ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನಿ ಏಜೆಂಟ್‌ಗಳೆಂದು ಬಂಧಿಸಿದವರು ಆರ್‌ಎಸ್‌ಎಸ್‌ನವರು: ಆರ್‌ಜೆಡಿ ಮುಖಂಡನ ವಿವಾದಾತ್ಮಕ ಹೇಳಿಕೆ

|
Google Oneindia Kannada News

ಪಾಟ್ನಾ, ಜುಲೈ 25: ರಾಷ್ಟ್ರೀಯ ಭದ್ರತಾ ಏಜೆನ್ಸಿಗಳಿಂದ ಬಂಧಿಸಲ್ಪಟ್ಟಿರುವ ಪಾಕಿಸ್ತಾನಿ ಏಜೆಂಟ್‌ಗಳಲ್ಲಿ ಹೆಚ್ಚಿನವರು ಆರ್‌ಎಸ್‌ಎಸ್ ಸದಸ್ಯರು ಅಥವಾ ಹಿಂದೂಗಳು ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಬಿಹಾರ ರಾಜ್ಯಾಧ್ಯಕ್ಷ ಜಗದಾನಂದ್‌ ಸಿಂಗ್‌ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಮುಸ್ಲಿಂ ಸಂಘಟನೆ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ)ಗೆ ಬೆಂಬಲ ಸೂಚಿಸಿ ಮಾತನಾಡುವ ಸಂದರ್ಭದಲ್ಲಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆರ್‌ಎಸ್‌ಎಸ್‌ ವಿರುದ್ಧ ಹೋರಾಡಲು ಮತ್ತು ಮುಸ್ಲಿಮರನ್ನು ರಕ್ಷಿಸಲು ಪಿಎಫ್‌ಐ ಸಂಘಟನೆ ಮಾಡಲಾಗಿದೆ ಆದರೆ ಅದನ್ನು ರಾಷ್ಟ್ರವಿರೋಧಿ ಸಂಘಟನೆ ಎಂದು ಏಕೆ ಕರೆಯುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ದೇವನೂರು ಕೃತಿ ಟೀಕಿಸಿದ ಪ್ರತಾಪ್‌ ಸಿಂಹಗೆ ಯತೀಂದ್ರ ತಿರುಗೇಟು!ದೇವನೂರು ಕೃತಿ ಟೀಕಿಸಿದ ಪ್ರತಾಪ್‌ ಸಿಂಹಗೆ ಯತೀಂದ್ರ ತಿರುಗೇಟು!

"ಆರ್‌ಎಸ್‌ಎಸ್‌ಗೆ ಹೆದರುವ ಮುಸ್ಲಿಂ ಸಮುದಾಯವು ತನ್ನ ಸ್ವಂತ ಜನರ ಸೇವೆ ಮತ್ತು ಭದ್ರತೆಗಾಗಿ ಸಂಘಟನೆಯನ್ನು ರಚಿಸಿಕೊಂಡಾಗ, ಅವರನ್ನು ಗಲಭೆಕೋರರು ಮತ್ತು ದೇಶವಿರೋಧಿಗಳು ಎಂದು ಏಕೆ ಕರೆಯುತ್ತಾರೆ?" ಎಂದು ನೇರವಾಗಿಯೇ ಪ್ರಶ್ನೆ ಮಾಡಿದ್ದಾರೆ.

ನಮ್ಮ ದೇಶಕ್ಕೆ ಬೆದರಿಕೆಯೊಡ್ಡುವ ಪಾಕಿಸ್ತಾನಿ ಏಜೆಂಟ್‌ನನ್ನು ಬಂಧಿಸಿದಾಗಲೆಲ್ಲ ಅವರು ಆರ್‌ಎಸ್‌ಎಸ್‌ನವರು ಅಥವಾ ಹಿಂದೂ ಧರ್ಮಕ್ಕೆ ಸೇರಿದವರು ಎಂಬುದು ಬೆಳಕಿಗೆ ಬಂದಿದೆ ಎಂದು ಜಗದಾನಂದ್‌ ಸಿಂಗ್‌ ಹೇಳಿದ್ದಾರೆ.

