ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ; ಗಂಗಾನದಿಯಲ್ಲಿ ಹಲವು ಶವ ಪತ್ತೆ, ಗ್ರಾಮಸ್ಥರಲ್ಲಿ ಆತಂಕ

|
Google Oneindia Kannada News

ಪಾಟ್ನಾ, ಮೇ 10; ಪಾಟ್ನಾದಲ್ಲಿ ಗಂಗಾ ನದಿ ತೀರದಲ್ಲಿ ಮೃತದೇಹಗಳು ಪತ್ತೆಯಾಗಿವೆ. ಈ ಕುರಿತು ಚರ್ಚೆಗಳು ನಡೆಯುತ್ತಿವೆ. ಇಷ್ಟೊಂದು ಶವಗಳು ಬಂದಿದ್ದು ಎಲ್ಲಿಂದ ಎಂಬುದು ಪ್ರಶ್ನೆಯಾಗಿದೆ. ನದಿಯಲ್ಲಿ ಶವಗಳು ತೇಲುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಬಿಹಾರದಲ್ಲಿ ಅಂತ್ಯ ಸಂಸ್ಕಾರದ ವೆಚ್ಚ ಅಧಿಕವಿದೆ. ಆದ್ದರಿಂದ ಜನರು ಬಲವಂತವಾಗಿ ಶವಗಳನ್ನು ಗಂಗಾ ನದಿಗೆ ಎಸೆಯುತ್ತಿದ್ದಾರೆ ಎಂಬ ಆರೋಪವೂ ಇದೆ. ಬಿಹಾರ ಬಕ್ಸರ್ ಜಿಲ್ಲೆಯ ಗ್ರಾಮಗಳ ನದಿ ತಟದಲ್ಲಿ ನೂರಾರು ಶವಗಳು ಪತ್ತೆಯಾಗಿವೆ.

ಗಂಗಾ ನದಿ ಬಳಸಿ ವಿದ್ಯುತ್ ಯೋಜನೆಗೆ ವಿರೋಧಿಸಿದ್ದೆ: ಉಮಾ ಗಂಗಾ ನದಿ ಬಳಸಿ ವಿದ್ಯುತ್ ಯೋಜನೆಗೆ ವಿರೋಧಿಸಿದ್ದೆ: ಉಮಾ

ಗ್ರಾಮಗಳ ಜನರು ನದಿ ತಟದ ಶವ ಸಂಸ್ಕಾರದ ಸ್ಥಳದಲ್ಲಿ ಅಧಿಕಾರಿಯನ್ನು ನೇಮಿಸಬೇಕು ಎಂದು ಒತ್ತಾಯಿಸಿದ್ದಾರೆ. ಶವಗಳು ಪತ್ತೆಯಾವ ಚೌಸಾ ಗ್ರಾಮ ಜಿಲ್ಲಾ ಕೇಂದ್ರ ಬಕ್ಸರ್‌ನಿಂದ ಸುಮಾರು 10 ಕಿ. ಮೀ. ದೂರದಲ್ಲಿದೆ. ಗ್ರಾಮಸ್ಥರು ಶವಗಳು ಪತ್ತೆಯಾದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಪವಿತ್ರ ಗಂಗೆಯಲ್ಲಿ ತೇಲುತ್ತಿದೆ 150ಕ್ಕೂ ಹೆಚ್ಚು ಕೋವಿಡ್ ಸೋಂಕಿತರ ಶವ ಪವಿತ್ರ ಗಂಗೆಯಲ್ಲಿ ತೇಲುತ್ತಿದೆ 150ಕ್ಕೂ ಹೆಚ್ಚು ಕೋವಿಡ್ ಸೋಂಕಿತರ ಶವ

Several Bodies Floating In Ganga At Chausa Village Of Bihar

ಸೋಮವಾರ ಬೆಳಗ್ಗೆ ಮೊದಲು ಜನರು ಗಂಗಾನದಿಯಲ್ಲಿ ಶವಗಳು ತೇಲುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ಬಳಿಕ ಸ್ಥಳೀಯ ಆಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಬೆಳಗ್ಗೆ ಸುಮಾರು 30-40 ಶವಗಳು ಪತ್ತೆಯಾಗಿವೆ.

ಉತ್ತರಾಖಂಡ್ ಹಿಮಪಾತ: ಗಂಗಾ ನದಿ ಹರಿಯುವ ಜಿಲ್ಲೆಗಳಲ್ಲಿ ಹೈಅಲರ್ಟ್ಉತ್ತರಾಖಂಡ್ ಹಿಮಪಾತ: ಗಂಗಾ ನದಿ ಹರಿಯುವ ಜಿಲ್ಲೆಗಳಲ್ಲಿ ಹೈಅಲರ್ಟ್

ಬಿಹಾರದಲ್ಲಿ ಶವಗಳ ಅಂತ್ಯ ಸಂಸ್ಕಾರಕ್ಕೆ 30 ರಿಂದ 40 ಸಾವಿರ ರೂ.ಗಳನ್ನು ಪಡೆಯಲಾಗುತ್ತಿದೆ. ಆದ್ದರಿಂದ ಬಡವರು ಗಂಗಾ ನದಿಗೆ ಶವಗಳನ್ನು ಎಸೆಯುತ್ತಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಹಲವು ಶವಗಳ ಪರೀಕ್ಷೆಗಳನ್ನು ನಡೆಸಲಾಗಿದ್ದು, ಕೋವಿಡ್ ವರದಿ ನಗೆಟಿವ್ ಬಂದಿದೆ.

English summary
Videos of several bodies floating in the Ganga at Chausa village of Buxar district in Bihar have gone viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X