ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Nitish Kumar, Tejashwi swearing-in Live: ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ ಸಮಾರಂಭ

|
Google Oneindia Kannada News

ಪಾಟ್ನಾ, ಆಗಸ್ಟ್ 10: ಇಂದು ಮಧ್ಯಾಹ್ನ 2 ಗಂಟೆಗೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮತ್ತು ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜಭವನದ ರಾಜೇಂದ್ರ ಮಂಟಪದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಈ ವೇಳೆ ಜೆಡಿಯು-ಆರ್‌ಜೆಡಿ ನೇತೃತ್ವದ ಮೈತ್ರಿ ಸರಕಾರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಮಾತ್ರ ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಂತರ ಇತರ ಸಚಿವರು ಪ್ರಮಾಣ ವಚನ ಸ್ವೀಕರಿಸಬಹುದು.

ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಹೊಸ ಸರಕಾರ ರಚನೆಯ ಕಸರತ್ತು ನಡೆದಿದೆ. ನಿನ್ನೆ(ಆಗಸ್ಟ್ 9) ಸಂಜೆ 4 ಗಂಟೆಗೆ ನಿತೀಶ್ ಕುಮಾರ್ ಎನ್‌ಡಿಎ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ 164 ಶಾಸಕರ ಬೆಂಬಲದ ಪತ್ರವನ್ನು ರಾಜ್ಯಪಾಲ ಫಗು ಚೌಹಾಣ್ ಅವರಿಗೆ ಹಸ್ತಾಂತರಿಸಿ, ಹೊಸ ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.

Nitish Kumar and Tejashwi Yadav to take oath as Bihar CM and DCM Live Update and Latest News in Kannada

ಒಟ್ಟು 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಸರಕಾರ ರಚನೆಗೆ 122 ಶಾಸಕರ ಬೆಂಬಲದ ಅಗತ್ಯವಿದೆ. ಜೆಡಿಯು 45 ಮತ್ತು ಆರ್‌ಜೆಡಿ 79 ಶಾಸಕರನ್ನು ಒಳಗೊಂಡಿದೆ. ಜಿತಿನ್‌ ಮಹಂಜಿ ಅವರ ಎಚ್‌ಎಎಂ (4 ಶಾಸಕರು), ಕಾಂಗ್ರೆಸ್‌ (19) ಸೇರಿದಂತೆ ಇತರೆ ಪಕ್ಷಗಳು ನಿತೀಶ್‌ಗೆ ಬೆಂಬಲ ಸೂಚಿಸಿವೆ. ಕಾಂಗ್ರೆಸ್‌ಗೆ ಮೂರು ಸಚಿವ ಸ್ಥಾನ ಹಾಗೂ ಸ್ಪೀಕರ್‌ ಸ್ಥಾನ ದೊರೆಯುವ ಸಾಧ್ಯತೆ ಇದೆ.

Newest FirstOldest First
3:25 PM, 10 Aug

ಎಂಟನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್, 2024ರ ಲೋಕಸಭೆ ಚುನಾವಣೆ ಬಗ್ಗೆ ಯೋಚಿಸುವಂತೆ ಬಿಜೆಪಿಗೆ ಸೂಚನೆ ನೀಡಿದ್ದಾರೆ. ರಾಜ್ಯಪಾಲ ಫಾಗು ಚೌಹಾಣ್ ಅವರು ಪ್ರಮಾಣ ವಚನ ಬೋಧಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರ್, ಹೊಸ ಸರ್ಕಾರವು ಪೂರ್ಣಾವಧಿಯಲ್ಲಿ ಉಳಿಯುವುದಿಲ್ಲ ಎಂಬ ಬಿಜೆಪಿಯ ಹೇಳಿಕೆಯನ್ನು ತಳ್ಳಿಹಾಕಿದರು.
2:51 PM, 10 Aug

ಕೆಲಸ ಮಾಡಲು ಮತ್ತೆ ಅಧಿಕಾರಕ್ಕೆ ಬಂದಿದ್ದೇವೆ ಎಂದು ತೇಜ್ ಪ್ರತಾಪ್ ಯಾದವ್ ಹೇಳಿದ್ದಾರೆ.
2:51 PM, 10 Aug

ಹೊಸ ಸರ್ಕಾರದಿಂದ ಬಿಹಾರದ ಜನತೆಗೆ ಒಳ್ಳೆಯದಾಗಲಿದೆ ಎಂದು ರಾಬ್ರಿ ದೇವಿ ಹೇಳಿದ್ದಾರೆ.
2:50 PM, 10 Aug

