ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಸ್ಮತ್ ಕಿ ಹವಾ: ನಿತೀಶ್ ಕುಮಾರ್-ಲಾಲೂ ಪ್ರಸಾದ್ ಯಾದವ್ ಮೀಮ್ ಭಾರಿ ವೈರಲ್

|
Google Oneindia Kannada News

ಬಿಹಾರದಲ್ಲಿ ನಿತೀಶ್ ಕುಮಾರ್ ಬಿಜೆಪಿಯೊಂದಿಗಿನ ಮೈತ್ರಿ ಅಂತ್ಯಗೊಳಿಸಿದ್ದಾರೆ. ಹೊಸ ಸರ್ಕಾರ ರಚಿಸಲು ವೈರಿಯಾಗಿ ಮಾರ್ಪಟ್ಟಿದ್ದ ತಮ್ಮ ಹಳೆಯ ಸ್ನೇಹಿತ ಲಾಲೂ ಪ್ರಸಾದ್ ಯಾದವ್ ಅವರ ಪಕ್ಷದ ಜೊತೆ ಮತ್ತೆ ಒಂದಾಗುತ್ತಿದ್ದಾರೆ. ಲಾಲೂ-ನಿತೀಶ್ ಪಕ್ಷಗಳ ಮೈತ್ರಿ ಕುರಿತಂತೆ ಹಲವು ಮೀಮ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

Recommended Video

Bihar Politics : ಬಿಹಾರದ ಸಿಎಂ ನಿತೀಶ್ ಕುಮಾರ್ ಮಹಾ ಪಲ್ಟಿ ರಾಜಕೀಯ | Oneindia Kannada

ಒಂದು ಹಳೆಯ ಮೀಮ್‌ ಒಂದು ಈಗ ಮತ್ತೆ ಚಾಲ್ತಿಗೆ ಬಂದಿದ್ದು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಬಿಹಾರದ ರಾಜಕೀಯ ಅನಿರೀಕ್ಷಿತತೆಯನ್ನು ಈ ಮೀಮ್ ಸೂಚಿಸುತ್ತದೆ.

ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ನಿತೀಶ್ ಕುಮಾರ್, ತೇಜಸ್ವಿ ಯಾದವ್ಇಂದು ಪ್ರಮಾಣ ವಚನ ಸ್ವೀಕರಿಸಲಿರುವ ನಿತೀಶ್ ಕುಮಾರ್, ತೇಜಸ್ವಿ ಯಾದವ್

1951ರಲ್ಲಿ ಬಿಡುಗಡೆಯಾದ ಅಲ್ಬೆಲಾ ಚಿತ್ರದ 'ಕಿಸ್ಮತ್ ಕಿ ಹವಾ' ಹಾಡು ಹಿನ್ನಲೆಯಲ್ಲಿ ಪ್ಲೇ ಆಗುವುದರೊಂದಿಗೆ, ಹಾಡಿನ ಸಾಹಿತ್ಯಕ್ಕೆ ಲಾಲೂ ಪ್ರಸಾದ್ ಯಾದವ್ ಮತ್ತು ನಿತೀಶ್ ಕುಮಾರ್ ಲಿಂಪ್‌ ಸಿಂಕ್ ಮಾಡಲಾಗಿದೆ. ಅನಿಮೇಷನ್ ಬಳಸಿ ಲಿಪ್‌ಸಿಂಕ್ ಮಾಡಿದ್ದು, ಈಗ ಭಾರಿ ವೈರಲ್ ಆಗಿದೆ.

Qismat Ki Hawa: Watch The Meme Went Viral After Nitish Kumar Alliance With Lalus Party

ವಿಧಿಯ ಗಾಳಿಯು ಕೆಲವೊಮ್ಮೆ ಸೌಮ್ಯವಾಗಿರುತ್ತದೆ ಮತ್ತು ಕೆಲವೊಮ್ಮೆ ಕಠಿಣವಾಗಿರುತ್ತದೆ ಎನ್ನುವ ಅರ್ಥ ಬರುವ ಹಾಡನ್ನು ಸಿ ರಾಮಚಂದ್ರ ಅವರು ಹಾಡಿದ್ದಾರೆ.

