• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅತ್ಯಾಚಾರಿಯ ಹೆಂಡ್ತಿಯಾದ್ರೇನಂತೆ? ನಮ್ಮ ಜಾತಿಯವರು ಗೆಲ್ಲಬೇಕಷ್ಟೇ!

|

ನಾವಡಾ (ಬಿಹಾರ), ಏಪ್ರಿಲ್ 05 : ಚುನಾವಣೆ ಸಂದರ್ಭದಲ್ಲಿ ಜಾತ್ಯತೀತತೆ ಎನ್ನುವುದು ಬರೀ ಬೊಗಳೆಯಷ್ಟೆ. ಕೆಲವರು ಸಂದರ್ಭಕ್ಕೆ ತಕ್ಕಂತೆ, ಆಯಾ ಜಾತಿಯವರನ್ನು ಆಕರ್ಷಿಸಲು ವೇಷಭೂಷಣ ತೊಡುತ್ತಾರೆ, ಕೆಲವರು ತಮ್ಮದೇ ಜಾತಿಯವರನ್ನು ಗೆಲ್ಲಿಸಲು ಎಂಥ ಕೆಲಸಕ್ಕೂ ಹೇಸುವುದಿಲ್ಲ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಅತ್ಯಾಚಾರ ಆರೋಪಿಯೊಬ್ಬರ ಹೆಂಡತಿಯನ್ನು, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಬೆಂಬಲಿಸಿದ್ದಲ್ಲದೆ, ಚುನಾವಣೆಯಲ್ಲಿ ಬೆಂಬಲಿಸಿದ್ದಲ್ಲದೆ, ಅವರ ಜಾತಿಯನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ ಮತ್ತು ಜಾತಿ ನೆಪ ಮಾಡಿಕೊಂಡು ಸರಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಮೈತ್ರಿ ಬಿಡಲು ಸಿದ್ಧರಾಗಿದ್ದರೇ ನಿತೀಶ್?: ಲಾಲು ಹೇಳಿದ ಸ್ಫೋಟಕ ಮಾಹಿತಿ

ಅತ್ಯಾಚಾರ ಆರೋಪಿ ರಾಜಬಲ್ಲಭ್ ಯಾದವನನ್ನು ಸುಳ್ಳು ಅತ್ಯಾಚಾರದ ಆರೋಪ ಹೊರಿಸಿ ನಿತಿಶ್ ಕುಮಾರ್ ನೇತೃತ್ವದ ಸರಕಾರ ಜೈಲಿಗೆ ಹಾಕಿದೆ ಮತ್ತು ಯಾದವ ಸಮುದಾಯದ ಮಾನವನ್ನು ಹರಾಜು ಹಾಕುತ್ತಿದೆ ಎಂದು ರಾಬ್ಡಿ ದೇವಿ ಆರೋಪಿಸಿದ್ದಾರೆ.

ರಾಷ್ಟ್ರೀಯ ಜನತಾ ದಳದ ಅಭ್ಯರ್ಥಿಯಾಗಿ ವಿಭಾ ದೇವಿ ಬಿಹಾರದ ನಾವಡಾ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ರಾಬಬಲ್ಲಭ್ ಯಾದವ್ ಹೆಂಡತಿಯಾಗಿರುವ ವಿಭಾ ಯಾದವಳನ್ನು ಜನರು ಗೆಲ್ಲಿಸಬೇಕೆಂದು ರಾಬ್ಡಿದೇವಿ ಯಾಚಿಸಿದರು.

ಬಿಹಾರದಲ್ಲಿ ಲಾಲೂ ಆರ್‌ಜೆಡಿ ಛಿದ್ರ? ದಾಯಾದಿ ಕಲಹಕ್ಕೆ ಕಾಂಗ್ರೆಸ್ ಬೇಸ್ತು

ಓರ್ವ ಅಪ್ರಾಪ್ತೆಯ ಮೇಲೆ ರಾಬಬಲ್ಲಭ್ ಯಾದವ್ ಅತ್ಯಾಚಾರ ಎಸಿಗಿದ್ದಕ್ಕಾಗಿ ಆತನಿಗೆ 2016ರಲ್ಲಿಯೇ ಪಟ್ನಾದ ಕೋರ್ಟ್ ಶಿಕ್ಷೆ ನೀಡಿತ್ತು. ನಿತಿಶ್ ಕುಮಾರ್ ಸರಕಾರ ಮಾಡಿದ ಷಡ್ಯಂತ್ರದಿಂದ ಆತ ಸುಳ್ಳು ಆರೋಪ ಹೊತ್ತು ಜೈಲಿಗೆ ಕಳುಹಿಸಲಾಗಿದೆ ಎಂಬುದು ರಾಬ್ಡಿದೇವಿಯ ಆರೋಪ. ಆದರೆ, ಜೈಲಿಗೆ ಕಳಿಸಿದ್ದು ಕೋರ್ಟ್ ಅಲ್ಲವೆ?

ಚುನಾವಣೆ ಗೆಲ್ಲೋಕೆ ಬೇಕಾಗಿರೋದು ಮೂರೇ ಮೂರು:ಜಾತಿ, ಜಾತಿ ಮತ್ತು ಜಾತಿ!

ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಬಹುಕೋಟಿ ಮೇವು ಹಗರಣದ ಪ್ರಮುಖ ಆರೋಪಿ ಲಾಲೂ ಪ್ರಸಾದ್ ಯಾದವ್ ಅವರ ಹೆಂಡತಿಯಾಗಿರುವ ರಾಬ್ಡಿ ದೇವಿ ಅವರು, ಐಆರ್‌ಸಿಟಿಸಿ ಹಗರಣದಲ್ಲಿ ತಮ್ಮ ಕುಟುಂಬವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸುಳ್ಳು ಆರೋಪ ಹೊರಿಸಿ ಸಿಲುಕಿಸಿದೆ ಎಂದೂ ಆರೋಪಿಸಿದರು.

ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?

ಲಾಲೂಜಿ ಮತ್ತು ಅವರ ಕುಟುಂಬ ಎಷ್ಟು ಮುಗ್ಧ ಎಂದು ಎಲ್ಲರಿಗೂ ಗೊತ್ತು. ಜನರಿಗೆ ಸತ್ಯ ಏನೆಂಬುದು ಗೊತ್ತು. ಲಾಲೂಜಿ ಅವರು ಕೇಂದ್ರ ರೈಲ್ವೆ ಸಚಿವರಾಗಿದ್ದಾಗ ಯಾವುದೇ ಭ್ರಷ್ಟಾಚಾರ ನಡೆದಿಲ್ಲ ಎಂದು ಭಾರತೀಯ ರೈಲ್ವೆಯ ಅಧಿಕಾರಿಗಳೇ ಹೇಳಿದ್ದಾರೆ ಎಂಬುದು ರಾಬ್ಡಿ ಅವರ ಮಾತು.

ಬಿಹಾರದಲ್ಲಿ ಏಪ್ರಿಲ್ 11ರಿಂದ ಮೇ 19ರವರೆಗೆ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಮೇ 23ರಂದು ಮತಎಣಿಕೆ ಆಗಿ ಫಲಿತಾಂಶ ದೊರೆಯಲಿದೆ.

English summary
Lok Sabha Elections 2019 : Former CM of Bihar Rabri Devi is seeking vote for wife of rape accused and asking people to vote based on their caste.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more