ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಂಧನಕ್ಕೊಳಗಿದ್ದ ಇಬ್ಬರು ಶಂಕಿತ ಉಗ್ರರು ಬಿಚ್ಚಿಟ್ಟ ಬೆಚ್ಚಿಬೀಳಿಸುವ ಸಂಗತಿ

|
Google Oneindia Kannada News

ಪಾಟ್ನಾ, ಸೆಪ್ಟೆಂಬರ್ 21: ಬಿಹಾರದ 13 ಜಿಲ್ಲೆಗಳಲ್ಲಿ ಭಾರಿ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಬಂಧನಕ್ಕೊಳಗಾಗಿದ್ದ ಇಬ್ಬರು ಶಂಕಿತ ಉಗ್ರರು ಮಾಹಿತಿ ನೀಡಿದ್ದಾರೆ.

ಬಿಹಾರದ ಹಲವು ಜಿಲ್ಲೆಗಳಲ್ಲಿ ರೈಲ್ವೆ ಸೇತುವೆಗಳು ಮತ್ತು ಹಳಿಗಳನ್ನು ಗುರಿಯಾಗಿಸಿಕೊಂಡು ಐಎಸ್ಐ ಪ್ರೇರಿತ ಭಯೋತ್ಪಾದಕರ ಗುಂಪು ದಾಳಿ ಮಾಡುವ ಸಾಧ್ಯತೆಯಿದೆ ಎಂದು ದೆಹಲಿಯಲ್ಲಿ ಬಂಧನಕ್ಕೊಳಗಾಗಿರುವ ಎರಡು ಶಂಕಿತ ಐಎಸ್ ಐ ಏಜೆಂಟ್ ಗಳು ತಿಳಿಸಿದ್ದಾರೆ.

ಭಾರತದ ಮೇಲೆ ದಾಳಿ ನಡೆಸಲು ಜೈಶ್‌ ಉಗ್ರರ ಸಂಚು: ವರದಿಭಾರತದ ಮೇಲೆ ದಾಳಿ ನಡೆಸಲು ಜೈಶ್‌ ಉಗ್ರರ ಸಂಚು: ವರದಿ

ಸುಪಾಲ್, ಮೋತಿಹಾರಿ, ಬೆಟ್ಟಿಯಾ, ಸಮಸ್ತಿಪುರ, ದರ್ಭಾಂಗ, ಸೀತಾಮರ್ಹಿ, ಮುಜಫರ್ ಪುರ್, ಖಗಾರಿಯಾ,ಮಧುಬನಿ, ಬೇಗುಸರೈ, ಸಹರ್ಸಾ, ಮಾದೇಪುರ ಮತ್ತು ಪೂರ್ಣಿಯಾ ಜಿಲ್ಲೆಗಳಲ್ಲಿ ರೈಲು ಸೇತುವೆಗಳು ಮತ್ತು ಹಳಿಗಳ ಮೇಲೆ ಐಎಸ್‌ಐ ಬೆಂಬಲಿತ ಭಯೋತ್ಪಾದಕ ಸಂಘಟನೆಗಳು ವಿಧ್ವಂಸಕ ಚಟುವಟಿಕೆಗಳನ್ನು ನಡೆಸಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ಆರ್‌ಪಿಎಫ್ ಮತ್ತು ಜಿಆರ್‌ಪಿ ಸೇರಿದಂತೆ ರೈಲ್ವೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.

Railways Sound Alert In 13 Bihar Districts Against Threat By ISI-backed Terror Outfits

ಅದರಲ್ಲಿ ಸಂಬಂಧಿತ ಭದ್ರತಾ ಏಜೆನ್ಸಿಗಳನ್ನು ವಿಶೇಷ ನಿಗಾದಲ್ಲಿ ಎಲ್ಲಾ ಮುನ್ನೆಚ್ಚರಿಕೆ ಮತ್ತು ರಕ್ಷಣಾತ್ಮಕ ಕ್ರಮಗಳನ್ನು ಕೈಗೊಳ್ಳುವ ಮೂಲಕ ಹೆಚ್ಚಿನ ಎಚ್ಚರಿಕೆಯನ್ನು ವಹಿಸುವಂತೆ ಸೂಚಿಸಲಾಗಿದೆ.

ಮೂರು ಬಿಹಾರ ಜಿಲ್ಲೆಗಳು ಸೇರಿದಂತೆ ದೇಶದ ವಿವಿಧೆಡೆ ಸೇತುವೆಗಳು, ಮೋರಿಗಳು, ರೈಲ್ವೆ ಹಳಿಗಳು, ಜನನಿಬಿಡ ಸ್ಥಳಗಳಲ್ಲಿ ಆರ್‌ಡಿಎಕ್ಸ್ ಸ್ಫೋಟಗಳನ್ನು ನಡೆಸುವ ಉದ್ದೇಶವಿದೆ ಎಂದು ದೆಹಲಿ ಪೊಲೀಸರು ಬಂಧಿಸಿರುವ ಆರೋಪಿಗಳಿಂದ ತಿಳಿದುಬಂದಿದೆ.