ಪ್ರಸ್ತುತ ಸನ್ನಿವೇಶದಲ್ಲಿ ಸಂಯುಕ್ತ ಜನತಾದಳ ಬಿಜೆಪಿಯನ್ನು ತೊರೆದು ಅಧಿಕಾರಕ್ಕಾಗಿ ಮತ್ತೊಮ್ಮೆ ರಾಷ್ಟ್ರೀಯ ಜನತಾ ದಳದ ಜೊತೆ ಕೈ ಜೋಡಿಸಿರುವ ಸನ್ನಿವೇಶಕ್ಕೆ ಈ ಹಾಡು ಹೊಂದಿಕೆಯಾಗುತ್ತದೆ. ಬಿಹಾರ ರಾಜಕೀಯ ದೊಂಬರಾಟವನ್ನು ವಿಡಂಬನೆ ಮಾಡಲು ಈ ಮೀಮ್ ಸೃಷ್ಟಿಸಲಾಗಿದೆ.

ಟ್ವಿಟರ್ ನಲ್ಲಿ ಭಾರಿ ವೈರಲ್ ಆದ ಮೀಮ್

ಟ್ವಿಟರ್ ನಲ್ಲಿ ಈ ಮೀಮ್ ಭಾರಿ ವೈರಲ್ ಆಗಿದ್ದು, ಹಲವರು ಮೀಮ್ ಸೃಷ್ಟಿಸಿರುವ ಕಲಾವಿದನಿಗೆ ಶಹಬ್ಬಾಸ್ ಎಂದಿದ್ದಾರೆ. ನಿತೀಶ್ ಕುಮಾರ್ ಅವರಿಗೆ ಗಾಳಿ ಯಾವಾಗಲೂ ಅನುಕೂಲಕರವಾಗಿದೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ತಮ್ಮ ರಾಜಕೀಯ ತಂತ್ರಗಳಿಂದ ಅಧಿಕಾರವನ್ನು ನಿತೀಶ್ ಕುಮಾರ್ ಉಳಿಸಿಕೊಂಡಿದ್ದಾರೆ ಎಂದು ಸೂಚ್ಯವಾಗಿ ಹೇಳಿದ್ದಾರೆ.

"ಆದರೆ, ನಿತೀಶ್ ಕುಮಾರ್ ಗೆ ಕಿಸ್ಮತ್ ಕಿ ಹವಾ ಯಾವಾಗಲೂ ಗರಂ!" ಮತ್ತೊಬ್ಬ ಬಳಕೆದಾರರು ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಜೊತೆ ಮೈತ್ರಿ ಮುರಿದುಕೊಂಡಿರುವ ನಿತೀಶ್ ಕುಮಾರ್ ಆರ್‌ಜೆಡಿ ಜೊತೆ ಸೇರಿ ಸರ್ಕಾರ ರಚನೆ ಮಾಡಲಿದ್ದಾರೆ. ಬುಧವಾರ ಬಿಹಾರ ಮುಖ್ಯಮಂತ್ರಿಯಾಗಿ ಎಂಟನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಲಾಲು ಯಾದವ್ ಅವರ ಪುತ್ರ ಮತ್ತು ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸೋಮವಾರ ಎನ್‌ಡಿಎ ಸರ್ಕಾರದಿಂದ ಹೊರನಡೆಯುವುದಾಗಿ ಘೋಷಣೆ ಮಾಡಿದ್ದರು. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಸಮ್ಮಿಶ್ರ ಸರ್ಕಾರವನ್ನು ಮಧ್ಯದಲ್ಲೇ ತೊರೆದ ನಿತೀಶ್ ಕುಮಾರ್ ವಿರುದ್ಧ ಬಿಜೆಪಿ ಕೆಂಡಾಮಂಡಲವಾಗಿದೆ. ನಿತೀಶ್ ಕುಮಾರ್ ಜನರ ಆದೇಶಕ್ಕೆ ದ್ರೋಹ ಬಗೆದಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

English summary
Social media is abuzz with memes After Nitish Kumar Alliance With his friend-turned-foe-turned-friend Lalu Yadav's party. One such meme that has now resurfaced and is being widely shared, points to the unpredictability of Bihar politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X