ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಅಂಗಡಿ ಮುಚ್ಚುವ ಭಯದಲ್ಲಿದೆ 'ಬೆರಕೆ ಕೂಟ'

|
Google Oneindia Kannada News

Recommended Video

ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಅಂಗಡಿ ಮುಚ್ಚುವ ಭಯದಲ್ಲಿದೆ 'ಬೆರಕೆ ಕೂಟ'

ಭಾಗಲ್ಪುರ್ (ಬಿಹಾರ), ಏಪ್ರಿಲ್ 11: ಒಂದು ವೇಳೆ ನಾವು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರದ ಅವರ 'ಅಂಗಡಿ' ಹಾಗೂ ವಂಶಪಾರಂಪರ್ಯ ರಾಜಕೀಯ ಕೊನೆಯಾಗುತ್ತದೆ ಎಂಬ ಭಯ ಈ 'ಮಹಾಮಿಲಾವತಿ ಗ್ಯಾಂಗ್'ಗೆ (ಬೆರಕೆ ಕೂಟಕ್ಕೆ) ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಶಸ್ತ್ರ ಬಲದ ವಿಶೇಷಾಧಿಕಾರವನ್ನು ಕಸಿಯಲು ವಿಪಕ್ಷಗಳು ಬಯಸುತ್ತವೆ. ಆದರೆ ಭಯೋತ್ಪಾದಕರು, ಮಾವೋವಾದಿಗಳ ಜತೆ ಬಡಿದಾಡಲು ಯೋಧರಿಗೆ ಪೂರ್ಣ ಸ್ವಾತಂತ್ರ್ಯ ನೀಡಲು ಎನ್ ಡಿಎ ಬಯಸುತ್ತದೆ ಎಂದು ಹೇಳಿದ್ದಾರೆ.

ಈ ಬೆರಕೆ ಗುಂಪಿಗೆ ವಾಸ್ತವದಲ್ಲಿ ಬೇರೇನೋ ಭಯ ಇದೆ. ಒಂದು ವೇಳೆ ಮೋದಿ ಮತ್ತೆ ಅಧಿಕಾರಕ್ಕೆ ಬಂದರೆ ಅವರ ಭ್ರಷ್ಟಾಚಾರದ ಅಂಗಡಿ, ವಂಶಪಾರಂಪರ್ಯ ಆಡಳಿತ ಕೊನೆ ಆಗುತ್ತದೆ. ಇವರ ವ್ಯಾಪಾರಗಳನ್ನು ಮಾಡಲು ಸಾಧ್ಯವಿಲ್ಲ ಎಂಬ ಅಂಜಿಕೆ ಎಂದು ಮೋದಿ ಗೇಲಿ ಮಾಡಿದ್ದಾರೆ.

Opposition scared, dynastic politics will end if we return to power: PM Narendra Modi

ಬಾಬಾ ಸಾಹೇಬ್ ಅಂಬೇಡ್ಕರ್ ಪರಿಚಯಿಸಿದ ಕೋಟಾ ಪದ್ಧತಿಯನ್ನು ನಮ್ಮ ಸರಕಾರವು ಹೆಚ್ಚಿಸಲು ಬಯಸುತ್ತದೆ. ಆದರೆ ಅವರು ಈಗ ಹೇಳುತ್ತಿರುವುದೇನೆಂದರೆ, ಮೋದಿ ಮತ್ತೊಮ್ಮೆ ಅಧಿಕಾರ ಹಿಡಿದರೆ ಚುನಾವಣೆಗಳೇ ನಡೆಯಲ್ಲ. ಎಲ್ಲ ಸಂವಿಧಾನಾತ್ಮಕ ಸಂಸ್ಥೆಗಳಿಗೆ ಆತಂಕ ಎದುರಾಗಲಿದೆ. ಮೀಸಲಾತಿಯನ್ನು ಕಸಿದುಕೊಳ್ಳಲಾಗುತ್ತದೆ ಎನ್ನುತ್ತಿದ್ದಾರೆ ಎಂದರು.

ಏ.13 ರಂದು ಬಂದರು ನಗರಿಯಲ್ಲಿ ಮೋದಿ ಪ್ರಚಾರ: ಬಿಗಿ ಭದ್ರತೆಗೆ ಕ್ರಮಏ.13 ರಂದು ಬಂದರು ನಗರಿಯಲ್ಲಿ ಮೋದಿ ಪ್ರಚಾರ: ಬಿಗಿ ಭದ್ರತೆಗೆ ಕ್ರಮ

ವಾಸ್ತವ ಏನೆಂದರೆ, ಈ ನಿಮ್ಮ 'ಚೌಕೀದಾರ್' ಮೀಸಲಾತಿ ನಿಯಮವನ್ನು ಬಲಪಡಿಸಲು ಎಲ್ಲ ಪ್ರಯತ್ನ ಪಡುತ್ತಿರುವುದು ನಿಮಗೆ ಗೊತ್ತಿರಲಿ ಎಂದು ನರೇಂದ್ರ ಮೋದಿ ಹೇಳಿದ್ದಾರೆ. ಬಿಹಾರ ರಾಜ್ಯದಲ್ಲಿ ನಲವತ್ತು ಲೋಕಸಭಾ ಕ್ಷೇತ್ರಗಳಿದ್ದು, ಏಳು ಹಂತಗಳಲ್ಲಿ ಮತದಾನ ನಡೆಯಲಿದೆ.

English summary
Prime Minister Narendra Modi launched an attack on the Congress-led opposition Thursday in Bihar, asserting that the "mahamilavati gang" is scared that if he comes to power again, their "shops" of corruption and dynasty politics will shut down.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X