ಎಲ್ಲರಿಗೂ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ತೇಜಸ್ವಿ ಅವರ ಪತ್ನಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಹೇಳಿದರು.
2:50 PM, 10 Aug

2020 ರಲ್ಲಿ ನಾನು ಮುಖ್ಯಮಂತ್ರಿಯಾಗಲು ಬಯಸಲಿಲ್ಲ.ಪ್ರತಿಯೊಬ್ಬರಿಗೂ ಏನಾಯಿತು ಎಂದು ನಮ್ಮ ಪಕ್ಷದ ಜನರನ್ನು ನೀವು ಕೇಳಿ ಎಂದು ಪ್ರಮಾಣ ವಚನ ಸ್ವೀಕರಿಸಿದ ನಂತರ ನಿತೀಶ್ ಕುಮಾರ್ ಹೇಳಿದರು. ಪಕ್ಷ ನೋಡಿಕೊಳ್ಳುವಂತೆ ನನಗೆ ಒತ್ತಡ ಹೇರಲಾಯಿತು. ಮುಂದಿನ ದಿನಗಳಲ್ಲಿ ಏನಾಗುತ್ತಿದೆ ಎಂದು ಎಲ್ಲರಿಗೂ ಗೊತ್ತಿತ್ತು. ನಮ್ಮ ಪಕ್ಷದವರ ಇಚ್ಛೆಯ ಮೇರೆಗೆ ನಾವು ಬೇರೆಯಾಗಿದ್ದೇವೆ ಎಂದು ನಿತೀಶ್ ಕುಮಾರ್ ಹೇಳಿದರು.
2:48 PM, 10 Aug

ಪ್ರಮಾಣ ವಚನ ಸ್ವೀಕರಿಸಿದ ನಂತರ ತೇಜಸ್ವಿ ನಿತೀಶ್ ಅವರ ಪಾದ ಮುಟ್ಟಿ ನಮಸ್ಕರಿಸಿದರು.
2:47 PM, 10 Aug

ಪ್ರಮಾಣ ವಚನ ಸ್ವೀಕಾರದ ನಂತರ ನಿತೀಶ್ ಮತ್ತು ತೇಜಸ್ವಿ ಸಂತಸದ ಮೂಡ್‌ನಲ್ಲಿ ಕಾಣಿಸಿಕೊಂಡಿದ್ದರು.
Advertisement
2:47 PM, 10 Aug

ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
2:46 PM, 10 Aug

ನಿತೀಶ್ ಕುಮಾರ್ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ, 8ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾದರು.
2:46 PM, 10 Aug

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಉಪ ಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ ಅವರು ಪ್ರಮಾಣ ವಚನ ಸ್ವೀಕರಿಸಿದರು.
2:02 PM, 10 Aug

ಆಗಸ್ಟ್ 15ರ ನಂತರ ಸಚಿವ ಸಂಪುಟ ವಿಸ್ತರಣೆ

ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಅವರು ಕ್ರಮವಾಗಿ ಬಿಹಾರ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭ ಆರಂಭವಾಗಿದೆ ಮತ್ತು ಆಗಸ್ಟ್ 15 ರ ನಂತರ ಸಂಪುಟ ವಿಸ್ತರಣೆಯಾಗಬಹುದು.
1:59 PM, 10 Aug

ರಾಜಭವನದ ರಾಜೇಂದ್ರ ಮಂಟಪದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಆರಂಭವಾಗಿದೆ. ಈ ಸಮಾಂಭದಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮತ್ತು ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
Advertisement
1:53 PM, 10 Aug

ಬಿಜೆಪಿ ಇಲ್ಲಿಯವರೆಗೂ ಯಾರಿಗೂ ಮೋಸ ಮಾಡಿಲ್ಲ. ಒಂದಲ್ಲ ಐದು ಬಾರಿ ನಿತೀಶ್ ಅವರನ್ನು ಬಿಹಾರದ ಮುಖ್ಯಮಂತ್ರಿ ಮಾಡಿದ್ದೇವೆ. ನಾವು 17 ವರ್ಷಗಳ ಸಂಬಂಧ ಹೊಂದಿದ್ದೆವು, ಆದರೆ ನೀವು ಕ್ಷಣಾರ್ಧದಲ್ಲಿ ಎರಡೂ ಬಾರಿ ಸಂಬಂಧ ಮುರಿದ್ದಿದ್ದೀರಿ ಎಂದು ಸುಶೀಲ್ ಕುಮಾರ್ ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ.
1:20 PM, 10 Aug

