• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೃಷಿ ಯೋಜನೆಗೆ ತಂತ್ರಜ್ಞಾನದ ಸಾಥ್; ಒಳ್ಳೆ ಉದಾಹರಣೆ ಕೊಟ್ಟ ಒಡಿಶಾ

By ಒನ್ ಇಂಡಿಯಾ ಡೆಸ್ಕ್‌
|
Google Oneindia Kannada News

ಕೃಷಿ ಅಭಿವೃದ್ಧಿಗಾಗಿ ದೇಶದಲ್ಲಿ ಹಲವು ವಿನೂತನ ಕಾರ್ಯಕ್ರಮಗಳು, ಯೋಜನೆಗಳನ್ನು ರೂಪಿಸಲಾಗುತ್ತಿದೆ. ಆದರೆ ಯಾವುದೋ ಒಂದು ಕೊರತೆಯಿಂದ ಆ ಯೋಜನೆಗಳು ಕಾಗದದ ಮೇಲೇ ಉಳಿದುಬಿಡುತ್ತವೆ. ಆದರೆ ಕಾಲದ ಸವಾಲಿಗೆ ತಕ್ಕಂತೆ ವಿನೂತನ ತಂತ್ರಜ್ಞಾನ, ಪರಿಕಲ್ಪನೆಗಳೊಂದಿಗೆ ಕೃಷಿ ಯೋಜನೆಗಳನ್ನು ಹಮ್ಮಿಕೊಂಡರೆ ಹೇಗೆ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಒಡಿಶಾ ಉತ್ತಮ ಉದಾಹರಣೆಯಾಗಿದೆ. ಒಡಿಶಾದಲ್ಲಿ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ಕೃಷಿಕರಿಗೆ ನೆರವಾಗಲು ಆರಂಭವಾಗಿರುವ "KALIA" ಯೋಜನೆ ಇದೀಗ ಕೃಷಿ ಚಿತ್ರಣದ ಬದಲಾವಣೆಗೆ ಕಾರಣವಾಗಿದೆ.

ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಡಿಸೆಂಬರ್ 2018ರಲ್ಲಿ ಈ ನೂತನ ಯೋಜನೆಯನ್ನು ಆರಂಭಿಸಿದರು. ರೈತರ ಜೀವನೋಪಾಯ ಹಾಗೂ ಆದಾಯ ವೃದ್ಧಿಗೆ ನೆರವಾಗುವ ಹೊಸತೊಂದು ಯೋಜನೆ ರೂಪಿಸಿದ್ದು, ಈ ಯೋಜನೆ ಹಲವು ರೀತಿಯಲ್ಲಿ ನೆರವಾಗುತ್ತಿದೆ. ಭೂರಹಿತರಗೆ ಮತ್ತು ದುರ್ಬಲ ರೈತ ಕುಟುಂಬಗಳಿಗೆ ನೆರವಾಗುತ್ತಿದೆ. ತಂತ್ರಜ್ಞಾನವನ್ನು ಬಳಿಸಕೊಂಡು ಹೇಗೆ ಶೀಘ್ರವಾಗಿ ಯೋಜನೆಗಳನ್ನು ಜನರಿಗೆ ತಲುಪಿಸಬಹುದು ಎಂಬುದಕ್ಕೆ ಉದಾಹರಣೆಯಾಗಿದೆ.

ರೈತರಿಗೆ ಆದಾಯ ವೃದ್ಧಿಗೆ ನೆರವು

ರೈತರಿಗೆ ಆದಾಯ ವೃದ್ಧಿಗೆ ನೆರವು

ಕೃಷಿ ನೀತಿಗಳಲ್ಲಿನ ಇತರೆ ಆವಿಷ್ಕಾರಗಳಿಗಿಂತ ಭಿನ್ನವಾಗಿ, ಈ ಕಾಲಿಯಾ, ಕೇವಲ ಆರ್ಥಿಕ ಸಹಾಯ ಒದಗಿಸುವುದಿಲ್ಲ. ಬದಲಿಯಾಗಿ ನೇರ ಆದಾಯ ಪಡೆದುಕೊಳ್ಳಲು ಬೆಂಬಲ ನೀಡುತ್ತದೆ.

