ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಂಟೀನ್‌ ಆಗಿ ಬದಲಾದ ನಿರುಪಯುಕ್ತ ರೈಲು ಬೋಗಿ

|
Google Oneindia Kannada News

ಪಾಟ್ನಾ, ಫೆಬ್ರವರಿ 05 : ಅಲ್ಲೊಂದು ರೈಲು ಬೋಗಿ ಯಾವುದೇ ಉಪಯೋಗವಿಲ್ಲದೆ ನಿಂತಿತ್ತು. ರೈಲ್ವೆ ಕೋಚ್ ಫ್ಯಾಕ್ಟರಿ ಸಮೀಪದಲ್ಲಿ ಒಳ್ಳೆಯ ಹೋಟೆಲ್ ಇಲ್ಲ ಎಂಬ ದೂರುಗಳು ಇತ್ತು. ಈಗ ರೈಲು ಬೋಗಿಯಲ್ಲಿಯೇ ಕ್ಯಾಂಟೀನ್ ತಲೆ ಎತ್ತಿ ನಿಂತಿದೆ.

ಹೌದು, ಇದು ಬಿಹಾರದ ದಾನ್ಪುರ್ ಕೋಚಿಂಗ್ ಡಿಪೋದ ಕಥೆ. ನಿರುಪಯುಕ್ತವಾಗಿ ನಿಂತಿದ್ದ ರೈಲು ಬೋಗಿಯನ್ನು ನವೀಕರಣ ಮಾಡಿ ಕ್ಯಾಂಟೀನ್‌ ಆಗಿ ಬದಲಾವಣೆ ಮಾಡಲಾಗಿದೆ. ಉದ್ಯೋಗಿಗಳು ಬೋಗಿಯಲ್ಲಿ ಕುಳಿತು ಟೀ, ಉಪಹಾರ ಸವಿಯುತ್ತಿದ್ದಾರೆ.

ಪ್ರಯಾಣಿಕ ಸ್ನೇಹಿಯಾದ ಹುಬ್ಬಳ್ಳಿ ರೈಲು ನಿಲ್ದಾಣ ಪ್ರಯಾಣಿಕ ಸ್ನೇಹಿಯಾದ ಹುಬ್ಬಳ್ಳಿ ರೈಲು ನಿಲ್ದಾಣ

ಕೋಚಿಂಗ್ ಡಿಪೋದ ಅಧಿಕಾರಿ ಅನಿಲ್ ಕುಮಾರ್ ಅವರು ಆಲೋಚನೆಯ ಫಲ ಉದ್ಯೋಗಿಗಳಿಗೆ ಕ್ಯಾಂಟೀನ್ ಸಿಕ್ಕಿದೆ. ನಿರುಪಯುಕ್ತವಾಗಿ ನಿಂತಿದ್ದ ರೈಲ್ವೆ ಬೋಗಿ ಸುಂದರವಾದ ಹೋಟೆಲ್ ಆಗಿ ಬದಲಾಗಿದೆ. ಜನರು ಸಹ ರೈಲು ಬೋಗಿಯ ಕ್ಯಾಂಟೀನ್‌ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ.

ಫೆ.15ರಿಂದ ಹುಬ್ಬಳ್ಳಿ-ವಿಜಯಪುರ ಇಂಟರ್ ಸಿಟಿ ರೈಲು ಆರಂಭ ಫೆ.15ರಿಂದ ಹುಬ್ಬಳ್ಳಿ-ವಿಜಯಪುರ ಇಂಟರ್ ಸಿಟಿ ರೈಲು ಆರಂಭ

Railway Coach Developed As Cafeteria

ಕೋಚಿಂಗ್ ಡಿಪೋದ ಸಮೀಪ ಯಾವುದೇ ಒಳ್ಳೆಯ ಹೋಟೆಲ್ ಇರಲಿಲ್ಲ. ಉದ್ಯೋಗಿಗಳು ಈ ಬಗ್ಗೆ ದೂರು ನೀಡುತ್ತಿದ್ದರು. ಆದ್ದರಿಂದ, ರೈಲ್ವೆ ಕೋಚ್‌ ಅನ್ನು ಹೋಟೆಲ್ ಆಗಿ ಬದಲಾಯಿಸುವ ತೀರ್ಮಾನ ಕೈಗೊಳ್ಳಲಾಯಿತು.

ರೈಲು ಒಂದೂವರೆ ಗಂಟೆ ತಡವಾಗಿದ್ದಕ್ಕೆ 63,000 ರೂ ಪರಿಹಾರ ಪಾವತಿಸಲಿದೆ ಐಆರ್‌ಸಿಟಿಸಿರೈಲು ಒಂದೂವರೆ ಗಂಟೆ ತಡವಾಗಿದ್ದಕ್ಕೆ 63,000 ರೂ ಪರಿಹಾರ ಪಾವತಿಸಲಿದೆ ಐಆರ್‌ಸಿಟಿಸಿ

Railway Coach Developed As Cafeteria

ಪ್ರಾಯೋಗಿಕವಾಗಿ ರೈಲು ಬೋಗಿಯಲ್ಲಿ ಕ್ಯಾಂಟೀನ್ ನಡೆಸಲಾಗುತ್ತಿದೆ. ಕೋಚ್ ಫ್ಯಾಕ್ಟರಿ ಉದ್ಯೋಗಿಗಳು ಮತ್ತು ಜನರು ಬೋಗಿ ಕ್ಯಾಂಟೀನ್‌ಗೆ ಭೇಟಿ ನೀಡಿ, ಉಪಹಾರ, ಟೀ ಸವಿಯುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

English summary
An unused railway coach at Patna's Danapur Coaching Depot has been developed into a cafeteria. It is being run on a trial basis for both the staff as well as the public.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X