ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್‌ಡಿಎ ಸಭೆಯಲ್ಲಿ ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್ ಅಧಿಕೃತ ಆಯ್ಕೆ

|
Google Oneindia Kannada News

ಪಾಟ್ನಾ, ನವೆಂಬರ್ 15: ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ನಾಯಕರು ಪಾಟ್ನಾದಲ್ಲಿ ಭಾನುವಾರ ಜಂಟಿ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ನಿತೀಶ್ ಕುಮಾರ್ ಅವರು ಎನ್‌ಡಿಎ ಮೈತ್ರಿಕೂಟದ ನಾಯಕ ಎಂದು ಅಧಿಕೃತವಾಗಿ ಆಯ್ಕೆಯಾದರು.

ಈ ಮೂಲಕ ನಿತೀಶ್ ಕುಮಾರ್ ಅವರು ಬಿಹಾರದಲ್ಲಿ ಮುಂದಿನ ಸರ್ಕಾರವನ್ನು ರಚಿಸುವ ಹಕ್ಕು ಪಡೆಯಲು ರಾಜ್ಯಪಾಲರನ್ನು ಸಂಪರ್ಕಿಸುವ ಸಾಧ್ಯತೆಯಿದೆ ಮತ್ತು ಅವರು ನಾಳೆ ಬಿಹಾರ ಮುಖ್ಯಮಂತ್ರಿಯಾಗಿ ನಾಲ್ಕನೇ ಅವಧಿಗೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಸತತ ನಾಲ್ಕನೇ ಬಾರಿಗೆ ಸಿಎಂ ಆಗಲಿರುವ ನಿತೀಶ್ ಕುಮಾರ್ಸತತ ನಾಲ್ಕನೇ ಬಾರಿಗೆ ಸಿಎಂ ಆಗಲಿರುವ ನಿತೀಶ್ ಕುಮಾರ್

ನ.15ರ ಭಾನುವಾರ ಮಧ್ಯಾಹ್ನ 12:30ಕ್ಕೆ ಪ್ರಾರಂಭವಾದ ಸಭೆಯಲ್ಲಿ ಎನ್‌ಡಿಎ ಮುಖಂಡರು ಭಾಗವಹಿಸಿದ್ದರು. ಮೊದಲೇ ನಿರ್ಧರಿಸಿದಂತೆ ಸಭೆಯಲ್ಲಿ ಎಲ್ಲರೂ ಒಮ್ಮತದಿಂದ ನಿತೀಶ್ ಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಿದರು.

Nitish Kumar Re-Elected As Bihar CM Again In NDA MLAs Meet

ಇದಕ್ಕೂ ಮುನ್ನ ಶುಕ್ರವಾರ, ಬಿಹಾರದಲ್ಲಿ ನಾಲ್ಕು ಎನ್‌ಡಿಎ ಪಾಲುದಾರರಾದ ಬಿಜೆಪಿ, ಜೆಡಿ(ಯು), ಎಚ್‌ಎಎಂ ಮತ್ತು ವಿಐಪಿ ಪಕ್ಷದ ನಾಯಕರು ನಿತೀಶ್ ಕುಮಾರ್ ಅವರ ನಿವಾಸದಲ್ಲಿ, ಸರ್ಕಾರ ರಚನೆಗೆ ಸಂಬಂಧಿಸಿದ ಮುಂದಿನ ಕ್ರಮಗಳ ಬಗ್ಗೆ ಅನೌಪಚಾರಿಕವಾಗಿ ಚರ್ಚಿಸಿದ್ದರು.

ಭಾನುವಾರ ನಡೆದ ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ ನಾಲ್ಕೂ ಪಕ್ಷದ ಮುಖಡಂರುಗಳು ಭಾಗವಹಿಸಿದ್ದರು. ಬಿಜೆಪಿಯಿಂದ ಕೇಂದ್ರ ಸಚಿವ ರಾಜನಾಥ್ ಸಿಂಗ್, ಬಿಜೆಪಿ ಬಿಹಾರ ಉಸ್ತುವಾರಿ ಭೂಪೇಂದ್ರ ಯಾದವ್ ಮತ್ತು ದೇವೇಂದ್ರ ಫಡ್ನವೀಸ್ ಅವರೂ ನಿರ್ಣಾಯಕ ಸಭೆಯಲ್ಲಿ ಪಾಲ್ಗೊಂಡಿದ್ದರು.

"ಬಿಹಾರದಲ್ಲಿ 40 ಸ್ಥಾನ ಗೆದ್ದವರಿಗೆ ದಕ್ಕಿದ್ದು ಹೇಗೆ ಸಿಎಂ ಸ್ಥಾನ?"

ಜೆಡಿಯು ಪಕ್ಷದ ನಾಯಕ ನಿತೀಶ್ ಕುಮಾರ್, ಎಚ್‌ಎಎಂ ಪಕ್ಷದ ಮುಖ್ಯಸ್ಥ ಜಿತನ್ ರಾಂ ಮಾಂಝೀ ಸೇರಿದಂತೆ ಎನ್‌ಡಿಎ ಮೈತ್ರಿಕೂಟದ ಪ್ರಮುಖ ಮುಖಂಡರು, ಶಾಸಕರು ಪಾಲ್ಗೊಂಡಿದ್ದರು. ನಿತೀಶ್ ಕುಮಾರ್ ಅವರನ್ನು ಅವಿರೋಧವಾಗಿ ಶಾಸಕಾಂಗ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿಯಾಗಿ ಸಭೆಯಲ್ಲಿ ಅಧಿಕೃತವಾಗಿ ಘೋಷಿಸಲಾಯಿತು.

ಜಿದ್ದಾಜಿದ್ದಿನ ಬಿಹಾರ ಚುನಾವಣಾ ಸ್ಪರ್ಧೆಯಲ್ಲಿ ಎನ್‌ಡಿಎ 125 ಸ್ಥಾನಗಳನ್ನು ಗೆದ್ದು ವಿಜಯಶಾಲಿಯಾಗಿದ್ದು, ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಪ್ರಬಲ ಹೋರಾಟ ನೀಡಿ 110 ಸ್ಥಾನಗಳನ್ನು ಪಡೆದರು. ಸ್ಪಷ್ಟ ಬಹುಮತ ಪಡೆದಿರುವ ಎನ್‌ಡಿಎ ಮೈತ್ರಿಕೂಟ ಸರ್ಕಾರ ರಚನೆಯ ಹಕ್ಕನ್ನು ನಾಳೆ ರಾಜ್ಯಪಾಲರಿಗೆ ಸಲ್ಲಿಸಲಿದ್ದಾರೆ. ಸತತ ನಾಲ್ಕನೇ ಬಾರಿಗೆ ನಿತೀಶ್ ಕುಮಾರ್ ಬಿಹಾರದ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ.

English summary
Leaders of the National Democratic Alliance (NDA) held a joint meeting in Patna on Sunday. At the meeting, Nitish Kumar was officially elected as the leader of the Bihar NDA alliance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X