ದೀರ್ಘಕಾಲೀನ ದೃಷ್ಟಿಕೋನದಿಂದ ರೈತರ ಕುಟುಂಬದ ಸಮಗ್ರ ಕಲ್ಯಾಣಕ್ಕಾಗಿ ಈ ಯೋಜನೆಯನ್ನು ರೂಪಿಸಲಾಗಿದ್ದು, ಜೀವನೋಪಾಯ ಹಾಗೂ ಶೈಕ್ಷಣಿಕ ಬದಲಾವಣೆಯತ್ತಲೂ ಚಿಂತನೆ ನಡೆಸಿದೆ. 10.180 ಕೋಟಿ ರೂ ಅನುದಾನದೊಂದಿಗೆ ಮೂರು ವರ್ಷಗಳ ಕಾಲ, ಅಂದರೆ 2018-19ರಿಂದ 2021-22ವರ್ಷದವರೆಗೆ ರೂಪಿಸಲಾಗಿದ್ದು, ಇದುವರೆಗೂ ಸಣ್ಣ, ಮಧ್ಯಮ ಹಾಗೂ ಭೂರಹಿತ ರೈತ ಕುಟುಂಬಕ್ಕೆ 8249 ಕೋಟಿ ರೂಪಾಯಿ ವರ್ಗಾಯಿಸಲಾಗಿದೆ.

ನಾಲ್ಕು ದಶಲಕ್ಷ ಕುಟುಂಬಗಳ ಅಭಿವೃದ್ಧಿ ಗುರಿ

ನಾಲ್ಕು ದಶಲಕ್ಷ ಕುಟುಂಬಗಳ ಅಭಿವೃದ್ಧಿ ಗುರಿ

ನಾಲ್ಕು ದಶಲಕ್ಷ ರೈತ ಕುಟುಂಬಗಳಿಗೆ ನೆರವಾಗಲು ಈ ಯೋಜನೆ ಗುರಿ ಹೊಂದಿದೆ. ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಐದು ಬೆಳೆಗಳಿಗೆ ಕಂತುಗಳ ರೂಪದಲ್ಲಿ 25 ಸಾವಿರ ಹಾಗೂ ಪ್ರತಿ ಭೂಹೀನ ಕೃಷಿ ಮನೆಯವರಿಗೆ 12500 ರೂಗಳ ಆರ್ಥಿಕ ನೆರವು ದೊರಕಿದೆ. ದುರ್ಬಲ ಕುಟುಂಬಕ್ಕೆ 10 ಸಾವಿರ ರೂಪಾಯಿ ನೀಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಕಾಲಿಯಾ ಅಗಾಧ ಯಶಸ್ಸನ್ನು ದಾಖಲಿಸಿದೆ. ಕೃಷಿ ಅವಲಂಬಿತ ಸಾವಿರಾರು ಕುಟುಂಬಗಳ ಆಧಾರದ ಮಳೆ ಇದರ ಅನುಷ್ಠಾನ ಮಾಡಲಾಗಿದೆ.

ಕೊರೊನಾ ಸಾಂಕ್ರಾಮಿಕದಂಥ ಆರೋಗ್ಯ ಬಿಕ್ಕಟ್ಟಿನ ಸಮಯದಲ್ಲಿ ಬಡವರ್ಗದವರಿಗೆ ಭದ್ರತೆ ಒದಗಿದ್ದು, ಅತಿ ವೇಗವಾಗಿ ನೆರವು ದೊರತಕುವಂತೆ ಮಾಡಿದ್ದು ಈ ಮಹತ್ವಾಕಾಂಕ್ಷೆ ಕಲ್ಯಾಣ ಯೋಜನೆಯ ಯಶಸ್ಸಾಗಿದೆ.

