ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಪರೀಕ್ಷೆ ತಪ್ಪಿಸಿಕೊಳ್ಳಲು ಹಾರಿಬಿದ್ದು ಓಡಿದ ಜನ

|
Google Oneindia Kannada News

ಬಕ್ಸರ್, ಏಪ್ರಿಲ್ 17: ಕೋವಿಡ್ ಪರೀಕ್ಷೆಯ ಕಾರಣದಿಂದ ಸಣ್ಣ ಮಕ್ಕಳು ಸೇರಿದಂತೆ ಹತ್ತಾರು ಮಂದಿ ರೈಲ್ವೆ ನಿಲ್ದಾಣದಿಂದ ಹುಚ್ಚೆದ್ದು ಹೊರಗೆ ಓಡಿದ ಘಟನೆ ಬಿಹಾರದ ಬಕ್ಸರ್‌ನಲ್ಲಿ ನಡೆದಿದೆ. ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ವ್ಯಕ್ತಿಯೊಬ್ಬರಿಗೆ ಅಲ್ಲಿಯೇ ಶಿಬಿರ ಹಾಕಿದ್ದ ಆರೋಗ್ಯ ಕಾರ್ಯಕರ್ತರು ಕೋವಿಡ್ ಪರೀಕ್ಷೆಗೆ ಒಳಪಡುವಂತೆ ಸೂಚಿಸಿದ್ದರು. ಇದರಿಂದ ಗಾಬರಿಗೊಂಡ ಆ ವ್ಯಕ್ತಿ, ಭಯದಿಂದ ಅಲ್ಲಿಂದ ಓಡಿದ್ದಾರೆ.

ಇದೇ ರೀತಿಯ ವಾತಾವರಣ ಇತರೆ ಅನೇಕ ರೈಲು ನಿಲ್ದಾಣಗಳಲ್ಲಿಯೂ ಕಂಡುಬಂದಿದೆ. ಕೋವಿಡ್ ಪರೀಕ್ಷೆಗಳಿಗೆ ಒಳಪಡಲು ಜನರು ಹೆದರುತ್ತಿದ್ದಾರೆ. ಇದರಿಂದ ಸರ್ಕಾರದ ಉದ್ದೇಶಕ್ಕೆ ಮತ್ತಷ್ಟು ಹಿನ್ನಡೆಯಾಗಿದೆ.

ಕಳೆದ 24 ಗಂಟೆಗಳಲ್ಲಿ 3 ಬಾರಿ ಆಮ್ಲಜನಕ ಪೂರೈಕೆಗೆ ಸರ್ಕಾರದಿಂದ ಆರ್ಡರ್ ಕಳೆದ 24 ಗಂಟೆಗಳಲ್ಲಿ 3 ಬಾರಿ ಆಮ್ಲಜನಕ ಪೂರೈಕೆಗೆ ಸರ್ಕಾರದಿಂದ ಆರ್ಡರ್

ದೇಶದ ವಿವಿಧ ಭಾಗಗಳಿಂದ ಮರಳುವ ಬಿಹಾರದ ಜನರಿಗೆ ಕೋವಿಡ್ ತಪಾಸಣೆ ನಡೆಸುವ ಸೌಲಭ್ಯಗಳನ್ನು ಎಲ್ಲ ರೈಲು ನಿಲ್ದಾಣಗಳಲ್ಲಿಯೂ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಇತ್ತೀಚೆಗೆ ಪ್ರಕಟಿಸಿದ್ದರು. ಇದು ರೈಲ್ವೆ ನಿಲ್ದಾಣದಲ್ಲಿ ಪ್ರತಿದಿನದ ಚಟುವಟಿಕೆಯಾಗಿ ಪಾಲನೆಯಾಗುತ್ತಿದೆ.

 Peopel Ran Out Of Buxar Railway Station To Avoid Covid Test In Bihar

'ರೈಲು ನಿಲ್ದಾಣದಿಂದ ಹೊರಡುತ್ತಿರುವ ಜನರನ್ನು ತಡೆದಾಗ ಅವರು ವಾದಿಸಲು ಶುರುಮಾಡುತ್ತಾರೆ. ಈ ಘಟನೆ ವೇಳೆ ನಿಲ್ದಾಣದಲ್ಲಿ ಒಬ್ಬರೂ ಪೊಲೀಸರು ಇರಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಒಬ್ಬ ಮಹಿಳಾ ಪೊಲೀಸ್ ಬಂದರು. ಆದರೆ ಆಕೆ ಒಬ್ಬರೇ ಇರುವುದರಿಂದ ಅಸಹಾಯಕಿಯಾಗಿದ್ದರು' ಎಂದು ಬಕ್ಸರ್‌ನ ಸ್ಥಳೀಯ ಪಾಲಿಕೆ ಸದಸ್ಯ ಜೈ ತಿವಾರಿ ತಿಳಿಸಿದ್ದಾರೆ.

ಬಿಹಾರದಿಂದ ಭಾರಿ ಸಂಖ್ಯೆಯ ಜನರು ವಿವಿಧ ರಾಜ್ಯಗಳಿಗೆ ಉದ್ಯೋಗಕ್ಕಾಗಿ ವಲಸೆ ಹೋಗುತ್ತಾರೆ. ಈಗ ಮಹಾರಾಷ್ಟ್ರ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು, ಲಾಕ್‌ಡೌನ್ ಭೀತಿ ಉಂಟಾಗಿರುವುದರಿಂದ ಮುಂಬೈ, ಪುಣೆ, ದೆಹಲಿ ಮುಂತಾದ ರೈಲುಗಳಲ್ಲಿ ಅಪಾರ ಪ್ರಮಾಣದ ಜನರು ತಮ್ಮ ಹಳ್ಳಿಗಳಿಗೆ ಮರಳಲು ವಾಪಸಾಗುತ್ತಿದ್ದಾರೆ. ಹೀಗೆ ಬರುವವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ. ಆದರೆ ಕೋವಿಡ್ ಪರೀಕ್ಷೆಗೆ ಒಳಗಾಗು ಹೆದರುತ್ತಿರುವ ಜನರು, ಅದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ.

English summary
Dozens of people ran out of Buxar railway station in Bihar to avoid mandatory covid test.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X