ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಮಹಾಮೈತ್ರಿಕೂಟದಲ್ಲಿ ಮನಸ್ತಾಪ: ಕಾಂಗ್ರೆಸ್ ಒಂಟಿಯಾಗಿ ಸ್ಪರ್ಧೆ?

|
Google Oneindia Kannada News

ಪಟ್ನಾ, ಮಾರ್ಚ್ 28: ಬಿಹಾರದಲ್ಲಿ ಬಿಜೆಪಿ ವಿರುದ್ಧ ವಿರೋಧಪಕ್ಷಗಳು ಮಾಡಿಕೊಂಡಿರುವ ಮಹಾಮೈತ್ರಿಕೂಟದಲ್ಲಿ ಸೀಟು ಹಂಚಿಕೆ ವಿಚಾರದಲ್ಲಿ ಮನಸ್ತಾಪ ಉಂಟಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್ ಮತ್ತು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಡುವೆ ಬಿರುಕು ಉಂಟಾಗಿದೆ. ಇದರಿಂದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮಹಾಘಟಬಂಧನದ ಭಾಗವಾಗದೆ ಏಕಾಂಗಿಯಾಗಿ ಸ್ಪರ್ಧಿಸಲು ಬಯಸಿದೆ. ಈ ಸಂಬಂಧ ಶೀಘ್ರದಲ್ಲಿಯೇ ಪ್ರಕಟಣೆ ಹೊರಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಕನ್ಹಯ್ಯಾಗೆ ಟಿಕೆಟ್ ತಪ್ಪಿಸಿದ ತೇಜಸ್ವಿ: ಮಹಾಘಟಬಂಧನದಲ್ಲಿ ಬಿರುಕು? ಕನ್ಹಯ್ಯಾಗೆ ಟಿಕೆಟ್ ತಪ್ಪಿಸಿದ ತೇಜಸ್ವಿ: ಮಹಾಘಟಬಂಧನದಲ್ಲಿ ಬಿರುಕು?

ಸೀಟು ಹಂಚಿಕೆ ಸೂತ್ರವು ಕಾಂಗ್ರೆಸ್‌ಗೆ ಲಾಭಕರವಾಗಿಲ್ಲ ಎಂದು ಪಕ್ಷದ ನಾಯಕರ ಬಳಿ ಅಸಮಾಧಾನ ತೋಡಿಕೊಂಡಿರುವ ಹಿರಿಯ ಮುಖಂಡ ರಾಮದೇವ್ ರಾಯ್, ತನಗೆ ನೀಡಲಾದ ಸೀಟುಗಳ ಕುರಿತು ಚರ್ಚೆ ನಡೆಸಲು ನಿರ್ಧರಿಸಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Rift in Bihar Mahagathbandhan over seat sharing congress likely to contest alone

ಬಿಜೆಪಿ ತೊರೆದು ಇತ್ತೀಚೆಗೆ ಪಕ್ಷ ಸೇರಿಕೊಂಡಿರುವ ಕೀರ್ತಿ ಆಜಾದ್ ಅವರಿಗೆ ದರ್ಭಾಂಗಾ ಕ್ಷೇತ್ರವನ್ನು ನೀಡಬೇಕೆಂದು ಕಾಂಗ್ರೆಸ್ ಬಲವಾದ ಪಟ್ಟು ಹಿಡಿದಿದೆ. ಆದರೆ, ಅರ್‌ಜೆಡಿ ಅಲ್ಲಿ ಪಕ್ಷದ ಹಿರಿಯ ನಾಯಕ ಅಬ್ದುಲ್ ಬಾರಿ ಸಿದ್ದಿಕಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಆರ್‌ಜೆಡಿಯ ನಡೆ ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸಿದೆ.

ಬಿಹಾರ: ಎಲ್ಲ 40 ಸೀಟುಗಳಿಗೆ ಎನ್‌ಡಿಎ ಪಟ್ಟಿ ಬಿಡುಗಡೆ, ಶತ್ರುಘ್ನಗೆ ಟಿಕೆಟ್ ಇಲ್ಲ ಬಿಹಾರ: ಎಲ್ಲ 40 ಸೀಟುಗಳಿಗೆ ಎನ್‌ಡಿಎ ಪಟ್ಟಿ ಬಿಡುಗಡೆ, ಶತ್ರುಘ್ನಗೆ ಟಿಕೆಟ್ ಇಲ್ಲ

40 ಸೀಟುಗಳಿರುವ ಬಿಹಾರದಲ್ಲಿ ಆರ್‌ಜೆಡಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಕಾಂಗ್ರೆಸ್ 9, ಎಚ್‌ಎಎಂ 3, ಆರ್‌ಎಲ್‌ಎಸ್‌ಪಿ 5, ವಿಐಪಿ 3 ಮತ್ತು ಸಿಪಿಐ 1 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ.

ಬಿಹಾರ: ತೇಜಸ್ವಿ ಅನುಪಸ್ಥಿತಿಯಲ್ಲಿ ಮಹಾಘಟಬಂದನ್ ಸೀಟು ಹಂಚಿಕೆ ಅಂತಿಮಬಿಹಾರ: ತೇಜಸ್ವಿ ಅನುಪಸ್ಥಿತಿಯಲ್ಲಿ ಮಹಾಘಟಬಂದನ್ ಸೀಟು ಹಂಚಿಕೆ ಅಂತಿಮ

ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಿಹಾರ ಕಾಂಗ್ರೆಸ್ ಘಟಕ ಮತ್ತು ಮೈತ್ರಿಕೂಟದ ಇತರೆ ಮುಖಂಡರೊಂದಿಗೆ ಗುರುವಾರ ಸಭೆ ಕರೆದಿದ್ದಾರೆ.

English summary
Congress is likely to contest in Bihar alone, after the rift in Mahagathbandhan over seat sharing, sources said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X