ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ರಾಂ ವಿಲಾಸ್ ಪಾಸ್ವಾನ್: ವಿಷಯ ಅದಲ್ಲ..

|
Google Oneindia Kannada News

ಕುಟುಂಬ ರಾಜಕಾರಣ, ವಂಶಪಾರಂಪರ್ಯ ರಾಜಕಾರಣ, ಪುತ್ರ ವ್ಯಾಮೋಹ ಎಂದು ಯಾರೂ, ನಮ್ಮ ಕರ್ನಾಟಕದ ಹಿರಿಯ ರಾಜಕಾರಣಿಯ ಕುಟುಂಬದತ್ತ ಬೊಟ್ಟು ತೋರಿಸುವಂತಿಲ್ಲ. ಯಾಕೆಂದರೆ, ದೇಶದಲ್ಲಿ ಇದೆಲ್ಲಾ ಕಾಮನ್..

73ವರ್ಷದ ರಾಂ ವಿಲಾಸ್ ಪಾಸ್ವಾನ್, ಲೋಕ ಜನಶಕ್ತಿ ಪಾರ್ಟಿಯ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಕೇಂದ್ರ ಸಚಿವರೂ ಆಗಿರುವ ಪಾಸ್ವಾನ್, ಬಿಜೆಪಿಯ ಪಾಲಿಸಿ ಪ್ರಕಾರ ವೃದ್ಧಾಶ್ರಮ ಸೇರಲು ಇನ್ನೆರಡು ವರ್ಷ ಬಾಕಿಯಿದೆ.

ಹತ್ತೊಂಬತ್ತು ವರ್ಷದ ಹಿಂದೆ, ತಾನೇ ಹುಟ್ಟುಹಾಕಿದ ಎಲ್ಜೆಪಿ ಪಕ್ಷದ ಅಧ್ಯಕ್ಷ ಹುದ್ದೆಯನ್ನು ತೊರೆಯಲು ಕೇಂದ್ರ ಸಚಿವ ಪಾಸ್ವಾನ್ ಅವರಿಗೆ ಅಂತಹ ಪೈಪೋಟಿ ಏನೂ ಇರಲಿಲ್ಲ. ಆದರೆ, ಪುತ್ರ ವ್ಯಾಮೋಹ ಎನ್ನುವುದು ಯಾರನ್ನೂ ಬಿಡುವುದಿಲ್ಲವೇನೋ?

ಯಾವಾಗಲೂ ಅಧಿಕಾರ ತನ್ನ ಸುತ್ತಮುತ್ತ ಇರಬೇಕೆಂದು ಬಯಸುವ ದೇಶದ ರಾಜಕಾರಣಿಗಳಲ್ಲೊಬ್ಬರು ಪಾಸ್ವಾನ್ ಕೂಡಾ. ಯುಪಿಎ ಮೈತ್ರಿಕೂಟಕ್ಕೆ ನಿಯತ್ತು ತೋರಿಸಿದ್ದ ಪಾಸ್ವಾನ್, 2014ರಲ್ಲಿ ಮೋದಿ ಹವಾ ಜೋರಿದ್ದ ವೇಳೆ, ಎನ್ಡಿಎ ಮೈತ್ರಿಕೂಟದ ಗಾಳಿಗೆ ಒಳಗೆ ತೂರಿಬಿಟ್ಟರು.

ಪಾಸ್ವಾನ್, ಹಾಲೀ ಸರಕಾರದಲ್ಲಿ ಆಹಾರ ಖಾತೆ ಸಚಿವ

ಪಾಸ್ವಾನ್, ಹಾಲೀ ಸರಕಾರದಲ್ಲಿ ಆಹಾರ ಖಾತೆ ಸಚಿವ

ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ರಾಸಾಯನಿಕ, ರಸಗೂಬ್ಬರ ಖಾತೆಯ ಸಚಿವರಾಗಿದ್ದ ರಾಂ ವಿಲಾಸ್ ಪಾಸ್ವಾನ್, ಹಾಲೀ ಸರಕಾರದಲ್ಲಿ ಆಹಾರ ಖಾತೆಯನ್ನು ನಿಭಾಯಿಸುತ್ತಿದ್ದಾರೆ. ಅವರ ಪುತ್ರ ಚಿರಾಗ್ ಪಾಸ್ವಾನ್ ಕೂಡಾ ಜಮಾಯಿ (ಬಿಹಾರ) ಕ್ಷೇತ್ರದ ಲೋಕಸಭಾ ಸದಸ್ಯರು.

