ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಫಲಿತಾಂಶ: ನಿತೀಶ್ ಕುಮಾರ್‌ಗೆ ಕೈಕೊಟ್ಟ ಮಹಿಳಾ ಮತದಾರರು

|
Google Oneindia Kannada News

ಪಾಟ್ನಾ, ನವೆಂಬರ್ 11: 2015 ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್‌ಗೆ ಟ್ರಂಪ್‌ಕಾರ್ಡ್ ಆಗಿದ್ದ ಮಹಿಳಾ ಮತದಾರರು ಈ ಬಾರಿ ಕೈಕೊಟ್ಟಂತಿದೆ.

ಬಿಹಾರದಲ್ಲಿ ಮದ್ಯ ನಿಷೇಧ ಘೋಷಣೆಯೊಂದಿಗೆ ಚುನಾವಣಾ ಕಣಕ್ಕಿಳಿದಿದ್ದ ನಿತೀಶ್ ಕುಮಾರ್‌ಗೆ ಬಿಹಾರದ ಮಹಿಳೆಯರು ಭರ್ಜರಿ ಮತ ನೀಡಿದ್ದರು.

ಬಿಹಾರದಲ್ಲಿ ಮತ್ತೆ ಅಧಿಕಾರಕ್ಕೆ ಎನ್‌ಡಿಎಬಿಹಾರದಲ್ಲಿ ಮತ್ತೆ ಅಧಿಕಾರಕ್ಕೆ ಎನ್‌ಡಿಎ

ಐದು ದಶಕದಲ್ಲೇ ಅತ್ಯಧಿಕ ಪ್ರಮಾಣದ ಮಹಿಳೆಯರು ಮತದಾನ ಮಾಡಿದ್ದರು. ಚುನಾವಣಾ ಗೆಲುವಿನ ಬಳಿಕ ನಿತೀಶ್ ಕುಮಾರ್ ರಾಜ್ಯದಲ್ಲಿ ಮದ್ಯಪಾನ ನಿಷೇಧ ಜಾರಿಗೊಳಿಸಿದ್ದರು.

Nitish Kumars Weakened Hold on Women Voters Loss to JDU?

ಆರಂಭಿಕ ಹಂತದಲ್ಲಿ ಮಹಿಳೆಯರು ಕೂಡ ಇದನ್ನು ತುಂಬಾ ಖುಷಿಯಿಂದ ಸ್ವಾಗತಿಸಿದ್ದರು, ಆದರೆ ದಿನ ಕಳೆದಂತೆ ಬಿಹಾರದ ಸ್ಥಿತಿ ಬೇರೆ ರೂಪ ಪಡೆಯುತ್ತಿರುವ ಮುನ್ಸೂಚನೆ ದೊರೆಯಿತು. ಪಕ್ಕದ ರಾಜ್ಯಗಳಿಂದ ಅಕ್ರಮವಾಗಿ ಸಾರಾಯಿ ತಂದು ಬಿಹಾರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇದಕ್ಕೆ ಪೊಲೀಸರ ರಕ್ಷಣೆಯೂ ದೊರೆಯಿತು.

ಇದರಿಂದ ಮತ್ತೆ ಬಿಹಾರದಲ್ಲಿ ಮದ್ಯಪಾನ ರಾಜಾರೋಷವಾಗಿ ಮುಂದುವರೆಯಿತು. ಇದರಿಂದ ಮದ್ಯಪಾನ ನಿಷೇಧ ಎನ್ನುವುದು ನೆಪಮಾತ್ರವಾಯಿತು.

ಇದೇ ಕಾರಣಕ್ಕೆ ನಿತೀಶ್ ಸರ್ಕಾರದ ವಿರುದ್ಧ ಮಹಿಳೆಯರು ರೋಸಿ ಈ ಬಾರಿ ಕುಟುಂಬ ಸದಸ್ಯರು ಹೇಳಿದವರಿಗೆ ಮತದಾನ ಮಾಡಿದ್ದಾರೆ, ಮಹಿಳೆಯರು ಈ ಬಾರಿ ನಿತೀಶ್ ಪರ ನಿಂತಿಲ್ಲ ಎಂಬುದು ಸ್ಪಷ್ಟವಾಗಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು 67 ಸ್ಥಾನ ಗಳಿಸಿತ್ತು, ಈ ಬಾರಿ ಕೇವಲ 43 ಸ್ಥಾನಗಳನ್ನು ಪಡೆಯುವಲ್ಲಿ ಸಫಲವಾಗಿದೆ.

Recommended Video

Bihar Election : ಊಹೆ ಮಾಡಿರಲಿಲ್ಲ ಎಂದ ತೇಜಸ್ವಿ!! | Oneindia Kannada

English summary
Bihar Election Results 2020: Nitish Kumar's undivided constituency of women voters may have deserted him in the current Bihar elections and gone back to traditional forms of electoral choices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X