ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡನೇ ಮದುವೆಯಾಗಲು ಸರ್ಕಾರಿ ನೌಕರರಿಗೆ ಅನುಮತಿ ಕಡ್ಡಾಯ!

|
Google Oneindia Kannada News

ಪಾಟ್ನಾ,ಜುಲೈ.16: ಎರಡನೇ ಬಾರಿಗೆ ಮದುವೆಯಾಗಲು ಬಯಸುವ ಬಿಹಾರ ಸರ್ಕಾರದ ಉದ್ಯೋಗಿಗಳು ಈಗ ತಮ್ಮ ಇಲಾಖೆಗಳಿಗೆ ಸೂಚನೆ ನೀಡಿ ಅಗತ್ಯ ಅನುಮತಿಯನ್ನು ಪಡೆಯಬೇಕು ಎಂದು ಆದೇಶ ಹೊರಡಿಸಲಾಗಿದೆ.

ರಾಜ್ಯ ಸರ್ಕಾರವು ಹೊಸ ಅಧಿಸೂಚನೆಯನ್ನು ಹೊರಡಿಸಿದ್ದು, ಎಲ್ಲಾ ಸರ್ಕಾರಿ ಅಧಿಕಾರಿಗಳು ತಮ್ಮ ವೈವಾಹಿಕ ಸ್ಥಿತಿಯ ಬಗ್ಗೆ ತಿಳಿಸಲು ಮತ್ತು ಅಗತ್ಯ ಅನುಮತಿ ಪಡೆದ ನಂತರವೇ ಎರಡನೇ ಮದುವೆಗೆ ಅರ್ಹರು ಎಂದು ನಿರ್ದೇಶಿಸಿದೆ. ಅಧಿಸೂಚನೆಯ ಪ್ರಕಾರ ಎರಡನೇ ಬಾರಿಗೆ ಮದುವೆಯಾಗಲು ಯೋಜಿಸುವ ಯಾವುದೇ ಉದ್ಯೋಗಿ ಮೊದಲು ಅವನ ಅಥವಾ ಅವಳ ಸಂಗಾತಿಯಿಂದ ಕಾನೂನುಬದ್ಧ ಪ್ರತ್ಯೇಕತೆ (ವಿಚ್ಚೇದನ) ಯನ್ನು ಪಡೆಯಬೇಕು ಮತ್ತು ಸಂಬಂಧಿಸಿದ ಇಲಾಖೆಗೆ ತಿಳಿಸಬೇಕು.

ಹೀಗೊಂದು ಸಮೀಕ್ಷೆ: ಮದುವೆ ಬೇಡವೆನ್ನುತ್ತಿದ್ದಾರೆ ಭಾರತದ ಯುವಜನತೆ!ಹೀಗೊಂದು ಸಮೀಕ್ಷೆ: ಮದುವೆ ಬೇಡವೆನ್ನುತ್ತಿದ್ದಾರೆ ಭಾರತದ ಯುವಜನತೆ!

ಉದ್ಯೋಗಿಯ ಮೊದಲ ಪತ್ನಿ ಅಥವಾ ಪತಿ ವಿರೋಧಿಸಿದರೆ, ಎರಡನೇ ಪತ್ನಿ ಅಥವಾ ಪತಿಗೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ನಿರಾಕರಿಸಲಾಗುತ್ತದೆ. ಏತನ್ಮಧ್ಯೆ, ಸರ್ಕಾರಿ ನೌಕರನು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೆ ಎರಡನೇ ಮದುವೆಯಾಗಿ ಸೇವಾ ಅವಧಿಯಲ್ಲಿ ಮರಣಹೊಂದಿದರೆ, ಅವನ ಅಥವಾ ಅವಳ ಎರಡನೇ ಹೆಂಡತಿ / ಪತಿ ಮತ್ತು ಅವರ ಮಕ್ಕಳು ಅನುಕಂಪದ ಆಧಾರದ ಮೇಲೆ ಕೆಲಸ ಪಡೆಯಲು ಅರ್ಹರಾಗಿರುವುದಿಲ್ಲ. ರಾಜ್ಯ ಸರ್ಕಾರ ಮೊದಲ ಪತ್ನಿಯ ಮಕ್ಕಳಿಗೆ ಆದ್ಯತೆ ನೀಡಲಿದೆ ಎಂದು ಹೇಳಿದೆ.

Permission for second marriage is mandatory for government employees!

ಸಾಮಾನ್ಯ ಆಡಳಿತವು ಎಲ್ಲಾ ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ), ಡಿಜಿಪಿ ಹೋಮ್ ಗಾರ್ಡ್, ಡಿಜಿಪಿ ಕಾರಾಗೃಹ ಮತ್ತು ಸಂಬಂಧಪಟ್ಟ ಪ್ರತಿಯೊಬ್ಬ ಅಧಿಕಾರಿಯನ್ನು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅಧಿಸೂಚನೆ ಜಾರಿಗೊಳಿಸಲು ಸೂಚಿಸಿದೆ.

Permission for second marriage is mandatory for government employees!

ಸರ್ಕಾರ ನಿಗದಿಪಡಿಸಿದ ಎಲ್ಲಾ ನಿಯಮಾವಳಿಗಳನ್ನು ಪೂರ್ಣಗೊಳಸಿದ ನಂತರವೇ ಮರು ಮದುವೆ ಮಾನ್ಯವಾಗಿರುತ್ತದೆ. ಒಂದು ವೇಳೆ ನಿಯಮ ಮೀರಿದರೆ ಸರ್ಕಾರದ ಎಲ್ಲ ಸೌಲಭ್ಯಗಳು ನಿರ್ಬಂಧಿಸಲ್ಪಡುತ್ತವೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಕೌಟುಂಬಿಕ ಸಮಸ್ಯೆಗಳನ್ನು ನಿವಾರಿಸುವಲ್ಲಿ ಬಿಹಾರ ಸರ್ಕಾರದ ಕ್ರಮ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ.

English summary
An order has been issued that Bihar government employees who want to marry for the second time must now notify their respective departments and obtain necessary permission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X