ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಸಿಎಂ ವಿರುದ್ಧ ಕೊಲೆ ಯತ್ನ ಆರೋಪ ಹೊರಿಸಿದ ಉಪೇಂದ್ರ ಕುಶ್ವಾ

|
Google Oneindia Kannada News

ಪಾಟ್ನಾ, ಫೆಬ್ರವರಿ 06: ಬಿಹಾರ ಸಿಎಂ ನಿತೀಶ್ ಕುಮಾರ್ ನನ್ನ ಕೊಲ್ಲಿಸಲು ಯತ್ನಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಲೋಕ ಸಮತಾದಳ ಮುಖ್ಯಸ್ಥ ಉಪೇಂದ್ರ ಕುಶ್ವಾ ಆರೋಪ ಮಾಡಿದ್ದಾರೆ.

ರಾಷ್ಟ್ರೀಯ ಲೋಕ ಸಮತಾದಳ ಮುಖ್ಯಸ್ಥ ಉಪೇಂದ್ರ ಕುಶ್ವಾ ಸೇರಿ ಇತರ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಕಳೆದ ವಾರ ಪಾದಯಾತ್ರೆ ಮಾಡಿದ್ದರು ಆ ಸಮಯದಲ್ಲಿ ಪೊಲೀಸ್ ಲಾಠಿ ಪ್ರಹಾರ ನಡೆದಿತ್ತು. ಅದರಲ್ಲಿ ಉಪೇಂದ್ರ ಕುಶ್ವಾ ಗಾಯಗೊಂಡಿದ್ದರು.

ಇದೇ ಮೊದಲ ಬಾರಿಗೆ, ಅಕ್ಕ-ಪಕ್ಕ ಕೂರಲಿದ್ದಾರೆ ಪ್ರಧಾನಿ ಮೋದಿ-ನಿತೀಶ್!ಇದೇ ಮೊದಲ ಬಾರಿಗೆ, ಅಕ್ಕ-ಪಕ್ಕ ಕೂರಲಿದ್ದಾರೆ ಪ್ರಧಾನಿ ಮೋದಿ-ನಿತೀಶ್!

ಪಾದಯಾತ್ರೆ ಮೇಲೆ ಲಾಠಿ ಪ್ರಹಾರ ಮಾಡಿದ್ದು ಉದ್ದೇಶಪೂರ್ವಕವಾಗಿ, ಅದು ನನ್ನನ್ನು ಕೊಲ್ಲುವ ಯತ್ನ ಎಂದು ಉಪೇಂದ್ರ ಕುಶ್ವಾ ಇಂದು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ನಿತೀಶ್ ಆದೇಶದ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಅವರ ಗುರಿ ನಾನಾಗಿದ್ದೆ, ಲಾಠಿ ಪ್ರಹಾರ ಕುರಿತು ನ್ಯಾಯಾಲಯದ ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದರು.

Nitish Kumar Plotted To Kill Me: Upendra Kushwah

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಎಲ್ಲ ರೈತರ ಸಾಲ ಮನ್ನಾ: ರಾಹುಲ್ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಎಲ್ಲ ರೈತರ ಸಾಲ ಮನ್ನಾ: ರಾಹುಲ್

ಸಿಎಂ ನಿತೇಶ್ ಕುಮಾರ್ ಅವರ ಆದೇಶದ ಮೇರೆಗೆ ನನ್ನ ಹಾಗೂ 250 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಉಪೇಂದ್ರ ಕುಶ್ವಾ ಹೇಳಿದ್ದಾರೆ.

ರಾಹುಲ್ ಗಾಂಧಿಗೆ ಫಿದಾ ಆಗಿ ಬಿಜೆಪಿಗೆ ಗುಡ್ ಬೈ ಹೇಳಿದ ಮುಖಂಡ ರಾಹುಲ್ ಗಾಂಧಿಗೆ ಫಿದಾ ಆಗಿ ಬಿಜೆಪಿಗೆ ಗುಡ್ ಬೈ ಹೇಳಿದ ಮುಖಂಡ

ನಿತೇಶ್ ಕುಮಾರ್ ಅವರು ನಮ್ಮ ಮೇಲೆ ಹಾಕಿರುವ ಎಫ್‌ಐಆರ್‌ ಅನ್ನು ವಾಪಸ್ ಪಡೆಯದೇ ಇದ್ದರೆ, ಎಫ್‌ಐಆರ್ ದಾಖಲಿಸಿರುವ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವುದಾಗಿ ಉಪೇಂದ್ರ ಕುಶ್ವಾ ಅವರು ಎಚ್ಚರಿಕೆ ನೀಡಿದ್ದಾರೆ.

English summary
Rashtriya Lok Samata Party chief Upendra Kushwaha on Wednesday accused Bihar Chief Minister Nitish Kumar of hatching a conspiracy to harm him during a protest march last week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X