ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಚುನಾವಣಾ ಪ್ರಚಾರ: ನಿತೀಶ್ ಕುಮಾರ್, ಯೋಗಿ ಕಿತ್ತಾಟ

|
Google Oneindia Kannada News

ಪಾಟ್ನಾ, ನವೆಂಬರ್ 05: ಬಿಹಾರ ಚುನಾವಣೆ ಮಧ್ಯದಲ್ಲೇ ಬಿಜೆಪಿ ಹಾಗೂ ಜೆಡಿಯು ನಡುವೆ ಬಹಿರಂಗ ಕಿತ್ತಾಟ ಆರಂಭವಾಗಿದೆ.

ವಲಸೆಕೋರರನ್ನು ಹೊರಗಟ್ಟಲಾಗುವುದು ಎನ್ನುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿಕೆಯನ್ನು ವಿವೇಚನಾರಹಿತ ಮಾತು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ತಿರುಗೇಟು ನೀಡಿದ್ದಾರೆ.

ಬಿಹಾರ ಮಹಾಘಟಬಂಧನ್ ಗೆಲುವಿನ ಬಗ್ಗೆ ಪ್ರಜೆಗಳ ವರದಿ: ರಾಬ್ರಿ ದೇವಿಬಿಹಾರ ಮಹಾಘಟಬಂಧನ್ ಗೆಲುವಿನ ಬಗ್ಗೆ ಪ್ರಜೆಗಳ ವರದಿ: ರಾಬ್ರಿ ದೇವಿ

ಇಂತಹ ಅಸಂಬದ್ಧ ಹೇಳಿಕೆಗಳನ್ನು ಯಾರು ನೀಡುತ್ತಾರೆ, ಹೀಗೆ ದ್ವೇಷಪೂರಿತ ಪ್ರಚಾರ ಯಾರು ಮಾಡುತ್ತಾರೆ, ಈ ದೇಶದಲ್ಲಿರುವ ಪ್ರತಿಯೊಬ್ಬರೂ ಭಾರತೀಯರೇ, ಭಾರತೀಯರನ್ನು ಹೆದರಿಸಿ ದೇಶದಿಂದ ಹೊರಗಟ್ಟುವ ತಾಕತ್ತು ಯಾರಿಗಿದೆ ಎಂದು ಪ್ರಶ್ನಿಸಿದ್ದಾರೆ.

 Nitish Kumar Slams Yogi Adityanaths CAA Comment

ಈಗಾಗಲೇ ಬಿಜೆಪಿ ಹಾಗೂ ಜೆಡಿಎಸ್ ಮಧ್ಯೆ ಬಿರುಕು ಮೂಡಿದೆ ಎನ್ನುವ ಆರೋಪ ಕೇಳಿ ಬಂದಿದೆ, ಈಗ ಎರಡು ರಾಜ್ಯಗಳ ಮುಖ್ಯಮಂತ್ರಿಗಳ ಕಿತ್ತಾಟವೂ ಪ್ರತಿಪಕ್ಷಗಳಿಗೆ ಆಹಾರವಾದಂಥಾಗಿದೆ ಇದು ಮೈತ್ರಿಪಕ್ಷದಲ್ಲಿ ಯಾವುದೂ ಸರಿ ಇಲ್ಲ ಎಂಬುದನ್ನು ಸೂಚಿಸುತ್ತದೆ.

ಎಲ್ಲರನ್ನೂ ನಮ್ಮ ಜತೆಯಲ್ಲೇ ಕರೆದುಕೊಂಡು ಹೋಗುವುದು ನಮ್ಮ ಧರ್ಮ, ಆಗ ಮಾತ್ರ ಬಿಹಾರದಲ್ಲಿ ಪ್ರಗತಿ ಕಾಣಲು ಸಾಧ್ಯ. ಆದರೆ ಅವರು ತಮ್ಮ ಭಾಷಣದಲ್ಲಿ ಯಾರ ಹೆಸರನ್ನೂ ಪ್ರಸ್ತಾಪ ಮಾಡಿರಲಿಲ್ಲ.

English summary
A row between Chief Minister Nitish Kumar and his ally BJP's star campaigner Yogi Adityanath has reopened cracks in the ruling coalition in the middle of the Bihar election campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X