ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಟ್ನಾ ಸಾಹೀಬ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಸೋಲು

|
Google Oneindia Kannada News

ಪಾಟ್ನಾ, ಮೇ 23: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಪಾಟ್ನಾ ಸಾಹೀಬ್ ನಿಂದ ಲೋಕಸಭೆಗೆ ಸ್ಫರ್ದಿಸಿದ್ದ ಶಾಟ್‌ಗನ್ ಖ್ಯಾತಿಯ ಶತ್ರುಘ್ನ ಸಿನ್ಹಾ ಹೀನಾಯ ಸೋಲು ಅನುಭವಿಸಿದ್ದಾರೆ.(ಅಧಿಕೃತ ಘೋಷಣೆ ಬಾಕಿ ಇದೆ)

ಪ್ರತಿಷ್ಠಿತ ಲಕ್ನೋ ಕ್ಷೇತ್ರದಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ವಿರುದ್ಧ ಶಾಟ್‌ಗನ್ ಖ್ಯಾತಿಯ ಶತ್ರುಘ್ನ ಸಿನ್ಹಾ ಪತ್ನಿ ಪೂನಮ್ ಸಿನ್ಹಾ ಸ್ಪರ್ಧಿಸಿದ್ದಾರೆ. ಸಿನ್ಹಾ ಅವರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಪಕ್ಷಕ್ಕೆ ಬರಮಾಡಿಕೊಂಡಿದ್ದರು.

ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರುಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿದ್ದ ಸಿನ್ಹಾ ಅವರನ್ನು ಈ ಬಾರಿ ಬಿಜೆಪಿ ಮೂಲೆಗೆ ತಳ್ಳಿ ಪಾಟ್ನಾ ಸಾಹಿಬ್ ನಿಂದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರಿಗೆ ಟಿಕೆಟ್ ನೀಡಿತ್ತು. ಹೀಗಾಗಿ ಬೇಸರಗೊಂಡಿದ್ದ ಸಿನ್ಹಾ ಪಕ್ಷ ತೊರೆದು ಬಿಜೆಪಿ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದರು.

Shatrughan Sinha defeated by Ravi Shankar Prasad in Patna Sahib

ಅವರು ಏಪ್ರಿಲ್ 6ರಂದು ಬಿಜೆಪಿ ಸಂಸ್ಥಾಪನಾ ದಿನದಂದೇ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

English summary
Lok sabha election results 2019:Shatrughan Sinha defeated by Ravi Shankar Prasad in Patna Sahib. The seat was previously held by former actor Shatrugan Sinha, who moved from the BJP to the Congress in April.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X