ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪವಿತ್ರ ಗಂಗೆಯಲ್ಲಿ ತೇಲುತ್ತಿದೆ 150ಕ್ಕೂ ಹೆಚ್ಚು ಕೋವಿಡ್ ಸೋಂಕಿತರ ಶವ

|
Google Oneindia Kannada News

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ, ಹಾಗೆಯೇ ಕೊರೊನಾ ಸೋಂಕಿತರ ಅಂತ್ಯಕ್ರಿಯೆಗೂ ಸ್ಮಶಾನದೆದುರು ಸಾಲುಗಟ್ಟಿ ನಿಲ್ಲುವಂತಾಗಿದೆ. ಇನ್ನು ಗಂಗಾ ನದಿಯಲ್ಲಿ ಕೋವಿಡ್​ ಮೃತ ದೇಹಗಳು ತೇಲುತ್ತಿರುವ ದೃಶ್ಯಗಳು ಕಂಡು ಬಂದಿದೆ.

ಹಾಗೆಯೇ ಅಂತ್ಯಸಂಸ್ಕಾರ ನಡೆಸದೇ ಗಂಗಾ ನದಿಯಲ್ಲಿ ಕೊರೊನಾ ಸೋಂಕಿತರ ಶವಗಳನ್ನು ಎಸೆಯುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಅಂತ್ಯಕ್ರಿಯೆಗೆ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಹಿನ್ನಲೆ ಕುಟುಂಬಸ್ಥರು ಸೋಂಕಿತರ ಮೃತದೇಹವನ್ನು ಗಂಗಾ ನದಿಗೆ ಎಸೆಯುತ್ತಿದ್ದಾರೆ.

ಕೊರೊನಾ ಸೋಂಕು ತಡೆಗೆ ಡಬಲ್ ಮಾಸ್ಕ್: ಎಂಥಾ ಮಾಸ್ಕ್ ಧರಿಸಬೇಕು, ಎಂಥದ್ದು ಧರಿಸಕೂಡದು?ಕೊರೊನಾ ಸೋಂಕು ತಡೆಗೆ ಡಬಲ್ ಮಾಸ್ಕ್: ಎಂಥಾ ಮಾಸ್ಕ್ ಧರಿಸಬೇಕು, ಎಂಥದ್ದು ಧರಿಸಕೂಡದು?

ಬಿಹಾರದ ಬುಕ್ಸರ್​ ಗ್ರಾಮದ ಗಂಗಾ ನದಿ ತಟದಲ್ಲಿ 150ಕ್ಕೂ ಹೆಚ್ಚು ಮೃತದೇಹಗಳು ತೇಲುತ್ತಿದ್ದು, ಇದು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. ಈ ಕುರಿತು ತನಿಖೆ ನಡೆಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶದ ಪೂರ್ವದ ಗಡಿಗೆ ಹೊಂದಿಕೊಂಡಿರುವ ಬಕ್ಸಾರ್​ನ ಚೌಸಾ ಗ್ರಾಮದಲ್ಲಿ ಈ ಘಟನೆ ನಡೆಯುತ್ತಿದೆ.

Shocking: Over 150 Dead Bodies Of Coronavirus Patients Dumped In Ganga

ಶವಸಂಸ್ಥಾರದ ದುಬಾರಿ ವೆಚ್ಚದಿಂದ ಬಡವರು ಶವಗಳನ್ನು ನದಿಗೆ ತೇಲಿಬಿಡುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಶವ ಸಂಸ್ಕಾರಕ್ಕೆ 30 ರಿಂದ 40 ಸಾವಿರವನ್ನು ಕೇಳುತ್ತಿದ್ದಾರೆ. ಇದು ಬಡವರಿಗೆ ಬಲು ಹೊರೆಯಾಗಿದ್ದು, ವಿಧಿಯಿಲ್ಲದೇ ಅವರು ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಶವಗಳನ್ನು ಬೀದಿ ನಾಯಿಗಳು ಒಂದು ವೇಳೆ ತಿಂದರೆ ಅವುಗಳಿಗೂ ಸೋಂಕು ತಗಲುವ ಸಾಧ್ಯತೆ ಇದೆ ಎಂದಿದ್ದಾರೆ.

ಈ ಘಟನೆ ಬೆಳಕಿಗೆ ಬಂದಾಕ್ಷಣದ ಗ್ರಾಮಸ್ಥರು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ನದಿಯಲ್ಲಿ 30 ರಿಂದ 40 ಹೆಣಗಳು ತೇಲುತ್ತಿದ್ದು, ಬೀದಿನಾಯಿಗಳು ತಡದಲ್ಲಿಯೇ ಅಲೆಯುತ್ತಿವೆ.

ಇದರಲ್ಲಿ ಅನೇಕ ಶವಗಳು ಕೋವಿಡ್​ ಸೋಂಕಿತರದ್ದು ಎಂದು ಸಾಮಾಜಿಕ ಹೋರಾಟಗಾರ ಮತ್ತು ಸ್ಥಳೀಯ ವಕೀಲ ಅಶ್ವಿನ್ ವರ್ಮ ತಿಳಿಸಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.

English summary
Shocking visuals accessed by Times Now from Buxar, a Nagar Parishad city in the state of Bihar bordering eastern Uttar Pradesh show piles of bodies in river Ganga. Locals say that over 150 dead bodies which have been reported as COVID fatalities were dumped on the banks of the Ganga river.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X