ದೆಹಲಿಯಲ್ಲಿ ಬಂಧನಕ್ಕೊಳಗಾಗಿರುವ ಇಬ್ಬರು ಐಎಸ್ಐ ಶಂಕಿತ ಉಗ್ರರಿಂದ ಜಾಗೃತ ದಳ ಮತ್ತಷ್ಟು ಮಾಹಿತಿಗಳನ್ನು ಕಲೆಹಾಕುತ್ತಿದ್ದು, ಈ ಮಧ್ಯೆ ಬಿಹಾರದ ಪೂರ್ವ ಕೇಂದ್ರ ರೈಲ್ವೆಯ ಸಮಸ್ತಿಪುರ ವಿಭಾಗದ ರೈಲ್ವೆ ರಕ್ಷಣಾ ಪಡೆ(ಆರ್ ಪಿಎಫ್) ಅಂತಾರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿರುವ 13 ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಿದೆ.

ಇನ್ನು ಕೆಲವೇ ದಿನಗಳಲ್ಲಿ ನವರಾತ್ರಿ ದುರ್ಗಾ ಪೂಜೆ ಮತ್ತು ಛತ್ ಹಬ್ಬದ ಸಂದರ್ಭದಲ್ಲಿ, ಬಿಹಾರದಲ್ಲಿ ರೈಲು ಪ್ರಯಾಣ ಹೆಚ್ಚಾಗುತ್ತದೆ. ರೈಲ್ವೆ ಸೇತುವೆಗಳು ಮತ್ತು ಮೋರಿಗಳು ಮತ್ತು ಹಳಿಗಳ ಹಲವು ಪ್ರದೇಶಗಳ ಭದ್ರತೆಯು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ರೈಲ್ವೇ ಮೂಲಗಳು ತಿಳಿಸಿವೆ. ಆದ್ದರಿಂದ, ವರದಿಯ ಆಧಾರದ ಮೇಲೆ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರಿ ರೈಲ್ವೆ ಪೊಲೀಸ್ ಅಧೀಕ್ಷಕರಿಗೆ (ಜಿಆರ್‌ಪಿ) ಪತ್ರ ಬರೆಯಲಾಗಿದೆ

ಬಿಹಾರದ 13 ಜಿಲ್ಲೆಗಳಲ್ಲಿ ರೈಲ್ವೆ ಪೊಲೀಸರಿಗೆ ಬರೆದಿರುವ ಅಧಿಕೃತ ಪತ್ರದಲ್ಲಿ ವಿಭಾಗೀಯ ರಕ್ಷಣಾ ಆಯುಕ್ತರು ಸಾಧ್ಯವಾದಷ್ಟು ಕಣ್ಗಾವಲು ಮತ್ತು ಜಾಗ್ರತೆಯನ್ನು ಕಾಪಾಡುವಂತೆ ಹೇಳಿದ್ದಾರೆ.

ಇನ್ನು ಭದ್ರತಾ ಪಡೆಗಳು ನಡೆಸಿರುವ ಸಕಾಲಿಕ ಕಾರ್ಯಾಚರಣೆಯಲ್ಲಿ ಸುಧಾರಿತ ಸ್ಫೋಟಕ ಸಾಧನ ಪತ್ತೆ ಮಾಡಲಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಬಹುದಾಗಿದ್ದ ಭಾರಿ ಅನಾಹುತ ತಪ್ಪಿದಂತಾಗಿದೆ. ತೀವ್ರ ಭದ್ರತೆ ಇರುವ ಗೊಗೊ ಪ್ರದೇಶದಲ್ಲಿ ಐಇಡಿ ಪತ್ತೆಯಾಗಿದೆ.

ಶ್ರೀನಗರ ವಿಮಾನ ನಿಲ್ದಾಣ, ತಾಂತ್ರಿಕ ನೆರವು ಒದಗಿಸುವ ವಿಮಾನ ನಿಲ್ದಾಣ, ಸೇನೆಯ ಪದಾತಿದಳದ ಜಮ್ಮು ಮತ್ತು ಕಾಶ್ಮೀರದ ಮುಖ್ಯ ಕಚೇರಿ ಸೇರಿದಂತೆ ರಕ್ಷಣಾ ಪಡೆ ಹಾಗೂ ಸಾರ್ವಜನಿಕರ ಬಳಕೆಯ ಸೂಕ್ಷ್ಮ ಕಟ್ಟಡಗಳಿರುವ ವಲಯಕ್ಕೆ ಸಮೀಪದಲ್ಲಿ ಸ್ಫೋಟಕ ವಸ್ತು ಪತ್ತೆಯಾಗಿದೆ.

ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸುವ ಚಟುವಟಿಕೆಗಳ ಕುರಿತು ಮಾಹಿತಿಯನ್ನು ಆಧರಿಸಿ ಗೊಗೊ ಪ್ರದೇಶದಲ್ಲಿ ಸೇನೆ ಹಾಗೂ ಪೊಲೀಸರು ಸೋಮವಾರ ರಾತ್ರಿ ಶೋಧ ಕಾರ್ಯಾಚರಣೆ ನಡೆಸಿದ್ದರು.

English summary
The ISI-backed terror groups are likely to target railway bridges and tracks in as many as 13 districts of Bihar along the international border.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X