• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರ ವಿಧಾನಸಭೆಯೊಳಗೆ ಗದ್ದಲ: ಮಹಿಳಾ ಶಾಸಕಿಯನ್ನು ಹೊರಹಾಕಿದ ಭದ್ರತಾ ಸಿಬ್ಬಂದಿ

|

ಪಾಟ್ನಾ, ಮಾರ್ಚ್ 24: ಪೊಲೀಸ್ ಮಸೂದೆ ವಿಚಾರವಾಗಿ ಬಿಹಾರ ವಿಧಾನಸಭೆಯಲ್ಲಿ ಗದ್ದಲ ನಡೆದಿದೆ. ಈ ಸಂದರ್ಭದಲ್ಲಿ ಪ್ರತಿಪಕ್ಷ ಮಹಿಳಾ ಶಾಸಕಿಯೊಬ್ಬರನ್ನು ಹೊರಹಾಕಿರುವ ಘಟನೆಯೂ ನಡೆದಿದೆ.

ತೇಜಸ್ವಿ ಯಾದವ್ ನೇತೃತ್ವದ ಆರ್‌ಜೆಡಿ ಪಕ್ಷ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಆರ್‌ಜೆಡಿ ಶಾಸಕರು ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಅವರು ತಮ್ಮ ಕೊಠಡಿಯಿಂದ ಹೊರ ಹೋಗದಂತೆ ತಡೆಯಲು ಯತ್ನಿಸಿದರು. ಇದನ್ನು ಗಮನಿಸಿ ಮಾರ್ಷಲ್‌ಗಳು ಅವರನ್ನು ತಡೆಯಲು ಮುಂದಾಗಿದ್ದಾರೆ.

ಆಗ ಆರ್‌ಜೆಡಿ ಮಹಿಳಾ ಶಾಸಕಿಯೊಬ್ಬರು ತಮ್ಮ ಪ್ರತಿರೋಧವನ್ನು ಮತ್ತಷ್ಟು ತೀವ್ರಗೊಳಿಸಿ ವಿಧಾನಸಭೆ ಆವರಣದ ಬಾಗಿಲಿನಲ್ಲಿ ಮಲಗಿ ನಾಟಕ ಸೃಷ್ಟಿಸಿದ್ದಾರೆ. ನಂತರ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.

ಮಂಗಳವಾರ ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ನಡೆಸಿದ್ದ ಆರ್‌ಜೆಡಿ ಶಾಸಕ ತೇಜಸ್ವಿ ಯಾದವ್ ಪೊಲೀಸ್ ಬಿಲ್‌ಗೆ ನಮ್ಮ ವಿರೋಧವಿದೆ, ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಲು ವಿಪಕ್ಷಗಳು ತೀರ್ಮಾನ ತೆಗೆದುಕೊಂಡಿವೆ ಎಂದಿದ್ದರು.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ವಿರೋಧ ಪಕ್ಷದ ಶಾಸಕ ಸತ್ಯೇಂದ್ರ ಕುಮಾರ್, ವಿರೋಧ ಪಕ್ಷಗಳು ಬಿಹಾರ್ ಸ್ಪೆಷಲ್ ಆರ್ಮ್ಡ್ ಪೊಲೀಸ್ ಬಿಲ್ 2021 ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದವು.

ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿ ನಮ್ಮ ಮೇಲೆ ನೂಕಾಟ, ತಳ್ಳಾಟ ಮಾಡಿದ್ದಾರೆ. ಎಸ್‌ಪಿ ಅವರು ನನ್ನ ಎದೆಗೆ ಹೊಡೆದಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಆರೋಪಿಸಿದ್ದಾರೆ.

English summary
Virulent opposition to a bill introduced in the Bihar assembly by the Nitish Kumar government, with a view to giving more teeth to the police force, today led to unprecedented turmoil in the House where police was called in to physically evict legislators who had laid siege to the Speakers chamber.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X