ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿತ್ರಪಕ್ಷ ಬಿಜೆಪಿಯೊಂದಿಗೆ ನಿತೀಶ್ ಕುಮಾರ್‌ ಅಸಮಾಧಾನ!

|
Google Oneindia Kannada News

ಪಾಟ್ನಾ, ಮೇ 30: ನಿತೀಶ್ ಕುಮಾರ್ ರಾಜ್ಯಸಭೆಯಲ್ಲಿ ಮೂರನೇ ಅವಧಿಗೆ ಕೇಂದ್ರ ಸಚಿವ ಆರ್‌ಸಿಪಿ ಸಿಂಗ್‌ಗೆ ಟಿಕೆಟ್‌ ನಿರಾಕರಿಸಿದ್ದಾರೆ. ಈ ನಡೆಯೊಂದಿಗೆ ನಿತಿಶ್ ಸದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸಂಪುಟದಲ್ಲಿ ತಮ್ಮ ಜೆಡಿಯುನಿಂದ ಯಾರೂ ಇರುವುದಿಲ್ಲ ಎಂದು ಸೂಚನೆ ನೀಡಿದ್ದಾರೆ. ಇದು ಅವರು ಮಿತ್ರ ಪಕ್ಷವಾದ ಬಿಜೆಪಿಯೊಂದಿಗೆ ಅಸಮಾಧಾನಗೊಂಡಿರುವುದಕ್ಕೆ ಸೂಚನೆಯಾಗಿದೆ.

ಕೇಂದ್ರ ಸರ್ಕಾರದಲ್ಲಿ ಆರ್‌ಸಿಪಿ ಸಿಂಗ್ ಮಾತ್ರ ಜೆಡಿಯು ಸಚಿವರಾಗಿದ್ದಾರೆ. ಅವರು ಬಿಜೆಪಿಯೊಂದಿಗಿನ ಸಂಬಂಧದಲ್ಲಿ ಹೆಚ್ಚು ಹತ್ತಿರದಲ್ಲಿದ್ದಾರೆ. ಸಿಂಗ್‌ ರಾಜ್ಯಸಭಾ ಅವಧಿಯು ಜೂನ್‌ನಲ್ಲಿ ಕೊನೆಗೊಳ್ಳುವುದರಿಂದ ಶೀಘ್ರದಲ್ಲೇ ರಾಜೀನಾಮೆ ನೀಡಬೇಕಾಗಬಹುದು.

ರಾಜ್ಯಸಭೆ ಸ್ಥಾನ ಸಿಗದಿದ್ದಕ್ಕೆ ನಟಿ ನಗ್ಮಾ ಬೇಸರ ರಾಜ್ಯಸಭೆ ಸ್ಥಾನ ಸಿಗದಿದ್ದಕ್ಕೆ ನಟಿ ನಗ್ಮಾ ಬೇಸರ

ತಮ್ಮ ರಾಜೀನಾಮೆ ಕುರಿತ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯಿಸಿ, "ಇದು ಪ್ರಧಾನಿಯ ವಿಶೇಷ ಹಕ್ಕು. ನಾನು ಅವರನ್ನು ದೆಹಲಿಯಲ್ಲಿ ಭೇಟಿಯಾಗುತ್ತೇನೆ. ರಾಜ್ಯಸಭಾ ಸ್ಥಾನವನ್ನು ನಿರಾಕರಿಸಿದ್ದಕ್ಕಾಗಿ ಅವರು ಕೃತಜ್ಞರಾಗಿರಬೇಕು" ಎಂದು ಹೇಳಿದರು.

Breaking: ರಾಜ್ಯಸಭೆ ಚುನಾವಣೆ: ಜೈರಾಮ್‌ ರಮೇಶ್‌ ನಾಮಪತ್ರ ಸಲ್ಲಿಕೆBreaking: ರಾಜ್ಯಸಭೆ ಚುನಾವಣೆ: ಜೈರಾಮ್‌ ರಮೇಶ್‌ ನಾಮಪತ್ರ ಸಲ್ಲಿಕೆ

"ಅವರು ನಿನ್ನೆ ಏನು ನಿರ್ಧರಿಸಿದ್ದಾರೆ, ಅದಕ್ಕೆ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಅವರು ಏನು ನಿರ್ಧರಿಸಿದರೂ ಅದು ನನ್ನ ಹಿತಾಸಕ್ತಿಗೆ ಸಂಬಂಧಿಸಿದೆ, ನಾನು ಯಾರನ್ನೂ ಅಸಮಾಧಾನಗೊಳಿಸುವ ಯಾವ ಕೆಲಸ ಮಾಡಿಲ್ಲ" ಎಂದರು.