ತಂತ್ರಜ್ಞಾನದ ನೆಲೆಯಲ್ಲಿ ಮುನ್ನಡೆಯುತ್ತಿರುವ ಕಾಲಿಯಾ

ತಂತ್ರಜ್ಞಾನದ ನೆಲೆಯಲ್ಲಿ ಮುನ್ನಡೆಯುತ್ತಿರುವ ಕಾಲಿಯಾ

ಸಾಮಾನ್ಯವಾಗಿ ಸರ್ಕಾರದ ಯೋಜನೆಗಳು ಹಾಗೂ ಅನುಷ್ಠಾನಗಳು ದೀರ್ಘಾವಧಿ ಹಿಡಿಯುತ್ತದೆ. ಕನಿಷ್ಠ ಒಂದು ವರ್ಷವಾದರೂ ಬೇಕಾಗುತ್ತದೆ. ಅದರೆ ತಂತ್ರಜ್ಞಾನದ ಶಕ್ತಿ ಬಳಸಿಕೊಂಡು ಆಡಳಿತ ಹೇಗೆ ಅಚ್ಚರಿಯಂತೆ ಕೆಲಸ ಮಾಡಬಹುದು ಎಂಬುದನ್ನು ಕಾಲಿಯಾ ಪ್ರದರ್ಶಿಸಿದೆ. ಕೇವಲ ಹದಿನೈದು ದಿನಗಳಲ್ಲಿ ಕಾಗದದ ಮೇಲಿನ ಪರಿಕಲ್ಪನೆಯನ್ನು ನಿಜ ಮಾಡಿದೆ.

5 T (Transparency, Technology, Teamwork, Time leading to Transformation)ಗಳ ಮೇಲೆ ಈ ಯೋಜನೆ ಅವಲಂಬಿತವಾಗಿದ್ದು, ತಂತ್ರಜ್ಞಾನ ಅವಲಂಬಿತ ಪರಿವರ್ತನೆಯನ್ನು ಅಳವಡಿಸಿಕೊಂಡು ಇದೀಗ ಸುದ್ದಿಯ ಕೇಂದ್ರಬಿಂದುವಾಗಿದೆ. ಈ ನೆಲೆಯಲ್ಲೇ ಕಾಲಿಯಾ ಮುನ್ನಡೆಯುತ್ತಿದೆ. ಯಾವುದೇ ತೊಡಕಿಲ್ಲದೇ ಯೋಜನೆ ಮುಂದುವರೆದಿದ್ದು, ಹೆಚ್ಚೆಚ್ಚು ಫಲಾನುಭವಿಗಳನ್ನೂ ಒಳಗೊಳ್ಳುತ್ತಿದೆ.

