ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದಲ್ಲಿ ಚುನಾವಣೆ ಗೆದ್ದ ನಟ ಸುಶಾಂತ್ ಸಿಂಗ್ ಕಸಿನ್

|
Google Oneindia Kannada News

ಪಾಟ್ನಾ, ನ. 11: ಬಾಲಿವುಡ್ ನಟ ಸುಶಾಂತ್ ಸಿಂಗ್ ಅವರ ನಿಧನದಿಂದ ಶೋಕತಪ್ತರಾಗಿದ್ದ ಬಿಹಾರದಲ್ಲಿರುವ ಅವರ ಕುಟುಂಬಕ್ಕೆ ಇಂದು ಸಂತಸದ ಸುದ್ದಿ ಸಿಕ್ಕಿದೆ. ಸುಶಾಂತ್ ಅವರ ಕಸಿನ್ ನೀರಜ್ ಅವರು ಈ ಬಾರಿ ವಿಧಾನಸಭೆಗೆ ಆಯ್ಕೆ ಬಯಸಿ ಸ್ಪರ್ಧಿಸಿ, ಗೆದ್ದಿದ್ದಾರೆ.

ಸುಶಾಂತ್ ಸಿಂಗ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಹಾಗೂ ಬಿಹಾರ ಪೊಲೀಸರ ನಡುವೆ ತಿಕ್ಕಾಟ ನಡೆದಿತ್ತು. ನಂತರ ಸುಶಾಂತ್ ಸಿಂಗ್ ಪ್ರಕರಣವನ್ನು ಬಿಹಾರ ಚುನಾವಣೆಯಲ್ಲಿ ಮುಖ್ಯವಿಷಯವಾಗಿ ಪಕ್ಷಗಳು ಬಳಸಿಕೊಳ್ಳಲಿವೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಬಿಜೆಪಿ ಸೇರಿದಂತೆ ಶಿವಸೇನಾ ಕೂಡಾ ಬಿಹಾರ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಈ ಬಗ್ಗೆ ಹೆಚ್ಚಿನ ಮಹತ್ವ ನೀಡಲಿಲ್ಲ.

ಬಿಹಾರದಲ್ಲಿ 7ನೇ ಬಾರಿ ಸಿಎಂ ಆಗಿರುವ ನಿತೀಶ್ ಕುಮಾರ್ ರಾಜಕೀಯ ಇತಿಹಾಸ ಬಿಹಾರದಲ್ಲಿ 7ನೇ ಬಾರಿ ಸಿಎಂ ಆಗಿರುವ ನಿತೀಶ್ ಕುಮಾರ್ ರಾಜಕೀಯ ಇತಿಹಾಸ

ಸುಶಾಂತ್ ಸಿಂಗ್ ರಜಪೂತ್ ಅವರ ಕಸಿನ್ ನೀರಜ್ ಕುಮಾರ್ ಸಿಂಗ್ ಅಲಿಯಾಸ್ ಬಬ್ಲು ಅವರು ಬಿಜೆಪಿ ಟಿಕೆಟ್ ಪಡೆದು ಛಾತಾಪುರ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಸಮೀಪದ ಪ್ರತಿಸ್ಪರ್ಧಿ ಎಐಎಂಐಎಂನ ಆಲಂ ಹಾಗೂ ಆರ್ ಜೆಡಿಯ ವಿಪಿನ್ ಕುಮಾರ್ ಅವರನ್ನು ಹಿಂದಿಕ್ಕಿ ನೀರಜ್ ಗೆಲುವು ದಾಖಲಿಸಿದ್ದಾರೆ.

Sushant Singh Rajputs cousin Neeraj Kumar Singh wins in Chhatarpur

ಗೆಲುವಿನ ಬಗ್ಗೆ ಸುಶಾಂತ್ ಕುಟುಂಬದ ಮಿತ್ರ ನಿಲೋತ್ಪಲ್ ಅವರು ಟ್ವೀಟ್ ಮಾಡಿ ಎಸ್ಎಸ್ಆರ್ ಅವರ ಸೋದರ ನೀರಜ್ ಬಬ್ಲು ಗೆಲುವು ಸಾಧಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲೇ ಅವರಿಗೆ ಹೃದಯಬೇನೆ ಕಾಣಿಸಿಕೊಂಡಿತ್ತು. ಆಂಜಿಯೋಪ್ಲಾಸ್ಟಿ ಮಾಡಲಾಗಿತ್ತು ಎಂದಿದ್ದಾರೆ.

ಸುಮಾರು 14 ಗಂಟೆಗಳ ಮತ ಎಣಿಕೆ ನಂತರ ಮಹಾಘಟಬಂಧನ್ ವಿರುದ್ಧ ಎನ್ಡಿಎ ಬಹುಮತ ಸಾಧಿಸಿತ್ತು 122 ದಾಟಿ, 125 ಸ್ಥಾನ ಗಳಿಸಿದ್ದು, ನಿತೀಶ್ ಕುಮಾರ್ 5ನೇ ಬಾರಿ ಸಿಎಂ ಆಗಿ ಪದಗ್ರಹಣಕ್ಕೆ ಸಿದ್ಧತೆ ನಡೆಸಿದ್ದಾರೆ.

ಬಿಹಾರದ ಸುಪೌಲ್ ಜಿಲ್ಲೆಯ ಕೋಶಿ ಪ್ರಾಂತ್ಯದ ಛಾತ್ ಪುರ್ ವಿಧಾನಸಭಾ ಕ್ಷೇತ್ರದಲ್ಲಿ 2015ರಲ್ಲೂ ಬಿಜೆಪಿಯ ನೀರಜ್ ಕುಮಾರ್ ಗೆಲುವು ಸಾಧಿಸಿದ್ದರು. ಆರ್ ಜೆಡಿಯಲ್ಲಿದ್ದ ಆಲಂ ವಿರುದ್ಧ 9,292 ಮತಗಳ ಅಂತರ ಜಯ ಲಭಿಸಿತ್ತು.

Recommended Video

ಇವ್ರೆ ನೋಡಿ BJPಯ Lucky charm !! | Oneindia Kannada

2020ರಲ್ಲಿ ನೀರಜ್ 93570 ಮತಗಳು (46.39% ಮತ), ವಿಪಿನ್ 72712 ಮತ(36.18%) ಮತ ಪಡೆದಿದ್ದಾರೆ,. ನೀರಜ್ ತಮ್ಮ ಶಾಸಕ ಸ್ಥಾನ ಉಳಿಸಿಕೊಂಡಿದ್ದಾರೆ.

English summary
Bollywood actor Sushant Singh Rajput's cousin Neeraj Kumar Singh wins in Chhatarpur seat of Bihar elections result 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X