ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು 50:50 ಸೀಟು ಹಂಚಿಕೆ

|
Google Oneindia Kannada News

ಪಾಟ್ನಾ, ಆಕ್ಟೋಬರ್.04: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(NDA) ರಣತಂತ್ರ ರೂಪಿಸುತ್ತಿದೆ. ಮಿತ್ರಪಕ್ಷಗಳ ಜೊತೆಗೆ ಬಿಜೆಪಿ ಸೀಟು ಹಂಚಿಕೆಯ ಮಾತುಕತೆ ಪೂರ್ಣಗೊಳಿಸಿದೆ ಎಂದು ವರದಿಯಾಗಿದೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಮುಂದಾಳತ್ವದಲ್ಲೇ ಬಿಹಾರ ವಿಧಾನಸಭಾ ಚುನಾವಣೆ ಎದುರಿಸಲಾಗುತ್ತದೆ ಎಂಬುದು ಸ್ಪಷ್ಟವಾಗಿದೆ. ಬಿಜೆಪಿ ಮತ್ತು ಜೆಡಿಯು ಪಕ್ಷಗಳು ಯಾವ ಯಾವ ಕ್ಷೇತ್ರಗಳಲ್ಲಿ ಹಿಡಿತ ಹೊಂದಿವೆ. ಹಾಗೂ ಎಷ್ಟು ಕ್ಷೇತ್ರಗಳಲ್ಲಿ ಸ್ಪರ್ಧಿಸಬೇಕು ಎನ್ನುವುದರ ಪಟ್ಟಿ ಸಿದ್ಧಗೊಂಡಿದೆ.

ಮಹಾಘಟಬಂಧನ್ ಸೀಟು ಹಂಚಿಕೆ ಫೈನಲ್ ಘೋಷಣೆ ಬಾಕಿಮಹಾಘಟಬಂಧನ್ ಸೀಟು ಹಂಚಿಕೆ ಫೈನಲ್ ಘೋಷಣೆ ಬಾಕಿ

ಬಿಹಾರ ವಿಧಾನಸಭೆಯ 243 ಕ್ಷೇತ್ರಗಳ ಪೈಕಿ ಜೆಡಿಯು 122 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದು, 121 ಕ್ಷೇತ್ರಗಳು ಬಿಜೆಪಿ ಅಭ್ಯರ್ಥಿಗಳಿಗೆ ಬಿಟ್ಟು ಕೊಡುವುದಕ್ಕೆ ಎನ್ ಡಿಎ ಮಿತ್ರಪಕ್ಷಗಳು ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿದು ಬಂದಿದೆ.

Seat Sharing Final Between JDU And BJP In Bihar Assembly Election: Report

ಬಿಜೆಪಿ ಕೋಟಾದಲ್ಲಿ ಎಲ್ ಜೆಪಿಗೆ ಸ್ಥಾನ:

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದಲ್ಲೇ ಗುರುತಿಸಿಕೊಂಡಿರುವ ಲೋಕ ಜನಶಕ್ತಿ ಪಕ್ಷಕ್ಕೆ ಎಷ್ಟು ಕ್ಷೇತ್ರಗಳನ್ನು ಬಿಟ್ಟು ಕೊಡಬೇಕು ಎನ್ನುವುದನ್ನು ಬಿಜೆಪಿ ತೀರ್ಮಾನಿಸಲಿದೆ. ಬಿಜೆಪಿಯ 121 ಕ್ಷೇತ್ರಗಳಲ್ಲೇ ಇಂತಿಷ್ಟು ಕ್ಷೇತ್ರಗಳನ್ನು ಲೋಕಜನಶಕ್ತಿ ಪಕ್ಷಕ್ಕೆ ಬಿಟ್ಟುಕೊಡುವ ಸಾಧ್ಯತೆಗಳಿವೆ. ಇನ್ನೊಂದೆಡೆ 122 ಸ್ಥಾನಗಳಲ್ಲಿ ಸ್ಪರ್ಧಿಸುವುದಕ್ಕೆ ಒಪ್ಪಂದ ಮಾಡಿಕೊಂಡಿರುವ ಜೆಡಿಯು ತನ್ನ ಖಾತೆಯಲ್ಲಿ ಐದರಿಂದ ಏಳು ಕ್ಷೇತ್ರಗಳನ್ನು ಜಿತನ್ ರಾಮ್ ಮಾಂಜೆ ನೇತೃತ್ವದ ಹಿಂದೂಸ್ತಾನಿ ಅವಮ್ ಮೋರ್ಚಾ ಪಕ್ಷಕ್ಕೆ ಬಿಟ್ಟು ಕೊಡಲಿದೆ ಎಂದು ವರದಿಯಾಗಿದೆ.

ಬಿಹಾರದಲ್ಲೂ 'ಮಹಾಘಟಬಂಧನ್':

ಕಳೆದ ಶನಿವಾರವಷ್ಟೇ ಬಿಹಾರದಲ್ಲಿ ಎನ್ ಡಿಎ ಮೈತ್ರಿಕೂಟದ ವಿರುದ್ಧ ಮಹಾಘಟಬಂಧನ್ ರಚಿಸಲಾಗಿದ್ದು, ರಾಷ್ಟ್ರೀಯ ಜನತಾ ಪಕ್ಷ ಮತ್ತು ಮಿತ್ರಗಳ ಸೀಟು ಹಂಚಿಕೆ ಬಗ್ಗೆ ತೀರ್ಮಾನಿಸಲಾಗಿತ್ತು. ಆರ್ ಜೆಡಿಯ ತೇಜಸ್ವಿ ಯಾದವ್ ರನ್ನು ಮಹಾಘಟಬಂಧನ್ ಒಕ್ಕೂಟದ ಸಿಎಂ ಅಭ್ಯರ್ಥಿಯಾಗಿ ಘೋಷಿಸಲಾಗಿತ್ತು. ಈ ಬಗ್ಗೆ ಸ್ವತಃ ತೇಜಸ್ವಿ ಯಾದವ್ ಮಾತನಾಡಿದ್ದು, 144 ಸ್ಥಾನಗಳಲ್ಲಿ ಆರ್ ಜೆಡಿ ಸ್ಪರ್ಧಿಸುವುದಕ್ಕೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.

English summary
Seat Sharing Final Between JDU And BJP In Bihar Assembly Election: Report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X