• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

1 ತರಗತಿ, 3 ಶಿಕ್ಷಕರು, ಬೋರ್ಡ್ ಮೇಲೆ ಹಿಂದಿ, ಉರ್ದು ಕಲಿಕೆ!

|
Google Oneindia Kannada News

ಪಾಟ್ನ, ಮೇ 17:ಕರ್ನಾಟಕದಲ್ಲಿ ನಿನ್ನೆಯಷ್ಟೇ ಶಾಲೆಗಳು ಆರಂಭಗೊಂಡಿವೆ. ಇದರ ಬೆನ್ನಲ್ಲೇ ಒಂದು ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಯಾಕೆಂದರೆ ಇಲ್ಲಿ ಒಂದೇ ತರಗತಿಯಲ್ಲಿ ಮೂರು ಶಿಕ್ಷಕರು ಪಾಠ ಮಾಡಿದ್ದಾರೆ. ಬಿಹಾರ ಅಜಂಪುರದ ಆದರ್ಶ ಮಾಧ್ಯಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು ಈ ವಿಡಿಯೋ ಭಾರೀ ವೈರಲ್ ಆಗಿದೆ. ಇದು ಸರ್ಕಾರಿ ಶಾಲೆಗಳ ಪರಿಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ.

ವಿಡಿಯೊದಲ್ಲಿ ನೋಡಿದರೆ ಬಿಹಾರದ ಸರ್ಕಾರಿ ಶಾಲೆಯ ಸ್ಥಿತಿಯು ಸಂಪೂರ್ಣವಾಗಿ ವಿಷಾದನೀಯವಾಗಿದೆ. ವೈರಲ್ ಆಗಿರುವ ವಿಡಿಯೊ, ಶಾಲೆಯಲ್ಲಿ ಒಂದೇ ಕಪ್ಪು ಹಲಗೆಯ ಎರಡೂ ಬದಿಯಲ್ಲಿ ವಿದ್ಯಾರ್ಥಿಗಳಿಗೆ ಹಿಂದಿ ಮತ್ತು ಉರ್ದು ಎರಡನ್ನೂ ಒಮ್ಮೆಗೆ ಹೇಳಿಕೊಡುವುದನ್ನು ಕಾಣಬಹುದು.

ಇಬ್ಬರು ಶಿಕ್ಷಕರು ಏಕಕಾಲದಲ್ಲಿ ತಮ್ಮ ತರಗತಿಗಳನ್ನು ಮುಂದುವರಿಸುವುದರಿಂದ ಏನು ಅನುಸರಿಸಬೇಕೆಂದು ಅರ್ಥವಾಗದ ವಿದ್ಯಾರ್ಥಿಗಳ ಗುಂಪನ್ನು ಒಬ್ಬ ಹಳೆಯ ಶಿಕ್ಷಕರು ಸಮಾಧಾನಪಡಿಸುವುದನ್ನು ಕಾಣಬಹುದು. ಆದರೆ ಇದೆಲ್ಲದರಿಂದ ಉದ್ಭವಿಸುವ ಪ್ರಶ್ನೆಯೆಂದರೆ, ಒಂದೇ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಒಟ್ಟಿಗೆ ಕಲಿಸುವುದು ಏಕೆ?

