ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿಕಾರ ಬದಲಾವಣೆ: ಅಮೆರಿಕ ನಂತರ ಬಿಹಾರದ ಸರದಿ ಎಂದ ಶಿವಸೇನಾ

|
Google Oneindia Kannada News

ಮುಂಬೈ, ನ. 9: ಅಮೆರಿಕದಲ್ಲಿ ಅಧಿಕಾರ ಬದಲಾವಣೆಯಾದಂತೆ, ಬಿಹಾರದಲ್ಲೂ ಈ ಬಾರಿ ಅಧಿಕಾರ ಬದಲಾಗಲಿದೆ. ಯುಎಸ್ಎನಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಬಂದ ಗತಿಯೇ ಬಿಜೆಪಿ-ಜೆಡಿಯು ಸರ್ಕಾರದ ನಿತೀಶ್ ಗೂ ಆಗಲಿದೆ ಎಂದು ಶಿವಸೇನಾ ತನ್ನ ಮುಖವಾಣಿ 'ಸಾಮ್ನಾ'ದ ಸಂಪಾದಕೀಯದಲ್ಲಿ ಬರೆದುಕೊಂಡಿದೆ.

ಪತ್ರಕರ್ತ ಅರ್ನಬ್ ಗೋಸ್ವಾಮಿ ಬಂಧನದ ವಿಚಾರದಲ್ಲಿ ಬಿಜೆಪಿ ಮಾಡುತ್ತಿರುವ ಆರೋಪಗಳನ್ನು ನೋಡುತ್ತಿದ್ದತೆ ಅಮೆರಿಕದಲ್ಲಿ ಮತದಾನದ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಆರೋಪಗಳಂತೆ ತೋರುತ್ತಿದೆ ಎಂದು ಇತ್ತೀಚೆಗೆ ಶಿವಸೇನಾ ವ್ಯಂಗ್ಯವಾಡಿತ್ತು.

ಬಿಜೆಪಿಯವರು ಡೊನಾಲ್ಡ್ ಟ್ರಂಪ್ ರೀತಿ ವರ್ತಿಸುತ್ತಿದ್ದಾರೆ: ಶಿವಸೇನಾ ಟೀಕೆಬಿಜೆಪಿಯವರು ಡೊನಾಲ್ಡ್ ಟ್ರಂಪ್ ರೀತಿ ವರ್ತಿಸುತ್ತಿದ್ದಾರೆ: ಶಿವಸೇನಾ ಟೀಕೆ

ಈಗ ಶಿವಸೇನಾ ಮುಖಂಡ ಸಂಜಯ್ ರಾವತ್ ಮಾತನಾಡಿ, ಕೇಂದ್ರ ಸರ್ಕಾರವು ನಮಸ್ತೆ ಟ್ರಂಪ್ ಕಾರ್ಯಕ್ರಮ ನಡೆಸಿ ಕೊರೊನಾವೈರಸ್ ಹರಡಲು ಕಾರಣವಾಗಿದೆ ಎಂದು ಆರೋಪ ಮಾಡಿದ್ದಾರೆ.

ಬಿಹಾರದಲ್ಲಿ ಎನ್ಡಿಎ ಸ್ಪಷ್ಟವಾಗಿ ಸೋಲಲಿದೆ. ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಅನುಭವಿಸಿದ ಸ್ಥಿತಿಯನ್ನು ಬಿಜೆಪಿಯವರು ಬಿಹಾರದಲ್ಲಿ ಅನುಭವಿಸಲಿದ್ದಾರೆ.

ಇಂಡಿಯಾ ಟುಡೇ ಸಮೀಕ್ಷೆಗಳ ಸಮೀಕ್ಷೆ: ತೇಜಸ್ವಿ ಬಣಕ್ಕೆ ಗೆಲುವು ಇಂಡಿಯಾ ಟುಡೇ ಸಮೀಕ್ಷೆಗಳ ಸಮೀಕ್ಷೆ: ತೇಜಸ್ವಿ ಬಣಕ್ಕೆ ಗೆಲುವು

