ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲೂ ಪ್ರಸಾದ್ ಜೈಲು ಕೋಣೆಯಲ್ಲಿ ಫೋನ್‌ಗಾಗಿ ಹುಡುಕಾಟ

|
Google Oneindia Kannada News

ರಾಂಚಿ, ಏಪ್ರಿಲ್ 3: ಜೈಲಿನ ನಿಯಮಾವಳಿಗಳನ್ನು ಉಲ್ಲಂಘಿಸಿ ಆರ್‌ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಅವರು ತಮ್ಮ ರಾಜಕೀಯ ಸಹವರ್ತಿಗಳೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಕಾರಾಗೃಹ ಅಧಿಕಾರಿಗಳು ಮಂಗಳವಾರ ಅವರ ವಾರ್ಡ್‌ನಲ್ಲಿ ತಪಾಸಣೆ ನಡೆಸಿದರು. ಆದರೆ, ಆಕ್ಷೇಪಾರ್ಹ ವಸ್ತುಗಳಾವವೂ ಪತ್ತೆಯಾಗಲಿಲ್ಲ ಎಂದು ತಿಳಿದುಬಂದಿದೆ.

ಬಿಸ್ರಾ ಮುಂಡಾ ಕಾರಾಗೃಹ ಅಧಿಕಾರಿಗಳು ಮತ್ತು ರಾಂಚಿ ಜಿಲ್ಲಾ ಪೊಲೀಸರ ಜಂಟಿ ತಂಡವು ತಪಾಸಣೆ ನಡೆಸಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಲಾಲೂ ಕುಟುಂಬದಲ್ಲಿ ಕಿರಿಕ್! ಪಕ್ಷದಲ್ಲಿನ ಸ್ಥಾನ ತೊರೆದ ತೇಜ್ ಪ್ರತಾಪ್ ಲಾಲೂ ಕುಟುಂಬದಲ್ಲಿ ಕಿರಿಕ್! ಪಕ್ಷದಲ್ಲಿನ ಸ್ಥಾನ ತೊರೆದ ತೇಜ್ ಪ್ರತಾಪ್

ಮೇವು ಹಗರಣದ ನಾಲ್ಕು ಪ್ರಕರಣಗಳಲ್ಲಿ ರಾಂಚಿಯ ಸಿಬಿಐನ ವಿಭಿನ್ನ ನ್ಯಾಯಾಲಯಗಳಿಂದ ಶಿಕ್ಷೆಗೆ ಒಳಗಾಗಿರುವ ಲಾಲೂ, 2017ರ ಡಿಸೆಂಬರ್‌ನಿಂದ ಜೈಲಿನಲ್ಲಿದ್ದಾರೆ. ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಅವರು ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ದಾಖಲಾಗಿದ್ದಾರೆ.

 police inspected lalu prasad jail ward over allegation of using phone with political associates

'ಜೈಲು ಅಧಿಕಾರಿಗಳು ಮತ್ತು ಜಿಲ್ಲಾ ಪೊಲೀಸರು ಮಂಗಳವಾರ ಪರಿಶೀಲನೆ ನಡೆಸಿದೆವು. ಅಲ್ಲಿ ಆಕ್ಷೇಪಾರ್ಹವಾದದ್ದು ಏನೂ ಸಿಗಲಿಲ್ಲ' ಎಂದು ಜಿಲ್ಲಾ ಪೊಲೀಸ್ ಉಪ ವರಿಷ್ಠಾಧಿಕಾರಿ ದೀಪಕ್ ಕುಮಾರ್ ಪಾಂಡೆ ತಿಳಿಸಿದ್ದಾರೆ.

ಐಆರ್ ಸಿಟಿಸಿ ಹಗರಣ: ಲಾಲೂ, ಪತ್ನಿ, ಪುತ್ರಗೆ ಜಾಮೀನುಐಆರ್ ಸಿಟಿಸಿ ಹಗರಣ: ಲಾಲೂ, ಪತ್ನಿ, ಪುತ್ರಗೆ ಜಾಮೀನು

ಕಾರಾಗೃಹ ಶಿಕ್ಷೆಗೆ ಒಳಗಾಗಿದ್ದರೂ ಲಾಲೂ ಪ್ರಸಾದ್ ಅವರು ಕಾನೂನು ಮೀರಿ ಫೋನ್ ಮೂಲಕ ತಮ್ಮ ಸಹವರ್ತಿಗಳೊಂದಿಗೆ ಸಂಪರ್ಕದಲ್ಲಿ ಇದ್ದಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗಿತ್ತು.

English summary
Prison officers and Disctrict police team conducted a inspection in RJD President Lalu Prasad ward over a allegation of using phone to talk with his political associates in violation of jail manual.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X