• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಜನಸಂಖ್ಯಾ ನಿಯಂತ್ರಣ ಕರಡು ಮಸೂದೆ ಕುರಿತು ನಿತೀಶ್ ಕುಮಾರ್ ಟೀಕೆ

|
Google Oneindia Kannada News

ಪಾಟ್ನಾ, ಜುಲೈ 13: ಬಿಜೆಪಿ ಸರ್ಕಾರದ ಜನಸಂಖ್ಯಾ ನಿಯಂತ್ರಣ ಕರಡು ಮಸೂದೆ ಕುರಿತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ.

ಬಿಹಾರ ಮುಖ್ಯಮಂತ್ರಿ ಪ್ರಕಾರ ಕುಟುಂಬದ ಮಹಿಳೆ ಹೆಚ್ಚು ವಿದ್ಯಾವಂತಳಾದರೆ ಫಲವತ್ತತೆ ಪ್ರಮಾಣ ಕಡಿಮೆಯಾಗುತ್ತದೆ ಎಂಬ ಅಂಕಿಅಂಶವು ಒಂದು ಅಚ್ಚರಿಯ ಸತ್ಯ. ಮಹಿಳೆಯರಿಗೆ ಅರಿವು ಮತ್ತು ಶಿಕ್ಷಣ ದೊರೆತಾಗ, ಜನಸಂಖ್ಯೆ ಬೆಳವಣಿಗೆ ದರ ಕುಸಿಯುತ್ತದೆ ಎಂದು ಅವರು ಹೇಳಿದ್ದಾರೆ.

ಯುಪಿ ಜನಸಂಖ್ಯಾ ನಿಯಂತ್ರಣ ಮಸೂದೆ ಕರಡು ಸಿದ್ದ: ನೀತಿ ಅನುಸರಿಸಿದರೆ ಏನು ಸಿಗುತ್ತೆ?ಯುಪಿ ಜನಸಂಖ್ಯಾ ನಿಯಂತ್ರಣ ಮಸೂದೆ ಕರಡು ಸಿದ್ದ: ನೀತಿ ಅನುಸರಿಸಿದರೆ ಏನು ಸಿಗುತ್ತೆ?

ಬಿಜೆಪಿ ಆಡಳಿತ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಅಸ್ಸಾಂ ಜನಸಂಖ್ಯೆ ನಿಯಂತ್ರಣಕ್ಕಾಗಿ ಕಾನೂನು ಜಾರಿಗೆ ಮುಂದಾಗುತ್ತಿದ್ದಂತೆ ನಿತೀಶ್ ಕುಮಾರ್ ಮತ್ತೊಮ್ಮೆ ತಮ್ಮ ಭಿನ್ನಾಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಹಿರಿಯ ಮುಖಂಡರೊಬ್ಬರು ಅದೇ ತರ್ಕದಿಂದ, ನಿತೀಶ್ ಕುಮಾರ್ ಮದ್ಯ ನಿಷೇಧ ಮಾಡಿದರೂ ಇದೀಗ ಮದ್ಯವು ಉಚಿತವಾಗಿ ಲಭ್ಯವಾಗುತ್ತಿದೆ, ಅಲ್ಲದೆ ಹೋಂ ಡೆಲಿವರಿ ಕೂಡಾ ಇದೆ. ಆದ ಕಾರಣ ಅವರೇನು ಉಪದೇಶಿಸುತ್ತಾರೋ ಅದನ್ನು ಅಭ್ಯಾಸ ಮಾಡಬೇಕಿದೆ." ಎಂದು ಹಾಸ್ಯ ಚಟಾಕಿ ಸಿಡಿಸಿದ್ದಾರೆ.

ಇದು ನಿತೀಶ್ ಕುಮಾರ್ ಅವರ ಜತೆಗೆ ಭಿನ್ನಾಭಿಪ್ರಾಯ ಹೊಂದಿರುವ ಬಿಜೆಪಿ ನೀತಿಗಳ ಪಟ್ಟಿಯಲ್ಲಿ ಮತ್ತೊಂದು ಸೇರ್ಪಡೆಯಾಗಿದೆ. 370ನೇ ವಿಧಿ, ಸಿಎಎ-ಎನ್ಆರ್ಸಿ ವಿಚಾರದಲ್ಲಿ ಸಹ ನಿತೀಶ್ ಇದೇ ಬಗೆಯ ಭಿನ್ನಾಭಿಪ್ರಾಯ ತಾಳಿದ್ದರು.

ರಾಜ್ಯಗಳು ತಮಗೆ ಬೇಕಾದುದನ್ನು ಮಾಡಬಹುದು. ಆದರೆ ಕಾನೂನಿನಿಂದ ಜನಸಂಖ್ಯಾ ನಿಯಂತ್ರಣ ಸಾಧ್ಯವಿಲ್ಲ ಎಂದು ನಾನು ಸ್ಪಷ್ಟವಾಗಿ ನಂಬುತ್ತೇನೆ. ಚೀನಾ ಅಥವಾ ಇನ್ನಾವುದೇ ರಾಷ್ಟ್ರದ ಉದಾಹರಣೆಯನ್ನು ಇದಕ್ಕಾಗಿ ತೆಗೆದುಕೊಳ್ಳಬಹುದು ನಿತೀಶ್ ಕುಮಾರ್ ಹೇಳಿದರು.

English summary
As BJP-ruled states like Uttar Pradesh and Assam push laws to control population, Prime Minister Narendra Modi's Bihar ally Nitish Kumar has once again publicly voiced his strong disagreement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X