• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರದಲ್ಲಿ ರಸ್ತೆ, ವೃತ್ತವೊಂದಕ್ಕೆ ಸುಶಾಂತ್ ಹೆಸರು ನಾಮಕರಣ

|

ಪಾಟ್ನಾ, ಜುಲೈ 12 : ಬಿಹಾರದ ಪುರೆನಾದಲ್ಲಿನ ರಸ್ತೆ, ಸರ್ಕಲ್ ವೊಂದಕ್ಕೆ ಬಾಲಿವುಡ್ ನಡ ಸುಶಾಂತ್ ಸಿಂಗ್ ರಜಪೂತ್ ಹೆಸರು ಇಡಲಾಗಿದೆ. ಕೆಲವು ದಿನಗಳ ಹಿಂದೆ ಸುಶಾಂತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದರು.

ಸುಶಾಂತ್ ಸಿಂಗ್ ರಜಪೂತ್ ಬಿಹಾರ ಮೂಲದವರು. ಪುರೆನಾ ಅವರ ಸ್ವಂತ ಊರು. ಪುರೆನಾದ ಮೇಯರ್ ಸವಿತಾ ದೇವಿ ಸುಶಾಂತ್ ಸಿಂಗ್ ರಜಪೂತ್ ಹೆಸರಿನ ರಸ್ತೆ ಮತ್ತು ಸರ್ಕಲ್‌ಗಳನ್ನು ಉದ್ಘಾಟನೆ ಮಾಡಿದರು.

ಸುಶಾಂತ್ ಸಿಂಗ್ ಆತ್ಮಹತ್ಯೆ: ಅಖಾಡಕ್ಕಿಳಿದ ಸುಬ್ರಮಣಿಯನ್ ಸ್ವಾಮಿ

ರಸ್ತೆ ಮತ್ತು ವೃತಕ್ಕೆ ಸುಶಾಂತ್ ಹೆಸರು ನಾಮಕರಣ ಮಾಡಿರುವ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಮೇಯರ್ ಸವಿತಾ ದೇವಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದು, ಸುಶಾಂತ್ ಸಾವಿನ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.

ಸುಶಾಂತ್ ಸಿಂಗ್ ಆತ್ಮಹತ್ಯೆ: ಪೊಲೀಸರ ಮುಂದೆ ಹಾಜರಾದ ಸಂಜಯ್ ಲೀಲಾ ಬನ್ಸಾಲಿ

ಸುಶಾಂತ್ ಸಿಂಗ್ ನಟನೆಯ 'ದಿಲ್ ಬೇಚಾರ' ಸಿನಿಮಾದ ಡಿಜಿಟಲ್ ಅವೃತ್ತಿ ಜುಲೈ 24ರಂದು ಬಿಡುಗಡೆಯಾಗಲಿದೆ. ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಮುಂಬೈ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ನಟ ಸುಶಾಂತ್ ಸಿಂಗ್ ಸಾವಿನ ಕೇಸಿಗೆ ತಿರುವು ನೀಡಿದ ವರದಿ!

ಮುಂಬೈ ಪೊಲೀಸರು ಇದುವರೆಗೂ 35 ಜನರ ಹೇಳಿಕೆಗಳನ್ನು ಸುಶಾಂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಡೆದುಕೊಂಡಿದ್ದಾರೆ. ಜೂನ್ 14ರ ಭಾನುವಾರ ಸುಶಾಂತ್ ಶವ ಬಾಂದ್ರಾದಲ್ಲಿರುವ ಅವರ ಫ್ಲ್ಯಾಟ್‌ನಲ್ಲಿ ಪತ್ತೆಯಾಗಿತ್ತು.

English summary
Road and circle in the Purnea of Bihar state renamed in memory of late Sushant Singh Rajput. Purnea home town of the Sushant Singh who committed suicide on June 14, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X