ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋನಿಯಾ, ತೇಜಸ್ವಿ ಭೇಟಿ: ಬಿಹಾರದಿಂದ ಬಿಜೆಪಿಗೆ ಗೇಟ್‌ ಪಾಸ್‌?

|
Google Oneindia Kannada News

ಪಾಟ್ನಾ, ಆಗಸ್ಟ್‌ 13: ಬಿಹಾರದಲ್ಲಿ ಅಧಿಕಾರವನ್ನು ನಿತೀಶ್‌ ಕುಮಾರ್‌ ಹಾಗೂ ತೇಜಸ್ವಿ ಯಾದವ್‌ ಅವರು ವಹಿಸಿಕೊಂಡ ನಂತರ ಮೊದಲ ಬಾರಿಗೆ ದೆಹಲಿಗೆ ಬಿಹಾರದ ನೂತನ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಎಡಪಕ್ಷಗಳ ನಾಯಕರನ್ನು ಭೇಟಿಯಾಗಿದ್ದಾರೆ. ಈ ಮೂಲಕ ದೇಶದ ರಾಜಕೀಯಕ್ಕೆ ಬೇರೆಯದೇ ಆದ ಸೂಚನೆ ನೀಡಿದ್ದಾರೆ.

ಬಿಹಾರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ಮೂಲಕ ಮಹಾಘಟಬಂಧನ್‌ನ ಎಲ್ಲ ನಾಯಕರು ದೇಶಕ್ಕೆ ಬದಲಾವಣೆಯ ದಿಕ್ಕು ತೋರಿಸಿವೆ. ಸರ್ಕಾರ ರಚನೆಯಾದ ಮೇಲೆ ತೇಜಸ್ವಿ ಯಾದವ್‌ ಅವರು ಸೋನಿಯಾ ಅವರನ್ನು ಭೇಟಿಯಾಗಿ ಸಂತಸ ಹಂಚಿಕೊಂಡಿದ್ದಾರೆ. ಕಾಂಗ್ರೆಸ್‌ನ ಮೂಲಗಳ ಪ್ರಕಾರ ಈಗ ಬಿಹಾರದಲ್ಲಿ ಸಚಿವ ಸ್ಥಾನಗಳ ಸಂಖ್ಯೆಯ ಬಗ್ಗೆ ಈಗ ಮಾತುಕತೆಗಳು ಶುರುವಾಗಿವೆ. ಕಾಂಗ್ರೆಸ್ ನಾಲ್ವರು ಸಚಿವರನ್ನು ಮಾಡಲು ಉತ್ಸುಕವಾಗಿದೆ. ಆದರೆ ಆರ್‌ಜೆಡಿ, ಮಹಾಮೈತ್ರಿಕೂಟ ಕೋಟಾದಿಂದ ಇಬ್ಬರಿಗಿಂತ ಹೆಚ್ಚು ಅವಕಾಶ ನೀಡಲು ಹಿಂಜರಿಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬಿಹಾರದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸುತ್ತೇವೆ: ಡಿಸಿಎಂ ತೇಜಸ್ವಿ ಯಾದವ್ಬಿಹಾರದಲ್ಲಿ 10 ಲಕ್ಷ ಉದ್ಯೋಗ ಸೃಷ್ಟಿಸುತ್ತೇವೆ: ಡಿಸಿಎಂ ತೇಜಸ್ವಿ ಯಾದವ್

ಬಿಹಾರದ ಎಐಸಿಸಿ ಉಸ್ತುವಾರಿ ಭಕ್ತ ಚರಣ್ ದಾಸ್ ಅವರು ಕಳೆದ ವರ್ಷ ತಮ್ಮನ್ನು ದೂಷಿಸಿದ್ದ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರನ್ನು ಭೇಟಿ ಮಾಡಿ ಸಚಿವ ಸಂಪುಟ ರಚನೆಯ ಬಗ್ಗೆ ಚರ್ಚಿಸಿದ್ದರು. ಪರ್ಯಾಯವಾಗಿ ಇದೇ ವೇಳೆ ತೇಜಸ್ವಿ ಯಾದವ್‌ ಅವರು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮತ್ತು ಅವರ ಸಿಪಿಐ ಸಹವರ್ತಿ ಡಿ ರಾಜಾ ಅವರನ್ನು ಭೇಟಿ ಮಾಡಿದ್ದರು. ಬಳಿಕ ಮೈತ್ರಿಯಿಂದ ಹೊರಬಂದ ತೇಜಸ್ವಿ ಯಾದವ್‌ ಅವರು ಬಿಜೆಪಿಯೊಂದಿಗಿನ ಸಂಬಂಧವನ್ನು ಕಡಿದುಕೊಂಡ ನಂತರ ನಿತೀಶ್ ಕುಮಾರ್ ಅವರು ತಮ್ಮನ್ನು ಬೆಂಬಲಿಸಿದ್ದಕ್ಕಾಗಿ ಅವರೆಲ್ಲರೂ ಆರ್‌ಜೆಡಿಯನ್ನು ಅಭಿನಂದಿಸಿದರು. ನಿತೀಶ್ ಕುಮಾರ್‌ ಅವರು ಸಮಯೋಚಿತ ನಿರ್ಧಾರ ತೆಗೆದುಕೊಂಡಿದ್ದಾರೆ. ಎನ್‌ಡಿಎಯಿಂದ ಹೊರನಡೆದ ಅವರ ಕ್ರಮವು ಬಿಜೆಪಿಯ ಮುಖದ ಮೇಲೆ ಕಪಾಳಮೋಕ್ಷ ಮಾಡಿದಂತಾಗಿದೆ ಎಂದು ಯಾದವ್‌ ಅವರು ಹೇಳಿದರು.