ಬಿಹಾರ ಸಿಎಂ ನಿಯೋಜಿತ ನಿತೀಶ್ ಕುಮಾರ್ ಅವರು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರಿಗೆ ಕರೆ ಮಾಡಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ನಡೆದ ಎಲ್ಲಾ ರಾಜಕೀಯ ಬೆಳವಣಿಗೆಗಳ ಕುರಿತು ಮಾಹಿತಿ ನೀಡಿದರು. ಲಾಲು ಪ್ರಸಾದ್ ಯಾದವ್ ಅವರನ್ನು ಅಭಿನಂದಿಸಿದರು ಮತ್ತು ಅವರ ನಿರ್ಧಾರವನ್ನು ಶ್ಲಾಘಿಸಿದ್ದಾರೆಂದು ತಿಳಿದುಬಂದಿದೆ.
1:06 PM, 10 Aug

'ಬಿಹಾರಕ್ಕೆ ಈಗ ರಾಜಕೀಯ ಸ್ಥಿರತೆ ಮರಳುತ್ತದೆ ಎಂದು ನಾನು ಭಾವಿಸುತ್ತೇನೆ. ನಿತೀಶ್ ಕುಮಾರ್ ಅವರು ಹೊಸ ಅಧ್ಯಾಯ ಆರಂಭಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರು ಬಿಹಾರದ ಜನರ ಆಕಾಂಕ್ಷೆಗಳನ್ನು ಈಡೇರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
12:15 PM, 10 Aug

ಪಾಟ್ನಾದಲ್ಲಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಪಕ್ಷದೊಂದಿಗಿನ ಮೈತ್ರಿ ಮುರಿದುಕೊಂಡು ಹೊಸ ಸರ್ಕಾರಕ್ಕಾಗಿ 'ಮಹಾಘಟಬಂಧನ್' ರಚಿಸಿದ ನಿತೀಶ್ ಕುಮಾರ್ ವಿರುದ್ಧ ಮುರ್ದಾಬಾದ್ ಎಂಬ ಘೋಷಣೆಗಳನ್ನು ಎತ್ತಿದ್ದಾರೆ.
12:05 PM, 10 Aug

ಈ ಸರ್ಕಾರ ಕೇವಲ ಪ್ರಮಾಣ ವಚನ ಸ್ವೀಕರಿಸಲು ಹೊರಟಿಲ್ಲ. ಬಿಹಾರಕ್ಕೆ ಅಭಿವೃದ್ಧಿಯ ಸಂದೇಶ ನೀಡುತ್ತಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಛಿದ್ರಗೊಳಿಸಬೇಕು ಎಂದು ಈಗಿನ ಬಿಜೆಪಿ ನಿರ್ಧರಿಸಿರುವ ಸಂದರ್ಭದಲ್ಲಿ ಇದು ಬಹಳ ಮುಖ್ಯ ಎಂದು ಆರ್‌ಜೆಡಿಯ ರಾಜ್ಯಸಭಾ ಸಂಸದ ಮನೋಜ್ ಝಾ ಹೇಳಿದ್ದಾರೆ.
12:02 PM, 10 Aug

ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಪಾಟ್ನಾದ ತಮ್ಮ ನಿವಾಸದಲ್ಲಿ ವಿಜಯದ ಚಿಹ್ನೆ ತೋರಿಸುತ್ತಿದ್ದಾರೆ.
11:40 AM, 10 Aug

ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಅಧ್ಯಕ್ಷ ಚಿರಾಗ್ ಪಾಸ್ವಾನ್ ನಿತೀಶ್ ಕುಮಾರ್ ಅವರು ಜನರ ಆದೇಶವನ್ನು ಎರಡು ಬಾರಿ "ಅವಮಾನಿಸಿದ್ದಾರೆ" ಎಂದು ಟೀಕಿಸಿದರು. ಕೇಸರಿ ಪಕ್ಷವು ತನ್ನ ಎಲ್ಲಾ ಬೇಡಿಕೆಗಳನ್ನು ಪೂರೈಸಿದಾಗಲೂ ಬಿಹಾರ ಸಿಎಂ ಬಿಜೆಪಿಯನ್ನು ತ್ಯಜಿಸಿದರು ಎಂದು ದೂರಿದ್ದಾರೆ.
11:39 AM, 10 Aug

ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಅವರು ಬಿಹಾರದಲ್ಲಿ ಬಿಜೆಪಿಯಿಂದ ಬೇರ್ಪಟ್ಟ ನಿತೀಶ್ ಕುಮಾರ್ ಅವರು ಸರ್ಕಾರ ರಚಿಸಲು ವಿರೋಧ ಪಕ್ಷಗಳೊಂದಿಗೆ ಕೈಜೋಡಿಸಿರುವುದನ್ನು ವ್ಯಂಗ್ಯವಾಡಿದ್ದಾರೆ. ನಿತೀಶ್ ಕುಮಾರ್ ಅವರನ್ನು "ವಲಸೆ ಹಕ್ಕಿ"ಗೆ ಹೋಲಿಸಿದ ಅನಿಲ್ ವಿಜ್, ಒಂದು ಕೊಂಬೆಯಿಂದ ಇನ್ನೊಂದು ಕೊಂಬೆಗೆ ನೆಗೆಯುವುದು ಅವರ ಸ್ವಭಾವ ಎಂದು ಹೇಳಿದ್ದಾರೆ.
11:37 AM, 10 Aug

ಬಿಹಾರದಲ್ಲಿನ ಸರ್ಕಾರ ಬದಲಾವಣೆಯು ಉತ್ತರ ಪ್ರದೇಶದ ಸಮಾಜವಾದಿ ಪಕ್ಷ (ಎಸ್‌ಪಿ) ಗೆ 'ಆಶಾವಾದ' ತುಂಬಿದೆ. ಎಸ್‌ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಬಿಜೆಪಿ-ಜೆಡಿ(ಯು) ವಿಭಜನೆಯನ್ನು ಭಾರತೀಯ ರಾಜಕೀಯಕ್ಕೆ "ಒಳ್ಳೆಯ ಆರಂಭ" ಎಂದು ಪರಿಗಣಿಸಿದ್ದಾರೆ. ಇದು ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಹುಟ್ಟಿಕೊಂಡ 'ಅಂಗ್ರೇಜೋ ಭಾರತ್ ಛೋಡೋ' ಘೋಷಣೆಯ ಮಾದರಿಯಲ್ಲಿ 'ಬಿಜೆಪಿ ಸಾತ್ ಛೋಡೋ' ಎಂದು ಸೂಚಿಸುತ್ತದೆ ಎಂದು ಅವರು ಹೇಳಿದರು. ಕನೌಜ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್, "ನಮ್ಮ ಸಮುದಾಯದ ಜನರು ಇನ್ನು ಮುಂದೆ ಸಂಸ್ಥೆಗಳಲ್ಲಿ ಹುದ್ದೆಗಳನ್ನು ಪಡೆಯುವುದಿಲ್ಲ. ಯಾಕೆಂದರೆ ಎಲ್ಲಾ ಬಿಜೆಪಿ ಬೆಂಬಲಿಗರನ್ನು ವಿಶ್ವವಿದ್ಯಾನಿಲಯಗಳು ಮತ್ತು ಶಿಕ್ಷಣ ಸಂಸ್ಥೆಗಳ ಪ್ರಮುಖ ಹುದ್ದೆಗಳಿಗೆ ನೇಮಿಸಲಾಗುತ್ತಿದೆ' ಎಂದು ದೂರಿದ್ದಾರೆ. "ಇದು ಬಹಳ ಮುಖ್ಯ, ವಿಶೇಷವಾಗಿ ಬಿಜೆಪಿಯು ಪ್ರಜಾಪ್ರಭುತ್ವ ಮೌಲ್ಯಗಳನ್ನು ಹಾಳುಮಾಡಲು ನಿರ್ಧರಿಸಿದ ಯುಗದಲ್ಲಿ- ಅವು ಮಾತ್ರ ಉಳಿಯುತ್ತವೆ. ಬಿಹಾರ ಸಂದೇಶವನ್ನು ನೀಡಿದೆ. ಇದು ಬಿಹಾರದ ಜನರ ಪ್ರಮಾಣವಾಗಿದೆ."
11:36 AM, 10 Aug

ಇಂದು ಮಧ್ಯಾಹ್ನ 2 ಗಂಟೆಗೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಮತ್ತು ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜಭವನದ ರಾಜೇಂದ್ರ ಮಂಟಪದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.

English summary
Nitish Kumar Oath Taking Ceremony live Update in Kannada : Check the latest news and updates on both Nitish Kumar and Tejashwi Yadav takes sworn as Bihar CM and depute cm. Nitish Kumar taking Oath as 8th time in 22 years with an unique record as chief minister of Bihar! Followed by Kannada descriptions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X