• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಎಲೆಕ್ಷನ್ ಗಳು ಇರುವಾಗೆಲ್ಲ ಸರ್ಜಿಕಲ್ ಸ್ಟ್ರೈಕ್ ಮಾಡುವ ಪರಿಪಾಠ"

|

ಪಾಟ್ನಾ (ಬಿಹಾರ), ಅಕ್ಟೋಬರ್ 20: "ದೇಶದ ಪ್ರಮುಖ ರಾಜ್ಯಗಳಲ್ಲಿ ಯಾವಾಗೆಲ್ಲ ಚುನಾವಣೆಗಳು ಇರುತ್ತವೋ ಆಗ ಮೋದಿ ಜೀ ಸರ್ಕಾರದ ಅಡಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡುವ ಪರಿಪಾಠ ಬಂದಿದೆ. ಈಗ ದೇಶದ ರಾಜಕಾರಣವನ್ನು ಸರ್ಜಿಕಲ್ ಸ್ಟ್ರೈಕ್ ಮೇಲೆ ಮಾಡಲಾಗುತ್ತಿದೆ" ಎಂದು ಕಾಂಗ್ರೆಸ್ ನಾಯಕ ಅಖಿಲೇಶ್ ಸಿಂಗ್ ಭಾನುವಾರ ಆರೋಪ ಮಾಡಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ನಂತರ ಅವರು ಮಾತನಾಡಿ, ಮುಖ್ಯ ವಿಚಾರಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವುದನ್ನು ಕೇಂದ್ರ ಸರ್ಕಾರ ಬಯಸುತ್ತಿದೆ ಎಂದಿದ್ದಾರೆ. "ನನಗೆ ಮಾಧ್ಯಮಗಳಿಂದ ಗೊತ್ತಾಯಿತು. ಮತ್ತು ಇದೇ ಆಗಿದ್ದರೆ ಇದು ಮಹಾರಾಷ್ಟ್ರ ಮತ್ತು ಹರ್ಯಾಣ ಚುನಾವಣೆ ಕಡೆಗೆ ಗುರಿ ಮಾಡಿಕೊಂಡು ನಡೆಸಿರುವುದು" ಎಂದಿದ್ದಾರೆ.

ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂಥ ಎದುರೇಟು; ಖಾತ್ರಿ ಪಡಿಸಿದ ಸೇನಾ ಮುಖ್ಯಸ್ಥರು

ಭಾನುವಾರದಂದು ಆರ್ಟಿಲರಿ ಗನ್ ಗಳನ್ನು ಬಳಸ್ಸಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕರನ್ನು ಗುರಿ ಮಾಡಿಕೊಂಡು ಭಾರತೀಯ ಸೇನೆ ದಾಳಿ ನಡೆಸಿದೆ.

"ಭಾರತೀಯ ಪಡೆಯು ಪಾಕಿಸ್ತಾನಕ್ಕೆ ಭಾರೀ ಹಾನಿ ಮಾಡಿದೆ. ಅದಕ್ಕೂ ಮುನ್ನ ಪಾಕ್ ನಿಂದ ತಂಗ್ದರ್ ವಲಯದಲ್ಲಿ ನಡೆದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಇಬ್ಬರು ಭಾರತೀಯ ಸೈನಿಕರು ಹಾಗೂ ಒಬ್ಬರು ನಾಗರಿಕರು ಸಾವನ್ನಪ್ಪಿದ್ದರು" ಎಂದು ಭಾರತೀಯ ಸೇನಾ ವಕ್ತಾರರು ತಿಳಿಸಿದ್ದಾರೆ.

English summary
Akhilesh Singh on Indian Army used artillery guns to target terrorist camps in PoK: Under Modi ji’s govt, whenever there's election in a big state,pattern of surgical strike is formed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X