 ಅದೇ ದೃಶ್ಯ ಈಗ ದೇಶದಲ್ಲಿ ಕಾಣಿಸಲಿದೆ

ಅದೇ ದೃಶ್ಯ ಈಗ ದೇಶದಲ್ಲಿ ಕಾಣಿಸಲಿದೆ

ಬಿಹಾರ ಅಸೆಂಬ್ಲಿಯಲ್ಲಿ ಬಿಜೆಪಿಯನ್ನು ಹೊರತುಪಡಿಸಿ ಎಲ್ಲಾ ರಾಜಕೀಯ ಪಕ್ಷಗಳು ಈಗ ಒಗ್ಗೂಡಲಿವೆ. ಅದೇ ದೃಶ್ಯ ಈಗ ದೇಶದಲ್ಲಿ ಕಾಣಿಸಲಿದೆ. ಬೆಲೆ ಏರಿಕೆ, ನಿರುದ್ಯೋಗ, ಸಾಮಾಜಿಕ ಮತ್ತು ಕೋಮು ಉದ್ವಿಗ್ನತೆಯಿಂದ ಜನರು ಬೇಸತ್ತಿದ್ದಾರೆ. ಹಿಂದೂ ಮತ್ತು ಮುಸ್ಲಿಮರನ್ನು ಪರಸ್ಪರ ಎತ್ತಿಕಟ್ಟಿ ದೇಶವನ್ನು ಆಳಲು ಬಯಸುವವರಿಂದ ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಬಿಹಾರ ರಾಜಕೀಯ ಮತ್ತೊಮ್ಮೆ ಗರಿಗೆದರಿದ್ದು ದೇಶಕ್ಕೆ ಹೊಸ ದಿಕ್ಕನ್ನು ತೋರಿಸಿದೆ ಎಂದು ತೇಜಸ್ವಿ ಯಾದವ್‌ ಹೇಳಿದ್ದಾರೆ.

 ಬಿಜೆಪಿ ವಿರುದ್ಧ ತೇಜಸ್ವಿ ವಾಗ್ದಾಳಿ

ಬಿಜೆಪಿ ವಿರುದ್ಧ ತೇಜಸ್ವಿ ವಾಗ್ದಾಳಿ

ನಾನು ಮುಖ್ಯಮಂತ್ರಿ ಮೇಡಂ ಸೋನಿಯಾ ಗಾಂಧಿ, ಯೆಚೂರಿ, ರಾಜಾ ಮತ್ತು ದೀಪಂಕರ್ (ಭಟ್ಟಾಚಾರ್ಯ) ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತೇಜಸ್ವಿ ಯಾದವ್‌ ಅವರು ಹೇಳಿದರು. ಬಳಿಕ ಬಿಜೆಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಅವರು, ಕೇಂದ್ರದ ಆಡಳಿತ ಪಕ್ಷ ಬಿಜೆಪಿ ಇತರ ಪ್ರಾದೇಶಿಕ ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸುತ್ತಿದೆ. ಮಹಾರಾಷ್ಟ್ರ, ಮಧ್ಯಪ್ರದೇಶದಲ್ಲಿ ಏನಾಯಿತು? ಜಾರ್ಖಂಡ್‌ನಲ್ಲಿ ಏನಾಗುತ್ತಿದೆ. ಆ ಎಲ್ಲಾ ನಾಟಕವನ್ನು ನಾವು ನೋಡಿದ್ದೇವೆ. ಜೋ ದರೇಗಾ ಉಸ್ಕೋ ದರಾವ್, ಜೋ ಬಿಖೇಗಾ ಉಸ್ಕೋ ಖರೀದೋ... ಇದನ್ನೇ ಬಿಜೆಪಿ ಮಾಡುತ್ತದೆ. ಇಡಿ, ಸಿಬಿಐ ಹಾಗೂ ಆದಾಯ ತೆರಿಗೆ ಇಲಾಖೆಯೇ ಆಗಿರಲಿ ನಮ್ಮ ಸಾಂವಿಧಾನಿಕ ಸಂಸ್ಥೆಗಳು ಒಂದೊಂದಾಗಿ ನಾಶವಾಗುತ್ತಿವೆ. ಎಲ್ಲವೂ ಈಗ ಪೊಲೀಸ್ ಠಾಣೆಗಿಂತಲೂ ಹದಗೆಟ್ಟಿವೆ. ಆದರೆ ಅವರು ಯಾರನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ? ನಾವು ಬಿಹಾರದ ಜನರು ಭಯಪಡುವವರಲ್ಲ. ಬಿಹಾರಿ ಜೋ ಹೋತಾ ಹೈ... ಬಿಕೌ ನಹೀ, ಟಿಕೌ ಹೋತಾ ಹೈ... ನಮ್ಮ ಆತ್ಮಗೌರವದ ವಿಚಾರದಲ್ಲಿ ನಾವು ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತೇಜಸ್ವಿ ಯಾದವ್‌ ಹೇಳಿದ್ದಾರೆ.