ಕಾರ್ಯಕ್ರಮದಲ್ಲಿ ನಿತಿಶ್‌, ಸಿಂಗ್‌ ದೂರ ದೂರ

ಕಾರ್ಯಕ್ರಮದಲ್ಲಿ ನಿತಿಶ್‌, ಸಿಂಗ್‌ ದೂರ ದೂರ

ಪಕ್ಷದ ನಾಯಕರ ಪ್ರಕಾರ ನಿತೀಶ್ ಕುಮಾರ್ ನಿರ್ಲಕ್ಷಿಸಲು ಪ್ರಾರಂಭಿಸಿದಾಗಿನಿಂದ ಮದುವೆಯೊಂದರಲ್ಲಿ ಮುಖ್ಯಮಂತ್ರಿಗಳು ಕೇಂದ್ರ ಸಚಿವರನ್ನು ಸಂಪೂರ್ಣವಾಗಿ ಕಡೆಗಣಿಸುವಂತೆ ಕಾಣಿಸಿಕೊಂಡರು. ಒಂದು ಕಾಲದಲ್ಲಿ ಸಿಂಗ್‌ ನಿತೀಶ್ ಕುಮಾರ್ ಆಪ್ತ ಸಹಾಯಕರಾಗಿದ್ದರು. ಸಿಂಗ್ ತಮ್ಮದು ಯಾವುದೇ ತಪ್ಪಿಲ್ಲ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೊತೆ ಯಾವುದೇ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮೇ 24 ರಿಂದ ಮೇ 31 ರವರೆಗೆ ನಾಮಪತ್ರ ಸಲ್ಲಿಕೆಯಾಗಿತ್ತು ಮತ್ತು ಕ್ಯಾಬಿನೆಟ್ ಮೀಟಿಂಗ್ ಮುಂದಿದೆ. ನಾನು ಪಾಟ್ನಾಗೆ ಹೋಗುತ್ತಿದ್ದೇನೆ. ಇಂತಹ ಪ್ರಶ್ನೆಗಳನ್ನು ನೀವು ಎಲ್ಲಿಂದ ತರುತ್ತೀರಿ? ಎಂದು ಮಾಧ್ಯಮಗಳ ವಿರುದ್ಧ ಗರಂ ಆದರು.

ಕ್ಯಾಬಿನೆಟ್ ಸ್ಥಾನವನ್ನುಕಳೆದುಕೊಳ್ಳಲಿರುವ ಸಿಂಗ್‌

ಕ್ಯಾಬಿನೆಟ್ ಸ್ಥಾನವನ್ನುಕಳೆದುಕೊಳ್ಳಲಿರುವ ಸಿಂಗ್‌

ಸಿಂಗ್ ಅಂತಿಮವಾಗಿ ಕಳೆದ ಗುರುವಾರ ತಮ್ಮ ಪಕ್ಷದ ಮುಖ್ಯಸ್ಥರನ್ನು ಭೇಟಿ ಮಾಡಿದರು. ನಿತೀಶ್ ಕುಮಾರ್ ತಮ್ಮ ಪಟ್ಟಿಯಲ್ಲಿ ಸಿಂಗ್‌ರನ್ನು ಒಳಗೊಂಡಿಲ್ಲ ಎಂದು ಸ್ಪಷ್ಟಪಡಿಸಿದ ಹಿನ್ನೆಲೆ ಕೇಂದ್ರ ಸಚಿವರು ತಮ್ಮ ಕ್ಯಾಬಿನೆಟ್ ಸ್ಥಾನವನ್ನು ಕಳೆದುಕೊಳ್ಳುತ್ತಾರೆ. ನಿತೀಶ್ ಕುಮಾರ್ ಬೆಂಬಲಿಗರ ಪ್ರಕಾರ ಮುಖ್ಯಮಂತ್ರಿಗಳು ಸಿಂಗ್‌ರನ್ನು ಕೇಂದ್ರ ಸರ್ಕಾರದಲ್ಲಿ ತಮ್ಮ ಪಕ್ಷದ ಪ್ರತಿನಿಧಿಯಾಗಿ ಆಯ್ಕೆ ಮಾಡಿದರೂ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಹೆಸರನ್ನು ತಿಳಿಸಿದ್ದರೂ, ನಂತರ ಅವರು ಏನನ್ನೂ ಮಾಡಲಿಲ್ಲಎಂದರು.

