• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಹಾರ ರಾಜಕಾರಣ: ಇಲಿಗಳೇ ಕುಡಿದವಾ 11,000 ಲೀಟರ್ ಮದ್ಯ?

|

ಪಾಟ್ನಾ, ಅಕ್ಟೋಬರ್.23: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತಮಗೆ ಮತ ನೀಡುವಂತೆ ಮನವಿ ಮಾಡುತ್ತಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಮದ್ಯಪಾನ ನಿಷೇಧಿಸಿರುವ ಕ್ರಮವನ್ನೇ ಸಾಧನೆ ಎನ್ನುವಂತೆ ಬಿಂಬಿಸುವುದಕ್ಕೆ ಹೊರಟಿದ್ದಾರೆ.

2015ರಲ್ಲಿ ಚುನಾವಣೆ ಎದುರಿಸಿದ ನಿತೀಶ್ ಕುಮಾರ್, ಮತ್ತೊಮ್ಮೆ ಪಕ್ಷವು ಅಧಿಕಾರಕ್ಕೆ ಬಂದರೆ ಮಧ್ಯಪಾನ ನಿಷೇಧಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ 2016ರಲ್ಲಿ ಮದ್ಯಪಾನ ನಿಷೇಧ ಕಾನೂನು ಜಾರಿಗೊಳಿಸಿದ್ದರು. ಅಂದು ಜೆಡಿಯು ಮತ್ತು ಆರ್ ಜೆಡಿ ಮೈತ್ರಿ ಸರ್ಕಾರವು ಅಸ್ತಿತ್ವದಲ್ಲಿತ್ತು.

ಬಿಹಾರದ ಜನರಿಗೆ ಸರ್ಕಾರಿ ಉದ್ಯೋಗ ಏಕೆ ಸಿಗುತ್ತಿಲ್ಲ: ಮೋದಿ

2020ರ ವಿಧಾನಸಭಾ ಚುನಾವಣಾ ಪ್ರಚಾರದ ಅಖಾಡದಲ್ಲಿ ಮಿಂಚು ಹರಿಸುತ್ತಿರುವ ನಿತೀಶ್ ಕುಮಾರ್, ತಮ್ಮ ಈ ಹಿಂದಿನ ಸಾಧನೆಯನ್ನು ಹೆಚ್ಚಾಗಿ ಹೇಳಿಕೊಳ್ಳುತ್ತಿದ್ದಾರೆ. ಹಾಗಿದ್ದಲ್ಲಿ ನಿಜವಾಗಿಯೂ ರಾಜ್ಯದಲ್ಲಿ ಮದ್ಯಪಾನ ನಿಷೇಧವಾಗಿದೆಯೇ. ಸರ್ಕಾರವು ಈ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದೆಯೇ ಎಂಬ ಪ್ರಶ್ನೆಗೆ ಉತ್ತರ ನೀಡುವಂತಾ ವರದಿ ಇಲ್ಲಿದೆ. ಇಂಡಿಯಾ ಟುಡೇ ಸೋದರ ಸಂಸ್ಥೆಯ "The lallantop.com" ಕಂಪನಿಯು ವಾಸ್ತವ ಪರಿಸ್ಥಿತಿ ಬಗ್ಗೆ ವರಿಯಲ್ಲಿ ತಿಳಿಸಿದೆ.