ಇಲ್ಲಿ ತರಗತಿ ಮಾತ್ರವಲ್ಲದೇ ಎರಡು ಶಾಲೆಗಳ ಮಕ್ಕಳನ್ನು ಒಟ್ಟಿಗೆ ಸೇರಿಸಲಾಗಿದೆವಿಶ್ವನಾಥ್ ಚೌಧರಿ ಆದರ್ಶ್ ಮಿಡ್ಲ್ ಸ್ಕೂಲ್ ಹಾಗೂ ಇನ್ನೊಂದು ಉರ್ದು ಪ್ರಾಥಮಿಕ ಶಾಲೆ. 2017 ರಲ್ಲಿ ಮಣಿಹಾರ್ ಬ್ಲಾಕ್‌ನಲ್ಲಿರುವ ಉರ್ದು ಪ್ರಾಥಮಿಕ ಶಾಲೆಯನ್ನು ವಿಶ್ವನಾಥ್ ಚೌಧರಿ ಆದರ್ಶ್ ಮಿಡ್ಲ್ ಸ್ಕೂಲ್ ಅಜಂಪುರ ಗೋಲಾಕ್ಕೆ ಸ್ಥಳಾಂತರಿಸಲಾಯಿತು ಎಂಬುದು ಗಮನಾರ್ಹ. ಅಧಿಕಾರಿಗಳು ಸ್ಥಳಾಂತರದ ವೇಳೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪವಿದೆ. ವಾಸ್ತವವಾಗಿ ಶಾಲೆಯು ಈಗಾಗಲೇ ಕಡಿಮೆ ಕೊಠಡಿಗಳನ್ನು ಹೊಂದಿತ್ತು. ಅಂತಹ ಪರಿಸ್ಥಿತಿಯಲ್ಲಿ, ಈಗ ಒಂದೇ ತರಗತಿಯಲ್ಲಿ ಎರಡು ವಿಷಯಗಳ ತರಗತಿಗಳು ಏಕಕಾಲದಲ್ಲಿ ನಡೆಯುತ್ತಿವೆ.

ಆದರ್ಶ ಮಾಧ್ಯಮಿಕ ಶಾಲೆಯ ಶಿಕ್ಷಕಿ ಕುಮಾರಿ ಪ್ರಿಯಾಂಕಾ ಅವರ ಪ್ರಕಾರ, ಶಾಲಾ ಶಿಕ್ಷಣ ಇಲಾಖೆಯು ಉರ್ದು ಪ್ರಾಥಮಿಕ ಶಾಲೆಯನ್ನು ತಮ್ಮ ಸಂಸ್ಥೆಗೆ ಸ್ಥಳಾಂತರಿಸಿದೆ. ಹೀಗಾಗಿ ಎರಡು ಶಾಲಾ ಮಕ್ಕಳನ್ನು ಪ್ರತ್ಯೇಕವಾಗಿ ಪಾಠಮಾಡುವಷ್ಟು ಕೊಠಡಿಗಳಿಲ್ಲ. ಹೀಗಾಗಿ ಒಂದೇ ಕೊಠಡಿಯಲ್ಲಿ ಪಾಠ ಮಾಡಲಾಗುತ್ತದೆ ಎಮದು ಹೇಳಿದ್ದಾರೆ. "ನಮ್ಮ ಶಾಲೆಯಲ್ಲಿ ಸಾಕಷ್ಟು ತರಗತಿ ಕೊಠಡಿಗಳಿಲ್ಲ, ಅದಕ್ಕಾಗಿಯೇ ನಾವು ಒಂದೇ ಕೊಠಡಿಯಲ್ಲಿ ವಿದ್ಯಾರ್ಥಿಗಳಿಗೆ ಕಲಿಸುತ್ತೇವೆ" ಎಂದು ಆದರ್ಶ ಮಿಡಲ್ ಸ್ಕೂಲ್‌ನ ಶಿಕ್ಷಕಿ ಪ್ರಿಯಾಂಕಾ ಹೇಳುತ್ತಾರೆ.

ಶಾಲೆಯ ಕುರಿತು ಜಿಲ್ಲಾ ಶಿಕ್ಷಣಾಧಿಕಾರಿ ಕಾಮೇಶ್ವರ ಗುಪ್ತಾ ಅವರನ್ನು ಪ್ರಶ್ನಿಸಿದಾಗ, 'ಆದರ್ಶ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿದ್ದು ಅದಕ್ಕಾಗಿ ಉರ್ದು ಪ್ರಾಥಮಿಕ ಶಾಲೆಗೆ ಒಂದು ಕೊಠಡಿ ನೀಡಲಾಗಿದೆ. ಹೀಗಾಗಿ ವಿವಿಧ ವರ್ಗಗಳ ಮಕ್ಕಳಿಗೆ ಒಂದೇ ಕೊಠಡಿಯಲ್ಲಿ ಒಂದೇ ಕಪ್ಪು ಹಲಗೆಯಲ್ಲಿ ಕಲಿಸಲಾಗುತ್ತಿದೆ' ಎಂದಿದ್ದಾರೆ.

English summary
A video of three teachers teaching in the same classroom at an Adarsha secondary school in Bihar is viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X