 ನಿತೀಶ್ ಕುಮಾರ್ ಮುಗಿಸಲು ಅವರು ಬಯಸಿದ್ದರು

ನಿತೀಶ್ ಕುಮಾರ್ ಮುಗಿಸಲು ಅವರು ಬಯಸಿದ್ದರು

ಬಿಜೆಪಿ ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಹೊರಟಿದೆ. ಬಿಜೆಪಿಯವರು ಬಹುತೇಕ ಪ್ರಾದೇಶಿಕ ಪಕ್ಷಗಳು, ಹಿಂದುಳಿದ ವರ್ಗಗಳು ಮತ್ತು ದಲಿತರು ಹಾಗೂ ಹಿಂದುಳಿದ ಸಮುದಾಯದಿಂದ ಬಂದ ನಿತೀಶ್ ಕುಮಾರ್ ಅವರನ್ನು ಮುಗಿಸಲು ಬಯಸಿದ್ದರು. ಬಿಜೆಪಿಯವರು ನೀವು ರಾಮ್ ವಿಲಾಸ್‌ ಪಕ್ಷವನ್ನು ಎರಡು ಹೋಳು ಮಾಡಿದ್ದೀರಿ. ಅವರ ರಾಜಕೀಯವನ್ನು ಮುಗಿಸಲು ಬಯಸುತಿದ್ದೀರಿ. ಪ್ರಾದೇಶಿಕ ಪಕ್ಷಗಳು ಕೊನೆಗೊಂಡರೆ ವಿರೋಧ ಪಕ್ಷವೇ ಇರುವುದಿಲ್ಲ. ವಿರೋಧ ಪಕ್ಷವಿಲ್ಲದಿದ್ದರೆ ಪ್ರಜಾಪ್ರಭುತ್ವವು ಇರುವುದಿಲ್ಲ. ಪ್ರಜಾಪ್ರಭುತ್ವ ಇಲ್ಲದಿದ್ದರೆ, ದೇಶವನ್ನು ಆಳಲಾಗುತ್ತದೆ. ಆಡಳಿತವು ಸರ್ವಾಧಿಕಾರದಂತೆ ರಾಜನಂತೆ ಇರುತ್ತದೆ ಎಂದು ತೇಜಸ್ವಿ ಯಾದವ್‌ ಹೇಳಿದರು.

 ನಮ್ಮಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ: ತೇಜಸ್ವಿ

ನಮ್ಮಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ: ತೇಜಸ್ವಿ

ನಿತೀಶ್ ಅವರು ಈ ಹಿಂದೆ ಆರೋಪಗಳನ್ನು ಮಾಡಿರಬಹುದು. ಆದರೆ ಅವರು ಅದೇ ಸಮಾಜವಾದಿ ಸಿದ್ಧಾಂತಕ್ಕೆ ಸೇರಿದವರು. ಈ ಸಮಾಜವಾದಿ ಪರಂಪರೆ ನಮ್ಮ ಪೂರ್ವಜರು (ಪುರ್ಖೋನ್) ನಮಗೆ ನೀಡಿದ್ದಾಗಿದೆ. ಯಾರೂ ಅದನ್ನು ನಮ್ಮಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ. ನಾವು ಹೋರಾಡಿರಬಹುದು. ಆದರೆ ಅದು ರಾಷ್ಟ್ರೀಯ ಹಿತಾಸಕ್ತಿಯ ವಿಷಯಕ್ಕೆ ಬಂದಾಗ ಆಗಿದೆ. ಅದು ನಮ್ಮ ಜವಾಬ್ದಾರಿಯೂ ಆಗಿದೆ ಎಂದು ತೇಜಸ್ವಿ ಯಾದವ್‌ ಅವರು ಹೇಳಿದರು.

English summary
Bihar's new Deputy Chief Minister Tejaswi Yadav, who visited Delhi for the first time after the change of power in Bihar, met Congress president Sonia Gandhi and leaders of the Left parties.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X