ರಾಜ್ಯದ ಮೂಲೆಮೂಲೆಯಲ್ಲೂ ಮಧ್ಯಪಾನ ಲಭ್ಯ

ರಾಜ್ಯದ ಮೂಲೆಮೂಲೆಯಲ್ಲೂ ಮಧ್ಯಪಾನ ಲಭ್ಯ

ಕಳೆದ 2016ರಲ್ಲೇ ಮದ್ಯಪಾನದ ಸಂಪೂರ್ಣ ನಿಷೇಧದ ಬಗ್ಗೆ ಕಾನೂನು ಜಾರಿಗೊಳಿಸಲಾಗಿತ್ತು. ಆದರೆ ವಾಸ್ತವದಲ್ಲಿ ಈ ಕಾನೂನು ಅಷ್ಟೊಂದು ಪರಿಣಾಮಕಾರಿಯಾಗಿಲ್ಲ ಎಂಬುದನ್ನು ಸ್ವತಃ ಮುಖ್ಯಮಂತ್ರಿ ನಿತೀಶ್ ಕುಮಾರ್ ಬೆಂಬಲಿಗರೇ ಒಪ್ಪಿಕೊಂಡಿದ್ದಾರೆ. "ನಾವು ಮದ್ಯಪಾನ ವ್ಯಸನಿಗಳೇ, ನಾವು ಪ್ರತಿನಿತ್ಯವೂ ಮದ್ಯಪಾನ ಮಾಡುತ್ತೇವೆ. ಅದು ಪ್ರತಿನಿತ್ಯ ನಮ್ಮ ಸುತ್ತಮುತ್ತಲಿನಲ್ಲೇ ಸಿಗುತ್ತದೆ" ಎಂದು ತನ್ನನ್ನು ತಾನು ನಿತೀಶ್ ಕುಮಾರ್ ಬೆಂಬಲಿಗರೇ ಎಂದು ಘೋಷಿಸಿಕೊಂಡಿರುವ ರಮೇಶ್ ರಾಮ್ ಎಂಬ ವ್ಯಕ್ತಿಯು ಹೇಳಿದ್ದಾರೆ.

ಅಲ್ಲದೇ, ರೋಹ್ಟಸ್ ಗ್ರಾಮದ ರಮೇಶ್ ರಾಮ್ ಎಂಬ ವ್ಯಕ್ತಿಯು ಈ ಹಿಂದೆ ಮದ್ಯಪಾನ ನಿಷೇಧ ಕಾನೂನು ಉಲ್ಲಂಘಿಸಿದ್ದಕ್ಕೆ 20 ದಿನ ಸೆರೆವಾಸ ಅನುಭವಿಸಿರುವುದಾಗಿಯೂ ಹೇಳಿಕೊಂಡಿದ್ದಾರೆ. ಧರ್ಮೇಂದ್ರ ಕುಮಾರ್ ಎಂಬ ಮತ್ತೊಬ್ಬ ವ್ಯಕ್ತಿ ಕೂಡಾ ಮದ್ಯಪಾನ ನಿಷೇಧ ಕಾನೂನು ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ. ಈ ಮೊದಲು, ಇಂದು ಮತ್ತು ಮುಂದೆಂದೂ ಇಲ್ಲಿ ಮದ್ಯಪಾನ ನಿಷೇಧಿಸುವುದಕ್ಕೆ ಸಾಧ್ಯವಾಗುವುದೇ ಇಲ್ಲ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮದ್ಯಪಾನ ನಿಷೇಧ ಕಾನೂನಿನಲ್ಲಿ ಏನಿತ್ತು?

ಮದ್ಯಪಾನ ನಿಷೇಧ ಕಾನೂನಿನಲ್ಲಿ ಏನಿತ್ತು?

ಬಿಹಾರದಲ್ಲಿ ಜಾರಿಗೊಳಿಸಿದ ಮದ್ಯಪಾನ ನಿಷೇಧದ ಕಾನೂನಿನ ಪ್ರಕಾರ, ಯಾವುದೇ ವ್ಯಕ್ತಿ ಮದ್ಯ ಸೇವನೆ, ಸಂಗ್ರಹಣ ಮತ್ತು ಉತ್ಪಾದಿಸುವಂತಿರಲಿಲ್ಲ. ಒಂದು ಆವರಣದಲ್ಲಿ ದ್ರಾಕ್ಷಿ ಮತ್ತು ಬೆಲ್ಲದ ಮಿಶ್ರಣ ಕಂಡು ಬಂದಲ್ಲಿ ಮದ್ಯ ಉತ್ಪಾದಿಸಲಾಗುತ್ತದೆ ಎಂದು ತೀರ್ಮಾನಿಸುವ ಅಧಿಕಾರವನ್ನು ಪೊಲೀಸರಿಗೆ ನೀಡಲಾಗಿತ್ತು. ಮೊದಲ ಬಾರಿ ಅಪರಾಧಕ್ಕೆ 50000 ದಂಡ ವಿಧಿಸಲಾಗುತ್ತಿದ್ದು, ದಂಡದ ಮೊತ್ತ ಪಾವತಿಸದಿದ್ದಲ್ಲಿ ಕಡ್ಡಾಯವಾಗಿ ಜೈಲುವಾಸ ಅನುಭವಿಸಬೇಕಿತ್ತು.

ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಎಂದು ಉಲ್ಲೇಖ

ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಎಂದು ಉಲ್ಲೇಖ

ಕಳೆದ ನಾಲ್ಕು ವರ್ಷಗಳ ಹಿಂದೆ ಮೊದಲ ಬಾರಿಗೆ ಮದ್ಯ ಮಾರಾಟ ನಿಷೇಧಿಸುವ ಕಾನೂನು ಜಾರಿಗೊಳಿಸಿದ ಸಂದರ್ಭ ಅಕ್ರಮ ಮದ್ಯಮಾರಾಟಕ್ಕೆ ಕಡಿವಾಣ ಹಾಕುವುದಕ್ಕಷ್ಟೇ ಪ್ರಯೋಜನವಾಗಿತ್ತು. ಪಾಟ್ನಾ, ಭಗಲ್ಪುರ್, ಪುರ್ನಿಯಾ, ದರ್ಬಾಂಗ್ ಜಿಲ್ಲೆಗಳಲ್ಲಿ ಅಕ್ರಮ ಮದ್ಯ ಮಾರಾಟವನ್ನು ನಿಷೇಧಿಸುವುದಕ್ಕೆ ಈ ಕಾನೂನು ಜಾರಿಗೊಳಿಸಲಾಗಿತ್ತು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ಅಕ್ರಮವಾಗಿ ಮದ್ಯ ಸಾಗಾಣಿಕೆ ಮತ್ತು ಭ್ರಷ್ಟಾಚಾರ

ಅಕ್ರಮವಾಗಿ ಮದ್ಯ ಸಾಗಾಣಿಕೆ ಮತ್ತು ಭ್ರಷ್ಟಾಚಾರ

ಬಿಹಾರದಲ್ಲಿ ಜಾರಿಗೊಳಿಸಲಾದ ಮದ್ಯ ಮಾರಾಟ ನಿಷೇಧ ಕಾನೂನು ಜನರಿಗೆ ಹೆಚ್ಚು ಉಪಯೋಗಕ್ಕೆ ಬಂದಿಲ್ಲ. ಮದ್ಯದ ಬೆಲೆ ಏರಿಕೆಯಾಗಿದ್ದು, ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ದಾರಿ ಮಾಡಿ ಕೊಟ್ಟಿದೆ. ಕಳ್ಳ ದಾರಿಯಲ್ಲಿ ಮದ್ಯ ಉತ್ಪಾದನೆ ಮಾಡಲಾಗುತ್ತಿದೆ. ಅಕ್ಕಪಕ್ಕದ ರಾಜ್ಯಗಳಿಂದ ರಾಜ್ಯಕ್ಕೆ ಅಕ್ರಮವಾಗಿ ಮದ್ಯ ಸಾಗಾಣಿಕೆ ನಡೆಯುತ್ತಿದ್ದು, ಆಡಳಿತಾತ್ಮಕವಾಗಿ ಮದ್ಯ ಮಾರಾಟ ಮಾಡಬೇಕಿದ್ದಲ್ಲಿ ತಪಾಸಣೆ ಮತ್ತು ಹಲವು ರೀತಿಯ ನಿಯಮಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಇಲಿಗಳೇ ಕುಡಿದವಂತೆ 11000 ಮದ್ಯದ ಬಾಟಲಿಗಳನ್ನು!

ಇಲಿಗಳೇ ಕುಡಿದವಂತೆ 11000 ಮದ್ಯದ ಬಾಟಲಿಗಳನ್ನು!

