• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಬಿಹಾರದಲ್ಲಿ 95,000 ಉದ್ಯೋಗ ಸೃಷ್ಟಿಸಲು 15 ವರ್ಷ ಬೇಕಾಯಿತೇ"

|

ಪಾಟ್ನಾ, ಅಕ್ಟೋಬರ್.30: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿರುದ್ಯೋಗ ಸಮಸ್ಯೆಯನ್ನೇ ಆಡಳಿತ ಮತ್ತು ವಿರೋಧ ಪಕ್ಷಗಳು ಪ್ರಮುಖ ಅಸ್ತ್ರವಾಗಿ ಪ್ರಯೋಗಿಸುತ್ತಿವೆ. ಇದೇ ವಿಚಾರಕ್ಕೆ ನಾಯಕರ ನಡುವಿನ ವಾಕ್ಸಮರ ಮುಂದುವರಿದಿದೆ.

ಪಾಟ್ನಾದಲ್ಲಿ ಚುನಾವಣಾ ಪ್ರಚಾರ ನಡೆಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಈ ಹಿಂದಿನ ಆರ್ ಜೆಡಿ ನೇತೃತ್ವದ ಸರ್ಕಾರದ ಬಗ್ಗೆ ಟೀಕಾಪ್ರಹಾರ ನಡೆಸಿದರು. ಈ ಹಿಂದೆ ಲಾಲೂ ಪ್ರಸಾದ್ ಯಾದವ್ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅದೆಷ್ಟು ಪ್ರಮಾಣದಲ್ಲಿ ಉದ್ಯೋಗ ಸೃಷ್ಟಿಯಾಗಿದೆ ಎಂದು ಪ್ರಶ್ನೆ ಮಾಡಿದರು.

Video: ಬಿಹಾರದಲ್ಲಿ ಕಾಂಗ್ರೆಸ್ ಪ್ರಚಾರದ ವೇಳೆ ಕುಸಿದ ವೇದಿಕೆ

ಕಳೆದ 1990 ರಿಂದ 2005ರವರೆಗೆ ಬಿಹಾರದಲ್ಲಿ ನಿಮ್ಮದೇ ಪಕ್ಷದ ಸರ್ಕಾರವು ಆಡಳಿತ ನಡೆಸಿತ್ತು. ಅಂದು 15 ವರ್ಷಗಳಲ್ಲಿ ನೀವು ಕೇವಲ 95,000 ಜನರಿಗೆ ಮಾತ್ರ ಉದ್ಯೋಗವನ್ನು ನೀಡುವಲ್ಲಿ ಸಫಲರಾಗಿದ್ದೀರಿ. ಆದರೆ ನನ್ನ ಆಡಳಿತ ಅವಧಿಯಲ್ಲಿ ನಾನು 6 ಲಕ್ಷ ಜನರಿಗೆ ಉದ್ಯೋಗವನ್ನು ಸೃಷ್ಟಿಸಿ ಕೊಟ್ಟಿದ್ದೇನೆ ಎಂದು ಸಿಎಂ ನಿತೀಶ್ ಕುಮಾರ್ ಗುಡುಗಿದರು.

ಪ್ರತಿಹಳ್ಳಿಯಲ್ಲೂ ಸೋಲಾರ್ ವಿದ್ಯುತ್ ದೀಪ:

"ನಾವು ಈಗಾಗಲೇ ಪ್ರತಿ ಮನೆ ಮನೆಗೂ ವಿದ್ಯುತ್ ಸಂಪರ್ಕವನ್ನು ಕೊಟ್ಟಿದ್ದೀವಿ. ಈ ಬಾರಿ ಚುನಾವಣೆಯಲ್ಲಿ ನಮಗೆ ಮತ ನೀಡಿ ಗೆಲ್ಲಿಸಿದರೆ ರಾಜ್ಯದ ಪ್ರತಿಯೊಂದು ಹಳ್ಳಿಗಳಲ್ಲಿ ಸೋಲಾರ್ ವಿದ್ಯುತ್ ದೀಪಗಳನ್ನು ಅಳವಡಿಸಲಾಗುತ್ತದೆ. ರಾತ್ರಿ ವೇಳೆಯಲ್ಲಿ ನೀವು ನಿಮ್ಮ ಮನೆಗಳ ದೀಪಗಳನ್ನು ಆರಿಸಿದರೂ ಕೂಡಾ ನಿಮ್ಮ ಗ್ರಾಮದ ಬೀದಿ ಬೀದಿಗಳು ಬೆಳಕಿನಿಂದ ಪ್ರಜ್ವಲಿಸಲಿವೆ. ರಾಜ್ಯ ಸರ್ಕಾರವೇ ಈ ಯೋಜನೆಯನ್ನು ಜಾರಿಗೆ ತರಲಿದೆ" ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಆಶ್ವಾಸನೆ ನೀಡಿದರು.

ಕಳದೆ ಚುನಾವಣೆಗಿಂತ ದಾಖಲೆ ಮತದಾನ:

ಬಿಹಾರದ 71 ವಿಧಾನಸಭಾ ಕ್ಷೇತ್ರಗಳಿಗೆ ಬುಧವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಶೇ.55.69ರಷ್ಟು ಜನರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಮೊದಲ ಹಂತದಲ್ಲಿ ನಡೆದ ಶೇಕಡಾವಾರು ಮತದಾನವು ಈ ಹಿಂದೆ ನಡೆದ ಎರಡು ಚುನಾವಣೆಗಿಂತಲೂ ಹೆಚ್ಚಾಗಿದೆ. ಕಳೆದ 2015ರಲ್ಲಿ ನಡೆದ ವಿಧಾನಸಭೆಯ ಮೊದಲ ಹಂತದ ಚುನಾವಣೆಯಲ್ಲಿ 54.94ರಷ್ಟು ಮತದಾನ ನಡೆದಿತ್ತು. ಕಳೆದ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲೂ ಈ ಕ್ಷೇತ್ರಗಳಲ್ಲಿ ಶೇ.53.54ರಷ್ಟು ಮತದಾನ ನಡೆದಿತ್ತು. ಅಕ್ಟೋಬರ್.28ರಂದು ನಡೆದ 71 ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಮತದಾನದ ಶೇಕಡಾವಾರು ಪ್ರಮಾಣವು ಹೊಸ ದಾಖಲೆ ಬರೆದಿದೆ ಎಂದು ಭಾರತೀಯ ಚುನಾವಣಾ ಆಯೋಗವು ಮಾಹಿತಿ ನೀಡಿದೆ.

English summary
Bihar Assembly Election: RJD Govt Just Created 95,000 Jobs In 15 Years: CM Nitish Kumar Attacked Against Tejaswi Yadav.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X