ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಸುಶೀಲ್ ಮೋದಿ

|
Google Oneindia Kannada News

ಪಾಟ್ನಾ, ಡಿ. 7: ಬಿಹಾರದಲ್ಲಿ ನಿತೀಶ್ ಸರ್ಕಾರ್ 7.0 ಸಂಪುಟಕ್ಕೆ ಸೇರ್ಪಡೆಯಾಗದ ಮಾಜಿ ಉಪ ಮುಖ್ಯಮಂತ್ರಿ, ಹಿರಿಯ ಬಿಜೆಪಿ ಮುಖಂಡ ಸುಶೀಲ್ ಮೋದಿ ಅವರು ಇಂದು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದೇ ಮೊದಲ ಬಾರಿಗೆ ಡಿಸಿಎಂ ಹುದ್ದೆಯಿಂದ ಮುಕ್ತರಾದ ಸುಶೀಲ್ ಮೋದಿ ಅವರು ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ ಬಯಸಿದ್ದರು.

ಅಕ್ಟೋಬರ್ 8ರಂದು ಲೋಕ ಜನಶಕ್ತಿ ಪಕ್ಷ(ಎಲ್ ಜೆಪಿ)ದ ಸ್ಥಾಪಕ, ಎಲ್ ಜೆಪಿ ಏಕೈಕ ಸಂಸದ ರಾಮ್ ವಿಲಾಸ್ ಪಾಸ್ವಾನ್ ನಿಧನರಾದರು. ಪಾಸ್ವಾನ್ ನಿಧನದಿಂದ ತೆರವಾದ ಸ್ಥಾನಕ್ಕೆ ನವೆಂಬರ್ 19ರಂದು ಅಧಿಸೂಚನೆಯನ್ನು ಹೊರಡಿಸಲಾಗಿದ್ದು, ಡಿಸೆಂಬರ್ 14ರಂದು ಮತದಾನ ಹಾಗೂ ನಂತರ ಮತ ಎಣಿಕೆ ನಿಗದಿಯಾಗಿತ್ತು. ಡಿಸೆಂಬರ್ 7ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನಾಂಕವಾಗಿತ್ತು. ವಿಪಕ್ಷಗಳು ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ, ಸುಶೀಲ್ ಹಾದಿ ಸುಗುಮವಾಯಿತು.

Sushil Kumar Modi Elected Unopposed To Rajya Sabha

ಡಿಸೆಂಬರ್ 2ರಂದು ನಾಮಪತ್ರ ಸಲ್ಲಿಸಿದ್ದ ಸುಶೀಲ್ ಅವರು ಯಾವುದೇ ಪ್ರತಿಸ್ಪರ್ಧೆಯಿಲ್ಲದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೋಗ ಅಧಿಕೃತವಾಗಿ ಘೋಷಿಸಿದೆ.

ಕಳೆದ ವರ್ಷ ರಾಜ್ಯಸಭಾ ಸ್ಥಾನಕ್ಕೆ ಪಾಸ್ವಾನ್ ಅವರು ಆಯ್ಕೆಯಾಗಿದ್ದರು. 2019ರಲ್ಲಿ ರವಿಶಂಕರ್ ಪ್ರಸಾದ್ ಅವರು ಲೋಕಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸ್ಥಾನ ಖಾಲಿಯಾಗಿತ್ತು. ಈಗ ಪಾಸ್ವಾನ್ ಅವರಿಂದ ತೆರವಾದ ಸ್ಥಾನ ತುಂಬಲಿದ್ದಾರೆ.

English summary
Former Bihar Deputy Chief Minister and senior Bharatiya Janata Party (BJP) leader Sushil Kumar Modi was on December 7 elected unopposed to Rajya Sabha as the Opposition had withdrawn from entering the contest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X