ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಟ್ನಾ ವಿವಿ ಚುನಾವಣೆ ಗೆದ್ದರೂ ಎಬಿವಿಪಿಗೆ ದಕ್ಕದ ಅಧ್ಯಕ್ಷಗಿರಿ

|
Google Oneindia Kannada News

ಪಾಟ್ನಾ, ಡಿಸೆಂಬರ್ 06: ಜೆಡಿಯು ಉಪಾಧ್ಯಕ್ಷ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಮೇಲೆ ವಿದ್ಯಾರ್ಥಿಗಳು ಹಲ್ಲೆ ಮಾಡಿದ ಘಟನೆ ಬಳಿಕ ಎಲ್ಲರ ಗಮನ ಸೆಳೆದಿದ್ದ ಪಾಟ್ನಾ ವಿಶ್ವವಿದ್ಯಾಲಯದ ಚುನಾವಣೆ ಫಲಿತಾಂಶ ಹೊರ ಬಂದಿದೆ. ಅಧ್ಯಕ್ಷ ಪಟ್ಟ ಜೆಡಿಯು ಪಾಲಾಗಿದ್ದರೆ, ಎಬಿವಿಪಿ 5 ಸ್ಥಾನಗಳನ್ನು ಗೆದ್ದುಕೊಂಡಿದೆ.

ಪಾಟ್ನಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಯೂನಿಯನ್ ಚುನಾವಣೆ ಫಲಿತಾಂಶದಂತೆ ಛಾತ್ರಾ ಜೆಡಿಯುನ ಅಭ್ಯರ್ಥಿ ಮೋಹಿತ್ ಪ್ರಕಾಶ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಉದ್ಯಮಿಯೊಬ್ಬರ ಮಗನಾದ ಪ್ರಕಾಶ್ ಅವರು ಎಬಿವಿಪಿಯ ಅಭಿನವ್ ಕುಮಾರ್ ಅವರನ್ನು 1,211 ಮತಗಳಿಂದ ಸೋಲಿಸಿದ್ದಾರೆ.

2014ರಲ್ಲಿ ಮೋದಿ ಗೆಲ್ಲಿಸಿದ್ದ ವ್ಯಕ್ತಿಗೆ ಕಾಲೇಜು ವಿದ್ಯಾರ್ಥಿಗಳಿಂದ ಗೂಸಾ 2014ರಲ್ಲಿ ಮೋದಿ ಗೆಲ್ಲಿಸಿದ್ದ ವ್ಯಕ್ತಿಗೆ ಕಾಲೇಜು ವಿದ್ಯಾರ್ಥಿಗಳಿಂದ ಗೂಸಾ

ಛಾತ್ರಾ ಜೆಡಿಯುನ ಕುಮಾರ್ ಸತ್ಯಂ ಖಜಾಂಚಿ ಸ್ಥಾನ ಗೆದ್ದರೆ, ಎಬಿವಿಪಿಯ ಅಂಜನಾ ಸಿಂಗ್ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದಲ್ಲದೆ ಒಟ್ಟು 5 ಉಪಾಧ್ಯಕ್ಷ ಸ್ಥಾನ ಎಬಿವಿಪಿಗೆ ದಕ್ಕಿದೆ.

Patna University Student Union Election results : JDU president, ABVP 5 positions

ಬಿಹಾರದಲ್ಲಿ ಅಧಿಕಾರದಲ್ಲಿರುವ ಜನತಾ ದಳ(ಯುನೈಟೆಡ್) ದಲ್ಲಿ ನಂ.2 ಸ್ಥಾನದಲ್ಲಿರುವ ರಾಜಕೀಯ ತಂತ್ರಜ್ಞ ಪ್ರಶಾಂತ್ ಅವರು ಪಾಟ್ನಾ ವಿಶ್ವವಿದ್ಯಾಲಯದ ಉಪ ಕುಲಪತಿ ರಾಸ್ ಬಿಹಾರಿ ಸಿಂಗ್ ಅವರ ಮನೆಗೆ ಸೋಮವಾರ ರಾತ್ರಿ ವೇಳೆ ಪ್ರಶಾಂತ್ ತೆರಳಿದ್ದರು. ಚುನಾವಣೆಗೆ ಮುನ್ನ ಈ ಭೇಟಿ ಏಕೆ ಎಂದು ಪ್ರಶ್ನಿಸಿ ಎಬಿವಿಪಿ ಕಾರ್ಯಕರ್ತರು ಪ್ರಶಾಂತ್ ಅವರ ಕಾರನ್ನು ನಜ್ಜುಗುಜ್ಜಾಗಿಸಿದರು. ಈ ಘಟನೆಗೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ.

English summary
Patna University Student Union Election results : JDU student union wing candidate is president, ABVP wins 5 positions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X