ಬಿಜೆಪಿಯೊಂದಿಗೆ ಸೀಟು ಹಂಚಿಕೆ ಒಪ್ಪಂದ ವಿಫಲ

ಬಿಜೆಪಿಯೊಂದಿಗೆ ಸೀಟು ಹಂಚಿಕೆ ಒಪ್ಪಂದ ವಿಫಲ

ನಿತೀಶ್ ಕುಮಾರ್ ಬಿಹಾರದಲ್ಲಿ ಗಣತಿ ನಡೆಸುವ ಮೊದಲ ಹೆಜ್ಜೆಯಾಗಿ ಸರ್ವಪಕ್ಷ ಸಭೆಯನ್ನು ಕರೆದಿದ್ದರು. ಉತ್ತರ ಪ್ರದೇಶ ಚುನಾವಣೆಗೆ ಬಿಜೆಪಿಯೊಂದಿಗೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಳ್ಳಲು ಪಕ್ಷ ವಿಫಲವಾಗಿದೆ ಎಂದು ಆರೋಪಿಸಿ ಪ್ರಚಾರದಿಂದಲೂ ದೂರ ಉಳಿದಿದ್ದರು. ಸಿಂಗ್ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಲಿಲ್ಲ. ನಿತೀಶ್ ಕುಮಾರ್ ಇಫ್ತಾರ್ ಕೂಟವನ್ನು ಸಹ ಕೈಬಿಟ್ಟರು ಮತ್ತು ಅದೇ ಸಮಯದಲ್ಲಿ ಅವರ ಸ್ಥಳೀಯ ಗ್ರಾಮ ಮುಸ್ತಫಾಪುರದಲ್ಲಿ ಈದ್ ಮಿಲನ್ ಕಾರ್ಯಕ್ರಮವನ್ನು ಏರ್ಪಡಿಸಿದ್ದರು.

ಜೆಡಿಯು ಮುಖ್ಯಸ್ಥ ಖಿರು ಮಹ್ತೋ ಅವರ ಆಯ್ಕೆ

ಜೆಡಿಯು ಮುಖ್ಯಸ್ಥ ಖಿರು ಮಹ್ತೋ ಅವರ ಆಯ್ಕೆ

ಜೆಡಿಯು ಪಕ್ಷದ ಬಿಹಾರ ಉಸ್ತುವಾರಿ ಮತ್ತು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಸೇರಿದಂತೆ ಬಿಜೆಪಿ ಹಾಗೂ ಅವರ ನಿಕಟತೆಯ ಬಗ್ಗೆ ನಿತೀಶ್ ಕುಮಾರ್ ಬೇಸರಗೊಂಡಿದ್ದಾರೆ. ಸಿಂಗ್‌ರನ್ನು ಕೈಬಿಡುವುದು ತೀರ್ಮಾನವಾಗಿದ್ದರೂ, ಜಾರ್ಖಂಡ್ ಜೆಡಿಯು ಮುಖ್ಯಸ್ಥ ಖಿರು ಮಹ್ತೋ ಆಯ್ಕೆಯು ನಿತೀಶ್ ಕುಮಾರ್ ಪ್ರಬಲ ಬೆಂಬಲಿಗರಲ್ಲಿಯೂ ಸಹ ಕುತೂಹಲ ಕೆರಳಿಸಿದೆ. ಬಿಹಾರದಲ್ಲಿ ಬದಲಾವಣೆ ಗಾಳಿ ಬೀಸುತ್ತಿರುವ ಸಮಯದಲ್ಲಿ ನೆರೆಯ ಜಾರ್ಖಂಡ್‌ನಲ್ಲಿ ಪಕ್ಷವನ್ನು ಬಲಪಡಿಸಲು ಅವರು ಏಕೆ ಪ್ರಯತ್ನಿಸುತ್ತಾರೆ ಎಂಬುದನ್ನು ಯಾರೂ ಪ್ರಶ್ನೆ ಮಾಡಲು ಸಾಧ್ಯವಾಗಲಿಲ್ಲ.

English summary
Nitish Kumar refuses ticket to Union Minister RCP Singh for third term in Rajya Sabha with this move. If Nitish upset with NDA alliance lead by Prime Minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X