷ ಮೇ ಹನ್ನೆರಡರಂದು ನಡೆದ ಅದ್ದೂರಿ ಮದುವೆ ಕಾರ್ಯಕ್ರಮದಲ್ಲಿ ಬಿಹಾರದ ಸಿಎಂ ನಿತೀಶ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಲಾಲೂ ಕೂಡ ಪೆರೋಲ್ ಪಡೆದುಕೊಂಡು ಮಗನ ಮದುವೆಯನ್ನು ನಡೆಸಿಕೊಟ್ಟಿದ್ದರು.

ಸಂಸಾರದ ಗುಟ್ಟು ಟ್ವಿಟ್ಟರಲ್ಲಿ ರಟ್ಟಾಗಿತ್ತು

ಸಂಸಾರದ ಗುಟ್ಟು ಟ್ವಿಟ್ಟರಲ್ಲಿ ರಟ್ಟಾಗಿತ್ತು

"ನಮ್ಮಿಬ್ಬರ ನಡುವೆ ಯಾವುದೇ ಹೊಂದಾಣಿಕೆಯಿಲ್ಲ. ಇಬ್ಬರೂ ಒಟ್ಟಾಗಿ ಬದುಕುವುದು ಸಾಧ್ಯವಿಲ್ಲದ ಮಾತು. ನಮ್ಮಿಬ್ಬರ ಕುಟುಂಬದವರು ತಮ್ಮ ರಾಜಕೀಯ ಉಪಯೋಗಕ್ಕಾಗಿ ನಮ್ಮಿಬ್ಬರ ಮದುವೆ ಮಾಡಿದರು" ಎಂದು ತೇಜ್ ಪ್ರತಾಪ್ ಇತ್ತೀಚೆಗೆ ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.

"ಪ್ರೀತಿಯ ದಾರ ಎಂದಿಗೂ ಹರಿಯದಿರಲಿ, ಅದು ಹರಿದರೆ ಮತ್ತೆ ಸೇರಿಸುವುದಕ್ಕೆ ಸಾಧ್ಯವೇ ಇಲ್ಲ" ಎಂಬರ್ಥದ ದ್ವಿಪದಿಯನ್ನು ತಮ್ಮ ಟ್ವಿಟ್ಟರ್ ನಲ್ಲಿ ತೇಜ್ ಪ್ರತಾಪ್ ಶೇರ್ ಮಾಡಿದ್ದಾರೆ. ಈ ಮೂಲಕ ತಾವು ಮತ್ತೆ ಐಶ್ವರ್ಯ ಜೊತೆ ಒಂದಾಗುವುದಿಲ್ಲ ಎಂಬ ಸುಳಿವು ನೀಡಿದ್ದರು.

English summary
Lalu Prasad Yadav’s older son Tej Pratap Yadav, who had hugely upset his family over his decision to divorce his wife of six months, has withdrawn the divorce petition. Yadav had stunned his friends and family earlier this month when he moved Patna’s family court to end his marriage with Aishwarya Rai.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X