ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೋರ್ನ್ ಸೈಟ್ ನಿಷೇಧ ಹೇರುವಂತೆ ನಿತೀಶ್ ಕುಮಾರ್ ಆಗ್ರಹ

|
Google Oneindia Kannada News

ಪಾಟ್ನಾ, ಡಿಸೆಂಬರ್ 06: ದೇಶದಲ್ಲಿ ಹೆಚ್ಚುತ್ತಿರುವ ಮಹಿಳೆ ಮೇಲಿನ ಲೈಂಗಿಕ ಕಿರುಕುಳ, ಸಾಮೂಹಿಕ ಅತ್ಯಾಚಾರಕ್ಕೆ ಅಶ್ಲೀಲ ವೆಬ್ಸೈಟ್ ಗಳ ವೀಕ್ಷಣೆ ಹೆಚ್ಚಾಗುತ್ತಿರುವುದೇ ಕಾರಣ, ಪೋರ್ನ್ ಸೈಟ್ ನಿಷೇಧಿಸಿದರೆ, ಇಂಥ ಪ್ರಕರಣಗಳ ಮೇಲೆ ನಿಯಂತ್ರಣ ಸಾಧ್ಯ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಅಶ್ಲೀಲ ಸೈಟ್ ಗಳು ಯುವ ಜನತೆಯ ಮನಸ್ಥಿತಿಯನ್ನು ಹಾಳು ಮಾಡುತ್ತಿದ್ದು, ಮಹಿಳೆ ವಿರುದ್ಧ ನಡೆಯುವ ಕ್ರೈಂಗಳನ್ನು ಪೋರ್ನ್ ಸೈಟ್ ಗಳಲ್ಲಿ ಅಪ್ ಲೋಡ್ ಮಾಡಲಾಗುತ್ತಿದೆ. ಯುವಕರ ಮೇಲೆ ಅಶ್ಲೀಲ ಸೈಟ್ ಗಳು ಕೆಟ್ಟ ಪರಿಣಾಮ ಬೀರುತ್ತಿವೆ. ಇದರ ಮೇಲೆ ಸಂಪೂರ್ಣ ನಿಷೇಧ ಹೇರುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದರು.

2015 ರಲ್ಲಿ ಉತ್ತರಾಖಂಡ್ ಹೈಕೋರ್ಟ್ ಆದೇಶದಂತೆ ಮೋದಿ ಸರ್ಕಾರ 857 ಅಶ್ಲೀಲ ತಾಣಗಳನ್ನು ನಿಷೇಧಿಸಿತ್ತು. ಆದರೆ, ನಂತರ ಸ್ಮಾರ್ಟ್ ಫೋನ್ ಬಳಕೆ ಹೆಚ್ಚಾಗಿದ್ದು, ಯಾವುದೇ ಭಯ, ನಿರ್ಬಂಧವಿಲ್ಲ ಪೋರ್ನ್ ಚಿತ್ರಗಳ ವೀಕ್ಷಣೆ ಅಧಿಕವಾಗಿದೆ ಎಂದು ನಿತೀಶ್ ಕುಮಾರ್ ಹೇಳಿದರು. ಹೈದರಾಬಾದ್ ನಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರ, ಹತ್ಯೆ, ಉನ್ನಾವೋ ಯುವತಿ ಮೇಲೆ ಅತ್ಯಾಚಾರ, ಬೆಂಕಿ ಹಚ್ಚಿದ ಪ್ರಕರಣ, ಸಮಷ್ಟಿಪುರ ಜಿಲ್ಲೆಯಲ್ಲಿ ದೌರ್ಜನ್ಯ ಪ್ರಕರಣಗಳನ್ನು ತಮ್ಮ ಭಾಷಣದಲ್ಲಿ ನಿತೀಶ್ ಕುಮಾರ್ ಉಲ್ಲೇಖಿಸಿದರು.

Nitish Kumar blames porn sites for rapes, seeks ban

ಉತ್ತರಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಬೆಂಕಿಯಲ್ಲಿ ಬೆಂದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ. ಪಶುವೈದ್ಯೆ ಪ್ರಕರಣದಲ್ಲಿ ಎಲ್ಲಾ ನಾಲ್ವರು ಆರೋಪಿಗಳನ್ನು ಅಯುಕ್ತ ವಿಶ್ವನಾಥ್ ಸಜ್ಜನರ್ ನೇತೃತ್ವದ ತಂಡವು ಎನ್ ಕೌಂಟರ್ ಮಾಡಿ ಹತ್ಯೆ ಮಾಡಿದೆ.

English summary
In the wake of gang rapes and women atrocities across the nation on Friday, Bihar CM Nitish Kumar said that porn sites are putting negative impacts on youth.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X