ಕುಮಾರಸ್ವಾಮಿಗೆ ಹತಾಶರಾಗಿ ಆರ್‌ಎಸ್‌ಎಸ್‌ ಬಗ್ಗೆ ಟೀಕೆ ಮಾಡುತ್ತಿದ್ದಾರೆ: ಎಸ್. ಟಿ.ಸೋಮಶೇಖರ್ಕುಮಾರಸ್ವಾಮಿಗೆ ಹತಾಶರಾಗಿ ಆರ್‌ಎಸ್‌ಎಸ್‌ ಬಗ್ಗೆ ಟೀಕೆ ಮಾಡುತ್ತಿದ್ದಾರೆ: ಎಸ್. ಟಿ.ಸೋಮಶೇಖರ್

 ಸಂಬಂಧಿಕರ ಜೊತೆ ಮಾತನಾಡಿದರೂ ದೇಶದ್ರೋಹ!

ಸಂಬಂಧಿಕರ ಜೊತೆ ಮಾತನಾಡಿದರೂ ದೇಶದ್ರೋಹ!

ಭಾರತದಲ್ಲಿರುವ ಮುಸ್ಲಿಮರು ಪಾಕಿಸ್ತಾನದಲ್ಲಿರುವ ತಮ್ಮ ಸಂಬಂಧಿಕರೊಂದಿಗೆ ಮಾತನಾಡುವುದನ್ನು ದೇಶವಿರೋಧಿ ಕೃತ್ಯ ಎಂದು ಏಕೆ ಪರಿಗಣಿಸಲಾಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.

"ಪಾಕಿಸ್ತಾನದಲ್ಲಿರುವ ಜನರೊಂದಿಗೆ ದೂರವಾಣಿಯಲ್ಲಿ ಮಾತನಾಡುವ ಭಾರತೀಯ ನಾಗರಿಕರನ್ನು ದೇಶವಿರೋಧಿಗಳೆಂದು ಪರಿಗಣಿಸಲಾಗಿದೆ ಎಂದು ಆರೋಪಿಸಲಾಗಿದೆ, ಪಾಕಿಸ್ತಾನದ ಜನರೊಂದಿಗೆ ಫೋನ್ ಮೂಲಕ ಮಾತನಾಡುವುದು ದೇಶ ವಿರೋಧಿ ಕೃತ್ಯವೇ? ಅದನ್ನು ಸಾಬೀತುಪಡಿಸಲು ಏನು ಮಾಡಲಾಗಿದೆ? ಪಾಕಿಸ್ತಾನದಲ್ಲಿರುವ ಜನರು ತಮ್ಮ ಸಂಬಂಧಿಕರೊಂದಿಗೆ ಮಾತನಾಡುವುದು ಭಾರತದ ಭದ್ರತೆಗೆ ಹೇಗೆ ಅಪಾಯವನ್ನುಂಟುಮಾಡುತ್ತದೆ," ಎಂದು ಜಗದಾನಂದ್ ಸಿಂಗ್ ಪ್ರಶ್ನಿಸಿದ್ದಾರೆ.

 ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿದ್ದ ಎನ್‌ಐಎ

ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿದ್ದ ಎನ್‌ಐಎ

ಇತ್ತೀಚೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪಾಟ್ನಾದಲ್ಲಿ ಫುಲ್ವಾರಿ ಷರೀಫ್ ಮೇಲೆ ದಾಳಿ ನಡೆಸಿತ್ತು. ದಾಳಿ ಬಳಿಕ ಹಲವು ಆರೋಪಿಗಳನ್ನು ಬಂಧಿಸಲಾಗಿದೆ. ಇವರೆಲ್ಲರೂ ಪಿಎಫ್‌ಐ ಜೊತೆ ಸಂಬಂಧ ಹೊಂದಿದ್ದು, ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಎನ್‌ಐಎ ಆರೋಪಿಸಿದೆ. ಈ ಪ್ರಕರಣದಲ್ಲಿ ಇದುವರೆಗೆ 26 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಐವರನ್ನು ಬಂಧಿಸಲಾಗಿದೆ.

ಪಾಟ್ನಾದಲ್ಲಿ ಶಂಕಿತ ಭಯೋತ್ಪಾದಕರ ಬಂಧನ ಪ್ರಕರಣದ ಕುರಿತು ಮಾತನಾಡಿದ ಜಗದಾನಂದ್ ಸಿಂಗ್, "ಅವರು ಭಯೋತ್ಪಾದಕರು ಎಂದು ಎಲ್ಲಿ ಸಾಬೀತಾಗಿದೆ? ನಮಾಜಿಗಳು ಮತ್ತು ಗಡ್ಡ ಬಿಟ್ಟವರನ್ನು ಮುಸ್ಲಿಮರು ಎಂದು ಕತ್ತರಿಸುತ್ತಿದ್ದಾರೆ." ಎಂದು ಹೇಳಿದರು.

 ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಮತ್ತೊಂದೆಡೆ, ಬಿಜೆಪಿ ಮತ್ತು ಆರ್‌ಜೆಡಿ ಕೋಮುವಾದಿ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಅಸಿತ್ ನಾಥ್ ತಿವಾರಿ ವಾಗ್ದಾಳಿ ನಡೆಸಿದ್ದಾರೆ.

"ಬಿಜೆಪಿ ಆಡಳಿತದಲ್ಲಿ ಅಥವಾ ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ನಡೆಯುತ್ತಿರುವ ರಾಜ್ಯಗಳಲ್ಲಿ, ಆರ್‌ಎಸ್‌ಎಸ್ ಪಿಎಫ್‌ಐ ಮಾಡ್ಯೂಲ್ ಅನ್ನು ಸ್ಥಾಪಿಸಿದೆ, ಇದರಿಂದ ಸಮಾಜದಲ್ಲಿ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಉದ್ವಿಗ್ನತೆ ಉಂಟಾಗಿದೆ. ಎರಡೂ ವರ್ಗದ ಜನರ ನಡುವೆ ದ್ವೇಷ ಬಿತ್ತುವ ಮೂಲಕ ಬಿಜೆಪಿ ಲಾಭ ಪಡೆಯುತ್ತಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ" ಎಂದು ಆರೋಪಿಸಿದ್ದಾರೆ.

ಜನಸಂಖ್ಯೆಯ ಶೇಕಡ 80ರಷ್ಟು ಇರುವ ಹಿಂದೂಗಳ ಮನಸ್ಸಿನಲ್ಲಿ ಆರ್‌ಎಸ್‌ಎಸ್ ಹೇಗೆ ಶೇಕಡ 16 ರಷ್ಟು ಜನಸಂಖ್ಯೆ ಇರುವ ಮುಸ್ಲಿಮರ ಬಗ್ಗೆ ಭಯ ಹುಟ್ಟಿಸುತ್ತದೆ. ಆರ್‌ಜೆಡಿ ಕೂಡ ಅದೇ ಕೆಲಸ ಮಾಡುತ್ತದೆ. ಈ ಎರಡೂ ಪಕ್ಷಗಳು ತಮ್ಮ ರಾಜಕೀಯ ಲಾಭಕ್ಕಾಗಿ ಈ ರೀತಿಯ ಮಾಡುತ್ತಿವೆ ಎಂದು ಕಾಂಗ್ರೆಸ್ ವಕ್ತಾರ ಅಸಿತ್ ನಾಥ್ ತಿವಾರಿ ಆರೋಪಿಸಿದ್ದಾರೆ.

 ಜಗದಾನಂದ್ ಸಿಂಗ್ ಬಂಧನಕ್ಕೆ ಬಿಜೆಪಿ ಒತ್ತಾಯ

ಜಗದಾನಂದ್ ಸಿಂಗ್ ಬಂಧನಕ್ಕೆ ಬಿಜೆಪಿ ಒತ್ತಾಯ

ಜಗದಾನಂದ್ ಸಿಂಗ್ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ವಿರೋಧಿಸಿದೆ. ದೇಶ ವಿರೋಧಿಗಳನ್ನು ಜಗದಾನಂದ್ ಸಿಂಗ್ ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ಕೂಡಲೇ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದೆ.

ದೇಶವಿರೋಧಿಗಳನ್ನು ಬೆಂಬಲಿಸುವ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಅಂತಹ ವ್ಯಕ್ತಿಗಳನ್ನು ಬಂಧಿಸಬೇಕು ಎಂದು ಬಿಜೆಪಿ ಶಾಸಕ ಸಂತೋಷ್ ಸಿಂಗ್ ಹೇಳಿದ್ದಾರೆ.

Recommended Video

ರಣ ಮಳೆ,ಪ್ರವಾಹಕ್ಕೆ ತತ್ತರಿಸಿದ ಪಾಕಿಸ್ತಾನ: ಜನ ಜೀವನ ಅಸ್ತವ್ಯಸ್ತ | *World | OneIndia Kannada

English summary
Rashtriya Janata Dal Bihar state president, Jagadanand Singh give a controversy statement against RSS. most of the Pakistani agents who were arrested by security agencies were either RSS members or Hindus, he said after he came out in support of the Popular Front of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X