ಅಮೆರಿಕದಲ್ಲಿ ಈಗಾಗಲೇ ಅಧಿಕಾರ ಬದಲಾಗಿದೆ

ಅಮೆರಿಕದಲ್ಲಿ ಈಗಾಗಲೇ ಅಧಿಕಾರ ಬದಲಾಗಿದೆ

ಅಮೆರಿಕದಲ್ಲಿ ಈಗಾಗಲೇ ಅಧಿಕಾರ ಬದಲಾಗಿದೆ. ಟ್ರಂಪ್ ಸರ್ಕಾರ ಬದಲಾವಣೆ ಬಯಸಿ ಅಲ್ಲಿನ ಮತದಾರರು ಭವಿಷ್ಯ ನಿರ್ಧರಿಸಿದಂತೆ, ಇಲ್ಲಿ ಕೂಡಾ ಸರ್ಕಾರ ಬದಲಾಗಲಿದೆ. ನರೇಂದ್ರ ಮೋದಿ, ನಿತೀಶ್ ಕುಮಾರ್ ಅವರನ್ನು ಹಿಂದಿಕ್ಕಿ ಯುವ ನಾಯಕ ತೇಜಸ್ವಿ ಮುಂದೆ ಬರಲಿದ್ದಾರೆ ಎಂದು ಎಲ್ಲಾ ಸಮೀಕ್ಷೆಗಳು ತಿಳಿಸಿವೆ. ಜನತೆ ತಮ್ಮ ಅಭಿಮತವನ್ನು ನೀಡಿದ್ದಾರೆ, ಮೋದಿ-ನಿತೀಶ್ ಮುಂದೆ ಮಂಡಿಯೂರಿಲ್ಲ ಎಂದು ಶಿವಸೇನಾ ಹೇಳಿದೆ.

ಸಮೀಕ್ಷೆಗಳ ಸಮೀಕ್ಷೆಯಲ್ಲಿ ತೇಜಸ್ವಿ ಮುಂದು

ಸಮೀಕ್ಷೆಗಳ ಸಮೀಕ್ಷೆಯಲ್ಲಿ ತೇಜಸ್ವಿ ಮುಂದು

ಇಂಡಿಯಾ ಟುಡೇ -ಆಕ್ಸಿಸ್ ಮೈ ಇಂಡಿಯಾ ಚುನಾವಣಾ ಸಮೀಕ್ಷೆ
ಮಹಾಘಟಬಂಧನ್: 139 ರಿಂದ 161, 39% ಮತ ಗಳಿಕೆ
ಎನ್ಡಿಎ: 69 ರಿಂದ 61, 44%
ಎಲ್ ಜೆಪಿ: 3 ರಿಂದ 5, 7%
ಜಿಡಿಎಸ್ ಎಫ್: 3 ರಿಂದ 5, 4%

ಸಮೀಕ್ಷೆಗಳ ಸಮೀಕ್ಷೆ: ತೇಜಸ್ವಿ ಬಣಕ್ಕೆ ಗೆಲುವು ಸಾಧಿಸಲಿದ್ದು, ಆರ್ ಜೆ ಡಿ-ಕಾಂಗ್ರೆಸ್ ಬಣ 133 ಸ್ಥಾನ ಪಡೆಯಲಿದ್ದು, ಎನ್ಡಿಎ 100 ಸ್ಥಾನ ಹಾಗೂ ಇತರೆ 11 ಪಡೆಯಲಿದೆ ಎಂದು ಬಂದಿದೆ ಹೀಗಾಗಿ, ಈ ಬಾರಿ ಬಿಹಾರದಲ್ಲಿ ಸರ್ಕಾರ ಬದಲಾಗಲಿದೆ ಎಂದು ಸಂಜಯ್ ರಾವತ್ ಹೇಳಿದರು.

ಇಂಡಿಯಾ ಟುಡೇ EXIT poll: ಬಿಹಾರದಲ್ಲಿ ತೇಜಸ್ವಿ ಸರ್ಕಾರಇಂಡಿಯಾ ಟುಡೇ EXIT poll: ಬಿಹಾರದಲ್ಲಿ ತೇಜಸ್ವಿ ಸರ್ಕಾರ

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ

243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಸಲಾಯಿತು. ಅಕ್ಟೋಬರ್ 28ರಂದು 16 ಜಿಲ್ಲೆಗಳ 71 ಕ್ಷೇತ್ರಗಳಿಗೆ 31,000 ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ, ನವೆಂಬರ್ 03ರಂದು ಎರಡನೆಯ ಹಂತದಲ್ಲಿ 17 ಜಿಲ್ಲೆಗಳಲ್ಲಿ 94 ಕ್ಷೇತ್ರಗಳಿಗೆ 42,000 ಮತಗಟ್ಟೆಗಳಲ್ಲಿ ಚುನಾವಣೆ, ನವೆಂಬರ್ 07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 1 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಚುನಾವಣೆ ನಡೆಸಲಾಯಿತು. ಅಂತಿಮವಾಗಿ ನವೆಂಬರ್10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ.

Recommended Video

Joe Biden ಅಧ್ಯಕ್ಷರಾಗುತ್ತಿದ್ದ ಹಾಗೆಯೇ ಭಾರತೀಯರಿಗೆ ಸಂತಸದ ಸುದ್ದಿ | Oneindia Kannada
2015ರಲ್ಲಿ ಬಂದಿದ್ದ ಫಲಿತಾಂಶ

2015ರಲ್ಲಿ ಬಂದಿದ್ದ ಫಲಿತಾಂಶ

2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ ಗಳಿಸಿದ್ದವು. ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ ಜೆ ಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.

English summary
Shiv Sena in its mouthpiece 'Saamana' said BJP will lose in Bihar like Donald Trump lost in US
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X