ಮದ್ಯ ಮಾರಾಟ ನಿಷೇಧ ಕಾನೂನು ಜಾರಿಗೊಳಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಯಿತು. ಇದಕ್ಕೆ ಪುರ್ನಿಯಾ ಜಿಲ್ಲೆಯಲ್ಲಿ ನಡೆದ ಒಂದೇ ಒಂದು ಘಟನೆ ಜೀವಂತ ಉದಾಹರಣೆಯಾಗಿತ್ತು. 2018ರಲ್ಲಿ ಮೊದಲ ಬಾರಿಗೆ 11000 ಮದ್ಯದ ಬಾಟಲಿಗಳನ್ನು ಇಲಿಗಳೇ ಕುಡಿದು ಮುಗಿಸಿವೆ ಎಂದು ಪೊಲೀಸರು ವರದಿ ನೀಡಿದ್ದರು ಎಂದು ತಿಳಿದು ಬಂದಿದೆ. ಬಿಹಾರದಲ್ಲಿ ಅಬಕಾರಿ ಇಲಾಖೆಯ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ ಸಂದರ್ಭದಲ್ಲಿ ಅಕ್ರಮಕ್ಕೆ ಅವಕಾಶ ಕಲ್ಪಿಸಿಕೊಟ್ಟ ಆರೋಪದ ಹಿನ್ನೆಲೆ ಇತ್ತೀಚಿಗಷ್ಟೇ ಚುನಾವಣಾ ಆಯೋಗವು ಐಎಎಸ್ ಅಧಿಕಾರಿಯನ್ನೇ ಕರ್ತವ್ಯದಿಂದ ವಜಾಗೊಳಿಸಿತ್ತು.

ಬಿಹಾರದಲ್ಲಿ ಅಕ್ರಮ ಮದ್ಯ ಅಡ್ಡೆಗಳ ಮೇಲೆ ದಾಳಿ

ಬಿಹಾರದಲ್ಲಿ ಅಕ್ರಮ ಮದ್ಯ ಅಡ್ಡೆಗಳ ಮೇಲೆ ದಾಳಿ

2016ರಲ್ಲಿ ಬಿಹಾರದಲ್ಲಿ ಮದ್ಯ ನಿಷೇಧ ಕಾನೂನು ಜಾರಿಗೊಳಿಸಿದ ದಿನದಿಂದಲೂ ಅಕ್ರಮ ಮದ್ಯ ಉತ್ಪಾದನೆ ಮತ್ತು ಮಾರಾಟ ಅಡ್ಡೆಗಳ ಮೇಲೆ ಪೊಲೀಸರು ಸಾಲು ಸಾಲು ದಾಳಿಗಳನ್ನು ನಡೆಸುತ್ತಲೇ ಬಂದಿದ್ದಾರೆ. ಈ ಮಾರ್ಚ್ ಅಂತ್ಯದವರೆಗೆ ಸಂಬಂಧಿಸಿದ ಅಂಕಿ-ಅಂಶಗಳು ಸಿಕ್ಕಿವೆ. ಮಜಾಫರ್ ಪುರ್ 4203 ಲೀ, ಸಮಸ್ತಿಪುರ್ 851 ಲೀ, ದರ್ಭಾಂಗ್ 558 ಲೀ, ಮಧುಬನಿ 334 ಲೀ, ಬಂಕಾ 312 ಲೀ, ಬೇಗುಸರಾಯ್ 120 ಲೀ, ನಳಂದಾ 113 ಲೀ, ಕೈಮುರ್ 103 ಲೀ ಮದ್ಯಮವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅಬಕಾರಿ ಇಲಾಖೆಯೇ ಮಾಹಿತಿ ನೀಡಿದೆ. ಕಳೆದ 2016ರ ಏಪ್ರಿಲ್ ತಿಂಗಳಿನಿಂದ 2020ರ ಮಾರ್ಚ್ ಅವಧಿವರೆಗೂ ಮದ್ಯ ನಿಷೇಧ ಕಾನೂನು ಉಲ್ಲಂಘಿಸಿದ್ದಕ್ಕೆ 47395 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಒಟ್ಟಾರೆ 78,78,540 ಲೀಟರ್ ಮದ್ಯವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

English summary
Nitish Kumar Liquor Prohibition Claim On Shaky Ground In Bihar Election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X