ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಜಾಫರ್ ಪುರ್ ಪ್ರಕರಣ: ಬಿಹಾರದ ನಿತೀಶ್ ಸರಕಾರಕ್ಕೆ ಚಾಟಿ ಏಟು

|
Google Oneindia Kannada News

ಪಾಟ್ನಾ (ಬಿಹಾರ), ಫೆಬ್ರವರಿ 16:ಮುಜಾಫರ್ ಪುರ್ ಬಾಲಿಕಾ ಮಂದಿರದ ಪ್ರಕರಣದ ವಿಚಾರಣೆಯನ್ನು ನಿಗದಿತ ಆವಧಿಯೊಳಗೆ ಪೂರ್ಣಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಹಾರ ಸರಕಾರ ಕುರುಡಾಗಿ ವರ್ತಿಸಿದೆ ಎಂದು ಆರೋಪಿಸಲಾಗಿತ್ತು. ಮುಜಾಫರ್ ಪುರ್ ನ ಪೋಕ್ಸೊ ವಿಶೇಷ ನ್ಯಾಯಾಲಯವು ಅರ್ಜಿಯನ್ನು ಪರಾಮರ್ಶಿಸಲು ಸಿಬಿಐಗೆ ವರ್ಗಾಯಿಸಿದೆ.

ಮುಜಾಫರ್ ಪುರ್ ಪ್ರಕರಣದಲ್ಲಿ ಆರೋಪಿ ಆಗಿರುವ ಅಶ್ವನಿ ಕುಮಾರ್ ಅರ್ಜಿ ಹಾಕಿದ್ದರು. ವೈದ್ಯನಂತೆ ಅಶ್ವನಿ ಕುಮಾರ್ ಬಾಲಿಕಾ ಮಂದಿರಕ್ಕೆ ಭೇಟಿ ನೀಡಿ, ಲೈಂಗಿಕ ದೌರ್ಜನ್ಯ ನಡೆಸುವ ಮುನ್ನ ಮತ್ತು- ಉದ್ದೀಪನ ಬರುವ ಔಷಧಗಳನ್ನು ನೀಡುವುದರ ನಿಗಾ ಮಾಡುತ್ತಿದ್ದರು ಎಂಬ ಆರೋಪ ಇದೆ.

ಮುಜಫರಪುರ ಅತ್ಯಾಚಾರ : ಸಿಬಿಐ, ಕೇಂದ್ರಕ್ಕೆ ಸುಪ್ರೀಂ ಚಾಟಿಯೇಟುಮುಜಫರಪುರ ಅತ್ಯಾಚಾರ : ಸಿಬಿಐ, ಕೇಂದ್ರಕ್ಕೆ ಸುಪ್ರೀಂ ಚಾಟಿಯೇಟು

ಟಾಟಾ ಇನ್ ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ನಿಂದ ಈ ಬಾಲಿಕಾ ಮಂದಿರದ ಬಗ್ಗೆ ಭೀಕರ ಸತ್ಯಗಳನ್ನು ಬೆಳಕಿಗೆ ತಂದ ನಂತರವೂ ರಾಜ್ಯ ಸರಕಾರದಿಂದ ಹೋಗುತ್ತಿದ್ದ ಅನುದಾನ ನಿಂತಿರಲಿಲ್ಲ ಎಂಬ ಆರೋಪ ಕೂಡ ಇದೆ. ಕಳೆದ ವರ್ಷ ಟಾಟಾ ಸಂಸ್ಥೆ ವರದಿ ನೀಡಿದ ನಂತರವೇ ಈ ಪ್ರಕರಣ ಬೆಳಕಿಗೆ ಬಂದಿತ್ತು.

Nitish Kumar

ಕಳೆದ ವರ್ಷದ ಮೇ ತಿಂಗಳಲ್ಲಿ ಹಲವರ ವಿರುದ್ಧ ಎಫ್ ಐಆರ್ ಆಗಿತ್ತು. ಜತೆಗೆ ಬಂಧನ ಕೂಡ ಆಗಿತ್ತು. ಜುಲೈನಲ್ಲಿ ಈ ವಿಚಾರವನ್ನು ಸಿಬಿಐಗೆ ವರ್ಗಾಯಿಸಲಾಯಿತು. ಬಿಹಾರದ ಸಮಾಜ ಕಲ್ಯಾಣ ಸಚಿವರಾಗಿದ್ದ ಮಂಜು ವರ್ಮಾ ರಾಜೀನಾಮೆ ನೀಡಿದರು. ಆಕೆಯ ಪತಿ ಹಾಗೂ ಬಾಲಿಕಾ ಮಂದಿರದ ಮಾಲೀಕರೂ ಆಗಿದ್ದವರಿಗೆ ಆರೋಪಿ ಜತೆಗೆ ನಂಟಿತ್ತು ಎಂಬ ಆರೋಪ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

ಆರೋಪಿಗಳ ಪೈಕಿ ಬ್ರಜೇಶ್ ಠಾಕೂರ್ ನನ್ನು ಪಟಿಯಾಲ ಜೈಲಿನಲ್ಲಿ ಇರಿಸಲಾಯಿತು. ಸುಪ್ರೀಂ ಕೋರ್ಟ್ ಆದೇಶದ ಅನ್ವಯ ಆ ಕ್ರಮ ತೆಗೆದುಕೊಳ್ಳಲಾಗಿತ್ತು. ಇನ್ನು ಆತನ ಇತರ ಕೆಲ ಸಹಚರರು, ಸರಕಾರಿ ಅಧಿಕಾರಿಗಳನ್ನು ಪಾಟ್ನಾ, ಮುಜಾಫರ್ ಪುರ್ ಜೈಲಿನಲ್ಲಿ ಇಡಲಾಯಿತು.

ಅಶ್ಲೀಲ ಹಾಡಿಗೆ ನರ್ತಿಸುವಂತೆ ಮಾಡಿ, ಮತ್ತು ಬರಿಸಿ ಬಾಲಕಿಯರ ರೇಪ್!ಅಶ್ಲೀಲ ಹಾಡಿಗೆ ನರ್ತಿಸುವಂತೆ ಮಾಡಿ, ಮತ್ತು ಬರಿಸಿ ಬಾಲಕಿಯರ ರೇಪ್!

ಬಿಹಾರ ರಾಜ್ಯದಾದ್ಯಂತ ಇರುವ ಬಾಲಿಕಾ ಮಂದಿರಗಳಲ್ಲಿ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಇರುವ ಎಲ್ಲ ಪ್ರಕರಣಗಳನ್ನು ತನಿಖೆಗೆ ಕೈಗೆತ್ತಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಈಚೆಗೆ ಸಿಬಿಐಗೆ ನಿರ್ದೇಶನ ನೀಡಿದೆ.

English summary
A special POCSO court in Muzaffarpur has forwarded a petition (which accuses the Bihar government of turning a blind eye into a time-based inquiry in the Muzaffarpur shelter case) to the CBI to look into it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X