ಎರಡೇ ವಾರದಲ್ಲಿ 9.5 ದಶಲಕ್ಷ ಅರ್ಜಿಗಳು

ಎರಡೇ ವಾರದಲ್ಲಿ 9.5 ದಶಲಕ್ಷ ಅರ್ಜಿಗಳು

ಯೋಜನೆ ಘೋಷಣೆಯಾದ ಎರಡೇ ವಾರಗಳಲ್ಲಿ ರಾಜ್ಯಕ್ಕೆ 9.5 ದಶಲಕ್ಷ ಅರ್ಜಿಗಳು ಬಂದಿವೆ. ನಂತರ ಈ ಯೋಜನೆಯಲ್ಲಿ ಯಾರನ್ನು ಒಳಗೊಳ್ಳಬೇಕು, ಯಾರನ್ನು ಕೈಬಿಡಬೇಕು ಎಂಬುದು ಕೂಡ ಸರ್ಕಾರಕ್ಕೆ ಸವಾಲಾಗಿತ್ತು. ಆದರೆ ಈ ಸವಾಲಿಗೆ ಮಾಹಿತಿ ತಂತ್ರಜ್ಞಾನವೂ ಜೊತೆಯಾಯಿತು. "ಸ್ಮಾರ್ಟ್ ಫಾರ್ಮರ್ ರೆಜಿಸ್ಟ್ರೇಷನ್" ಎಂಬ ಮಾದರಿಯೊಂದಿಗೆ ಪ್ರಕ್ರಿಯೆ ಆರಂಭವಾಗಿ ರೈತರ ದೃಢೀಕರಣ ಪರೀಕ್ಷೆಗೆ ಒಳಪಡಿಸಲಾಯಿತು. ಜನವರಿ 2019ರಲ್ಲಿ ಎರಡೇ ವಾರಗಳಲ್ಲಿ6.5 ಮಿಲಿಯನ್ ಅರ್ಜಿಗಳನ್ನು ಪರಿಶೀಲಿಸಲಾಯಿತು. ಈ ಯೋಜನೆಯ ಸುಲಲಿತ ಪ್ರಕ್ರಿಯೆಗೆ ಮೊದಲು ರೈತರಿಂದ ಗ್ರೀನ್ ಫಾರ್ಮ್‌ಗೆ ಕರೆ ನೀಡಲಾಯಿತು. ಕೃಷಿ ಸಮೀಕ್ಷೆ, ಸಾಮಾಜಿಕ, ಆರ್ಥಿಕ ಜಾತಿವಾರು ಸಮೀಕ್ಷೆ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಹೀಗೆ ಪ್ರತಿಯೊಂದನ್ನು ಗಣನೆಗೆ ತೆಗೆದುಕೊಳ್ಳಲಾಯಿತು. ಫಲಾನುಭವಿಗಳಲ್ಲದವರನ್ನು ಹೊರಗೆ ಉಳಿಸುವ ಪ್ರಕ್ರಿಯೆ ಆರಂಭಗೊಂಡಿತು. ಸರ್ಕಾರಿ ನೌಕರರು, ತೆರಿಗೆ ಪಾವತಿದಾರರು, ಭೂಮಿ ಹೊಂದಿರುವವರನ್ನು ಹೊರಗುಳಿಸುವ ಕಾರ್ಯ ನಡೆಯಿತು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾಹಿತಿ ಸಂಗ್ರಹ

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾಹಿತಿ ಸಂಗ್ರಹ

ಮೊದಲು ಗ್ರಾಮಪಂಚಾಯಿತಿ ಮಟ್ಟದಲ್ಲಿ ಮಾಹಿತಿ ಪಡೆಯುವ ಸವಾಲು ಎದುರಾಯಿತು. ರಾಜ್ಯ ಮಾಹಿತಿ ಕೇಂದ್ರ ಈ ಕಾರ್ಯವನ್ನು ನಡೆಸಿದ್ದು, 6700 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿದೆ. ಇದಕ್ಕೆ State Wide Area Network (SWAN) ಬಳಸಿಕೊಂಡು ಕಾರ್ಯವನ್ನು ಸುಲಭಗೊಳಿಸಲಾಯಿತು. ಇದರೊಂದಿಗೆ ಫಲಾನುಭವಿಗಳ ಮಾಹಿತಿ ರಕ್ಷಣೆಯೂ ಇದರಲ್ಲಿ ಪ್ರಮುಖ ವಿಷಯವಾಗಿತ್ತು. ಈಚೆಗೆ 4.2 ಮಿಲಿಯನ್ ಬಡ ರೈತ ಕುಟುಂಬಗಳಿಗೆ, 3.7 ಮಿಲಿಯನ್ ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ, 0.5 ಮಿಲಿಯನ್ ಭೂರಹಿತ ರೈತರಿಗೆ ಒಟ್ಟಾರೆ 920 ಕೋಟಿ ರೂಪಾಯಿಯನ್ನು ನೇರ ಖಾತೆಗೆ ವರ್ಗಾಯಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ತಂತ್ರಜ್ಞಾನದೊಂದಿಗೆ ಯಾವುದೇ ಯೋಜನೆಯನ್ನು ಹೇಗೆ ಯಶಸ್ವಿಗೊಳಿಸಬಹುದು ಎಂಬುದಕ್ಕೆ ಕಾಲಿಯಾ ಅತ್ಯುತ್ತಮ ಉದಾಹರಣೆಯಾಗಿ ಕೆಲಸ ಮಾಡುತ್ತಿದೆ.

English summary
Odisha's agriculture Scheme KALIA proves how IT Led scheme brings transformation in agriculture
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X