ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದೇ ಮೊದಲ ಬಾರಿಗೆ, ಅಕ್ಕ-ಪಕ್ಕ ಕೂರಲಿದ್ದಾರೆ ಪ್ರಧಾನಿ ಮೋದಿ-ನಿತೀಶ್!

|
Google Oneindia Kannada News

ಪಾಟ್ನಾ, ಜನವರಿ 21: ಎನ್ ಡಿಎ ಜೊತೆ ಮೈತ್ರಿ ಮುರಿದುಕೊಂಡಿದ್ದ ಬಿಹಾರ ಮುಖ್ಯಮಂತ್ರಿ, ಜೆಡಿಯು ನಾಯಕ ನಿತೀಶ್ ಕುಮಾರ್ ನಂತರ ಮತ್ತೆ ಬಿಜೆಪಿಯೊಂದಿಗೇ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದು ಹಳೇ ವಿಷಯ.

ಬಿಹಾರದಿಂದ ಲೋಕಸಭೆಗೆ : ಎಲ್ ಜೆಪಿ ಬೇಡಿಕೆಗೆ ಅಸ್ತು ಎಂದ ಬಿಜೆಪಿ ಬಿಹಾರದಿಂದ ಲೋಕಸಭೆಗೆ : ಎಲ್ ಜೆಪಿ ಬೇಡಿಕೆಗೆ ಅಸ್ತು ಎಂದ ಬಿಜೆಪಿ

ಆದರೆ 2013 ರಲ್ಲಿ ಎನ್ ಡಿಎ ಜೊತೆ ಮುನಿಸಿಕೊಂಡು ಹೊರಬಂದ ಮೇಲೆ ನಿತೀಶ್ ಕುಮಾರ ಮತ್ತು ನರೇಂದ್ರ ಮೋದಿ ಒಮ್ಮೆಯೂ ವೇದಿಕೆ ಹಂಚಿಕೊಂಡಿರಲಿಲ್ಲ. ಮೋದಿ ಪ್ರಧಾನಿಯಾದ ಮೇಲೆ ಇದೇ ಮೊದಲ ಬಾರಿಗೆ ಉಭಯ ನಾಯಕರೂ ವೇದಿಕೆ ಹಂಚಿಕೊಳ್ಳಲಿದ್ದಾರೆ.

ಎನ್ ಡಿಎ ದೋಸ್ತಿ ಕುಸ್ತಿ: ಸೀಟು ಹಂಚಿಕೆ ಇಂದು ಅಂತಿಮ ನಿರ್ಧಾರಎನ್ ಡಿಎ ದೋಸ್ತಿ ಕುಸ್ತಿ: ಸೀಟು ಹಂಚಿಕೆ ಇಂದು ಅಂತಿಮ ನಿರ್ಧಾರ

ಲೋಕಸಭಾ ಚುನಾವಣೆಯ ಪ್ರಚಾರ ಸಮಾವೇಶದ ನಿಮಿತ್ತ ಫೆಬ್ರವರಿ 24 ಅತವಾ ಮಾರ್ಚ್ 3 ರಂದು ಈ ಇಬ್ಬರು ದಿಗ್ಗಜರೂ ಭಾಗವಹಿಸಲಿದ್ದು, ಎಲ್ ಜೆಪಿ ಮುಖಂಡ ರಾಮ್ ವಿಲಾಸ್ ಪಾಸ್ವಾನ್ ಸಹ ಈ ಸಮಾವೇಶದ ಭಾಗವಾಗಲಿದ್ದಾರೆ.

Nitish Kumar to share stage with PM Modi in Bihar

ಬಿಹಾರದಲ್ಲಿರುವ 40 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 17, ಜನತಾ ದಳ (ಯುನೈಟೆಡ್) 17, ಲೋಕ ಜನಶಕ್ತಿ ಪಾರ್ಟಿ 6 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.

English summary
The launch of the NDA campaign for the Lok Sabha elections in Bihar will witness a political first: Bihar Chief Minister Nitish Kumar will share stage with Prime Minister Narendra Modi for a grand rally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X