ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರದ ಮಹಾಘಟಬಂಧನ ಅಭ್ಯರ್ಥಿಗಳಲ್ಲಿ ಒಬ್ಬರೂ ಬ್ರಾಹ್ಮಣರಿಲ್ಲ!

|
Google Oneindia Kannada News

ಪಾಟ್ನಾ, ಮಾರ್ಚ್ 29: ಬಿಹಾರದಲ್ಲಿ ಕಾಂಗ್ರೆಸ್, ಆರ್ ಜೆಡಿ ಸೇರಿದಂತೆ ಹಲವು ಮಿತ್ರ ಪಕ್ಷಗಳು ಕೊನೆಗೂ ಜೊತೆಗೂಡಿ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಮಾಡಿದ್ದು, ತಮ್ಮ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದರೆ ಈ ಪಟ್ಟಿಯಲ್ಲಿ ಒಬ್ಬನೇ ಒಬ್ಬ ಬ್ರಾಹ್ಮಣ ಅಭ್ಯರ್ಥಿಯೂ ಇಲ್ಲ ಎಂದು ಹಿಂದುಸ್ತಾನ ಅವಾಮ್ ಮೋರ್ಚಾ-ಜಾತ್ಯತೀತ(HAM-S) ಸಂಸ್ಥಾಪಕ ಜಿತನ್ ರಾಮ್ ಮಂಜ್ಹಿ ಆರೋಪಿಸಿದ್ದಾರೆ.

ಬಿಹಾರ ಮಹಾಮೈತ್ರಿಕೂಟದಲ್ಲಿ ಮನಸ್ತಾಪ: ಕಾಂಗ್ರೆಸ್ ಒಂಟಿಯಾಗಿ ಸ್ಪರ್ಧೆ?ಬಿಹಾರ ಮಹಾಮೈತ್ರಿಕೂಟದಲ್ಲಿ ಮನಸ್ತಾಪ: ಕಾಂಗ್ರೆಸ್ ಒಂಟಿಯಾಗಿ ಸ್ಪರ್ಧೆ?

ಹಿಂದುಳಿದ ವರ್ಗದ, ಅಲ್ಪಸಂಖ್ಯಾತರ ಓಲೈಕೆಗಾಗಿ ಮಹಾಮೈತ್ರಿಕೂಟ ಮೇಲ್ಜಾತಿಯನ್ನು ಕಡೆಗಣಿಸುತ್ತಿದೆ. ಆದ್ದರಿಂದಲೇ ಒಬ್ಬನೇ ಒಬ್ಬ ಬ್ರಾಹ್ಮಣ ಅಭ್ಯರ್ಥಿಗೂ ಟಿಕೆಟ್ ನೀಡಲಾಗಿಲ್ಲ ಎಂದು ಅವರು ದೂರಿದ್ದಾರೆ.

No Brahmin candidate in RJD-Congress led grand alliance in Bihar

ಬಿಹಾರದಲ್ಲಿ ಒಟ್ಟು 40 ಲೋಕಸಭಾ ಕ್ಷೇತ್ರಗಳಿದ್ದು, ಅವರುಗಳಲ್ಲಿ 19 ರಲ್ಲಿ ಆರ್ ಜೆಡಿ ಸ್ಪರ್ಧಿಸಲಿದ್ದು, 9 ರಲ್ಲಿ ಕಾಂಗ್ರೆಸ್, ಐದು ಕ್ಷೇತ್ರಗಳಲ್ಲಿ ಆರ್ ಎಲ್ ಎಸ್ ಪಿ(ರಾಷ್ಟ್ರೀಯ ಲೋಕ ಸಮತಾ ಪಕ್ಷ), (HAM-S) ಮತ್ತು ವಿಕಾಸಶೀಲ ಇನ್ಸಾನ್ ಪಕ್ಷಗಳು ತಲಾ ಮೂರು ಕ್ಷೇತ್ರ, ಸಿಪಿಐಎಂ ಒಂದು ಕ್ಷೇತ್ರಗಳಲ್ಲಿ ಸ್ಪರ್ಧೆಗಿಳಿಯಲಿದೆ.

ಲಾಲೂ ಕುಟುಂಬದಲ್ಲಿ ಕಿರಿಕ್! ಪಕ್ಷದಲ್ಲಿನ ಸ್ಥಾನ ತೊರೆದ ತೇಜ್ ಪ್ರತಾಪ್ಲಾಲೂ ಕುಟುಂಬದಲ್ಲಿ ಕಿರಿಕ್! ಪಕ್ಷದಲ್ಲಿನ ಸ್ಥಾನ ತೊರೆದ ತೇಜ್ ಪ್ರತಾಪ್

ಆದರೆ ಇಷ್ಟೂ ಅಭ್ಯರ್ಥಿಗಳಲ್ಲಿ ಒಬ್ಬರೂ ಬ್ರಾಹ್ಮಣರಿಲ್ಲ. ಇದು ಚುನಾವಣೆಯ ಮೇಲೆ ಬಾರೀ ಪ್ರಂಆನ ಬೀರಲಿದ್ದು, ಮಹಾಮೈತ್ರಿಕೂಟ ಹಿನ್ನಡೆ ಅನುಭವಿಸಬೇಕಾಗಬಹುದು ಎಂದು ಮಹಾಮೈತ್ರಿಕೂಟದ ಸದಸ್ಯರೂ ಆಗಿರುವ ಜಿತನ್ ರಾಮ್ ಮಂಜ್ಹಿ ಎಚ್ಚರಿಕೆಯನ್ನೂ ನೀಡಿದ್ದಾರೆ.

English summary
Hindustan Awam Morcha- Secular (HAM-S) founder Jitan Ram Manjhi expressed his displeasure with no Brahmin candidate in Bihar's RJD-Congress led Grand Alliance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X