ಚಿರಾಗ್ ಪಾಸ್ವಾನ್ ನಿರಾಯಾಸವಾಗಿ ಗೆಲುವು

ಚಿರಾಗ್ ಪಾಸ್ವಾನ್ ನಿರಾಯಾಸವಾಗಿ ಗೆಲುವು

ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಜೊತೆ, ಪಾಸ್ವಾನ್ ಅವರ ಪಕ್ಷ ಹೊಂದಾಣಿಕೆ ಮಾಡಿಕೊಂಡಿದ್ದರಿಂದ, ಚಿರಾಗ್ ಪಾಸ್ವಾನ್ ನಿರಾಯಾಸವಾಗಿ ಗೆಲುವನ್ನು ಸಾಧಿಸಿದ್ದರು. ಈಗ, ತಂದೆ ಹುಟ್ಟುಹಾಕಿದ ಪಕ್ಷಕ್ಕೆ ಚಿರಾಗ್, ವಾರಸುದಾರರಾಗಿದ್ದಾರೆ.

ಮಗನನ್ನು ಅಧ್ಯಕ್ಷನನ್ನಾಗಿ ಮಾಡಲು ಪಾಸ್ವಾನ್ ನೀಡಿದ ಕಾರಣ

ಮಗನನ್ನು ಅಧ್ಯಕ್ಷನನ್ನಾಗಿ ಮಾಡಲು ಪಾಸ್ವಾನ್ ನೀಡಿದ ಕಾರಣ

ಚಿರಾಗ್ ಪಾಸ್ವಾನ್ ಅವರು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಭೆಯಲ್ಲಿ ಸರ್ವಾನುಮತದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಗನನ್ನು ಅಧ್ಯಕ್ಷನನ್ನಾಗಿ ಮಾಡಲು ರಾಮ್ ವಿಲಾಸ್ ಪಾಸ್ವಾನ್ ನೀಡಿದ ಕಾರಣ, "ಯುವ ನಾಯಕತ್ವಕ್ಕಾಗಿ ಕಾರ್ಮಿಕರು ಒತ್ತಾಯಿಸುತ್ತಿದ್ದಾರೆ" ಎಂದು.

ನನಗೆ ಸಂಪೂರ್ಣ ವಿಶ್ವಾಸವಿದೆ

ನನಗೆ ಸಂಪೂರ್ಣ ವಿಶ್ವಾಸವಿದೆ

"ನನಗೆ ಸಂಪೂರ್ಣ ವಿಶ್ವಾಸವಿದೆ, ಬಡವರಿಗೆ ಮತ್ತು ದೀನ ದಲಿತರಿಗೆ ನ್ಯಾಯ ಒದಗಿಸಲು ನನ್ನ ಮಗ ಪಕ್ಷವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುತ್ತಾನೆ. ನನ್ನ ಈ ನಿರ್ಧಾರವನ್ನು ಪಕ್ಷದ ಸಂಸದರು ಆದಿಯಾಗಿ, ಎಲ್ಲರೂ ಬೆಂಬಲಿಸುತ್ತಾರೆ" ಎಂದು ರಾಂ ವಿಲಾಸ್ ಪಾಸ್ವಾನ್ ವಿಶ್ವಾಸದ ಮಾತನ್ನಾಡಿದ್ದಾರೆ.

ಪುತ್ರ ವ್ಯಾಮೋಹದ ಪಟ್ಟಿಗೆ ಇನ್ನೊಂದು ಕುಡಿ

ಪುತ್ರ ವ್ಯಾಮೋಹದ ಪಟ್ಟಿಗೆ ಇನ್ನೊಂದು ಕುಡಿ

"ಪಕ್ಷದ ನಿಲುವಿಗೆ ಧಕ್ಕೆಯಾಗದಂತೆ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಪಾಲಿಸಿಕೊಂಡು ಬರುತ್ತೇನೆ. ಹಿರಿಯ ನಾಯಕರು ಮತ್ತು ಕಾರ್ಮಿಕರೊಂದಿಗೆ ನಿಕಟ ಸಂಪರ್ಕವನ್ನು ಇಟ್ಟುಕೊಂಡು ಮುನ್ನಡೆಯುತ್ತೇನೆ" ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ. ಅಲ್ಲಿಗೆ, ಕುಟುಂಬ ರಾಜಕಾರಣ, ಪುತ್ರ ವ್ಯಾಮೋಹದ ಪಟ್ಟಿಗೆ ಇನ್ನೊಂದು ಕುಡಿ ಸೇರಿದಂತಾಗಿದೆ.

English summary
Union MInister Ram Vilas Paswan Given President Charge Of Lok Janshakti Party To His Son Chirag Paswan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X