ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಕ್ಯಾಬಿನೆಟ್ ಗೆ ಮೋದಿ: ಕಣ್ಣಿಟ್ಟಿರುವ ಖಾತೆ ಒಂದು, ಸಿಗುವುದು ಇನ್ನೊಂದು

|
Google Oneindia Kannada News

ಪಾಟ್ನಾ, ಡಿ 3: ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟ ಮತ್ತೆ ಅಧಿಕಾರಕ್ಕೆ ಏರಿದ ನಂತರ, ಉಪಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರುವ ಪ್ರಬಾವೀ ಮುಖಂಡ, ಸುಶೀಲ್ ಕುಮಾರ್ ಮೋದಿ, ಕೇಂದ್ರ ಸಚಿವ ಸಂಪುಟಕ್ಕೆ ಸೇರಲು ಮಹೂರ್ತ ಹತ್ತಿರ ಬರುತ್ತಿದೆ.

ಮಾಜಿ ಕೇಂದ್ರ ಸಚಿವ ರಾಂ ವಿಲಾಸ್ ಪಾಸ್ವಾನ್ ನಿಧನದ ನಂತರ ತೆರವಾಗಿರುವ ರಾಜ್ಯಸಭಾ ಸ್ಥಾನಕ್ಕೆ ಸುಶೀಲ್ ಮೋದಿ, ಬುಧವಾರ (ಡಿ 2) ನಾಮಪತ್ರ ಸಲ್ಲಿಸಿದ್ದಾರೆ. ಅವಿರೋಧ ಆಯ್ಕೆ ಆಗದೇ ಇದ್ದಲ್ಲಿ, ಇದೇ ತಿಂಗಳ ಹದಿನಾಲ್ಕರಂದು ಚುನಾವಣೆ ನಡೆಯಲಿದೆ.

ಬಿಹಾರದಲ್ಲಿ ಸತತವಾಗಿ ಹಣಕಾಸು ಖಾತೆ ನಿಭಾಯಿಸುತ್ತಿದ್ದ ಸುಶೀಲ್ ಮೋದಿ, ಜಿಎಸ್ಟಿ ಸಂಬಂಧ ಹಲವು ಸಭೆಗಳ ಅಧ್ಯಕ್ಷತೆಯನ್ನೂ ವಹಿಸಿದ್ದರು. ಹಾಗಾಗಿ, ಕೇಂದ್ರ ಸಚಿವ ಸಂಪುಟದಲ್ಲೂ ಆಯಕಟ್ಟಿನ ಹಣಕಾಸು ಖಾತೆಯನ್ನು ಬಯಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Senior BJP Leader Sushil Kumar Modi Likely To Get Agriculture Or Food And Civil Supply In Modi Government

ಆದರೆ, ಸದ್ಯ ನಿರ್ಮಲಾ ಸೀತಾರಾಮನ್ ಈ ಖಾತೆಯನ್ನು ನೋಡಿಕೊಳ್ಳುತ್ತಿರುವುದರಿಂದ ಹಣಕಾಸು ಖಾತೆ ಇವರಿಗೆ ಸಿಗುವ ಸಾಧ್ಯತೆ ಕಮ್ಮಿ. ಆದರೆ, ಮೋದಿ ಸರಕಾರ ಇವರಿಗೆ ಎರಡು ಖಾತೆಯಲ್ಲಿ ಒಂದನ್ನು ನೀಡುವ ಸಾಧ್ಯತೆಯಿದೆ.

ಕೃಷಿ ಅಥವಾ ನಾಗರೀಕ ಆಹಾರ ಪೂರೈಕೆ ಖಾತೆಯನ್ನು ಪ್ರಧಾನಿ ಮೋದಿಯವರು ಸುಶೀಲ್ ಕುಮಾರ್ ಮೋದಿಗೆ ನೀಡುವ ಸಾಧ್ಯತೆ ದಟ್ಟವಾಗಿದೆ. ಡಿಸಿಎಂ ಹುದ್ದೆ ಹೋದ ನಂತರ, ಕೇಂದ್ರದ ಸೇವೆಗೆ ಸುಶೀಲ್ ಮೋದಿಯವರನ್ನು ಬಳಸಿಕೊಳ್ಳಲಾಗುವುದು ಎನ್ನುವ ಸುದ್ದಿ ಹರಿದಾಡುತ್ತಿತ್ತು.

ಶಾಸಕರಾಗುವ ಮುನ್ನವೂ ಅಂದರೆ 1995ರಿಂದ ಬಿಹಾರದಲ್ಲಿ ಬಿಜೆಪಿಯ ಮುಖವಾಣಿಯಂತಿದ್ದ ಸುಶೀಲ್ ಕುಮಾರ್ ಮೋದಿಯ ಮೇಲೆ, ಇತ್ತೀಚಿನ ದಿನಗಳಲ್ಲಿ ಬಿಹಾರದ ಸಿಎಂ ನಿತೀಶ್ ಕುಮಾರ್ ಜೊತೆ, ತುಂಬಾ ಆಪ್ತರಾಗಿದ್ದಾರೆ ಎನ್ನುವ ಅಸಂತೋಷ ಬಿಹಾರದ ಬಿಜೆಪಿ ಮುಖಂಡರಿಗಿತ್ತು.

English summary
Senior BJP Leader Sushil Kumar Modi Likely To Get Agriculture Or Food And Civil Supply In Modi Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X