ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀಲ್‌ಗಾಯ್‌ಯನ್ನು ಜೀವಂತ ಸಮಾಧಿ ಮಾಡಿದ ಕ್ರೂರಿಗಳು: ಕರುಳು ಹಿಂಡುವ ವಿಡಿಯೋ

|
Google Oneindia Kannada News

ಪಾಟ್ನಾ, ಸೆಪ್ಟೆಂಬರ್ 7: ಗಾಯಗೊಂಡಿದ್ದ ನೀಲ್ ಗಾಯ್ ಪ್ರಾಣಿಯೊಂದನ್ನು ಜೆಸಿಬಿ ಮೂಲಕ ಹೊಂಡಕ್ಕೆ ತಳ್ಳಿ ಜೀವಂತವಾಗಿ ಸಮಾಧಿ ಮಾಡಿದ ಮಾನವೀಯ ಮತ್ತು ಕ್ರೂರ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ.

ಈ ಘಟನೆಯ ವಿಡಿಯೋ ಆಗಸ್ಟ್ 30ರಿಂದಲೂ ಸಾಮಾಜಿಕ ಜಾಲತಾಣಗಳು ಮತ್ತು ವಾಟ್ಸಾಪ್‌ನಲ್ಲಿ ಹರಿದಾಡುತ್ತಿತ್ತು. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಕೊನೆಗೂ ಎಚ್ಚೆತ್ತ ಪೊಲೀಸರು ವಾಹನ ಚಾಲಕನ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.

ಮರಿಯ ಶವಸಂಸ್ಕಾರ ಮಾಡಲು ಹೊರಟ ಆನೆಗಳು: ವಿಡಿಯೋ ವೈರಲ್ಮರಿಯ ಶವಸಂಸ್ಕಾರ ಮಾಡಲು ಹೊರಟ ಆನೆಗಳು: ವಿಡಿಯೋ ವೈರಲ್

ಲಾಲ್‌ಗಂಜ್ ವಲಯದ ಅರಣ್ಯಾಧಿಕಾರಿಗಳು ನೀಡಿದ ದೂರಿನ ಆಧಾರದಲ್ಲಿ ಜೆಸಿಬಿ ಚಾಲಕನ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಭಗವಾನ್‌ಪುರ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

Nilgai Shot Buries Alive In Bihar Vaishali One Booked

ಹೀಗೆ ಬೆಳೆಯನ್ನು ತಿಂದು ನಾಶಮಾಡುತ್ತಿದ್ದ ನೀಲ್‌ಗಾಯ್ ಒಂದಕ್ಕೆ ಗುಂಡು ಹಾರಿಸಲಾಗಿತ್ತು. ಆದರೆ, ಅದು ಸಾಯದೆ ಗಾಯಗೊಂಡಿತ್ತು. ಅದನ್ನು ಸಾಯಿಸಲು ಗುಂಡಿ ತೆಗೆದು ಬದುಕಿರುವಾಗಲೇ ಅದರ ಮೇಲೆ ಮಣ್ಣು ಮುಚ್ಚಿದ ಕೃತ್ಯಕ್ಕೆ ಟೀಕೆ ವ್ಯಕ್ತವಾಗಿದೆ. ಗಾಯದಿಂದ ನರಳುತ್ತಿದ್ದ ನೀಲ್‌ಗಾಯ್‌ಯನ್ನು ಜಮೀನಿನಲ್ಲಿ ತೆಗೆದ ಗುಂಡಿಯೊಳಗೆ ಜೆಸಿಬಿ ವಾಹನದಿಂದ ತಳ್ಳಿ, ಅದರ ಮೇಲೆ ಮಣ್ಣುಮುಚ್ಚುವ ದೃಶ್ಯ ಹರಿದಾಡುತ್ತಿದೆ. ಸಇದು ಅತ್ಯಂತ ಹೀನ, ನೀಚ ಮತ್ತು ಕ್ರೌರ್ಯದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೀಲ್‌ಗಾಯ್‌ಗಳು ಇಲ್ಲಿನ ಬೆಳೆಗಳಿಗೆ ಹಾನಿ ಮಾಡುತ್ತವೆ ಎಂಬ ಕಾರಣಕ್ಕೆ ಜನರು ಮನಬಂದಂತೆ ಅವುಗಳನ್ನು ಕೊಲ್ಲುತ್ತಿವೆ. ಅಪರೂಪದ ಪ್ರಾಣಿಗಳ ವರ್ಗಕ್ಕೆ ಸೇರಿರುವ ನೀಲ್‌ಗಾಯ್‌ಗಳು ಬಿಹಾರದಲ್ಲಿ ಹೆಚ್ಚಾಗಿ ಕಾಣಿಸುತ್ತವೆ. ವೈಶಾಲಿ ಜಿಲ್ಲೆಯಲ್ಲಿ ನೀಲ್‌ಗಾಯ್‌ಗಳ ಹಾವಳಿ ವಿಪರೀತವಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ನೀಲ್‌ಗಾಯ್‌ಗಳನ್ನು ಉಪದ್ರವಕಾರಿ ಪ್ರಾಣಿಗಳೆಂದು ಗುರುತಿಸಲಾಗಿದ್ದು, ಬೆಳೆಯ ರಕ್ಷಣೆಗೆ ಅವುಗಳನ್ನು ಕೊಲ್ಲಲು ಅನುಮತಿ ನೀಡಲಾಗಿದೆ.

ಬಿಟ್ಟುಬಂದ ಪ್ರಾಣಿಗಳಿಗೆ ಊಟ ಹಾಕಲು ಗಂಟೆಗಟ್ಟಲೆ ನಡೆದರುಬಿಟ್ಟುಬಂದ ಪ್ರಾಣಿಗಳಿಗೆ ಊಟ ಹಾಕಲು ಗಂಟೆಗಟ್ಟಲೆ ನಡೆದರು

'ನೀಲ್‌ಗಾಯ್‌ಗಳನ್ನು ಉಪದ್ರವಕಾರಿ ಪ್ರಾಣಿಗಳೆಂದು 2024ರವರೆಗೂ ಗುರುತಿಸುವಂತೆ ಮನವಿ ಸಲ್ಲಿಸಲಾಗಿದೆ. ಇವುಗಳನ್ನು ಸೂಕ್ತ ವಿಧಾನದಲ್ಲಿ ಕೊಲ್ಲಲು ಅನುಮತಿ ನೀಡಲಾಗಿದೆ. ಆದರೆ, ವೈಶಾಲಿ ಜಿಲ್ಲೆಯಲ್ಲಿ ನಡೆದಿರುವ ಘಟನೆ ಸರಿಯಲ್ಲ. ಅದಕ್ಕೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಬಿಹಾರದ ವನ್ಯಜೀವಿ ಅಧಿಕಾರಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.

ಬೆಳೆಗಳನ್ನು ಕಾಪಾಡಲು ಇಲ್ಲಿನ ಜನರು ಶೂಟರ್‌ಗಳ ಸಹಾಯ ಪಡೆದುಕೊಳ್ಳುತ್ತಿದ್ದಾರೆ. ಅನೇಕರು ನೀಲ್‌ಗಾಯ್‌ಗಳಿಗೆ ಗುಂಡಿಕ್ಕುವುದಕ್ಕೇ ಕಸುಬನ್ನಾಗಿಸಿಕೊಂಡಿದ್ದಾರೆ. ಇದುವರೆಗೂ 300ಕ್ಕೂ ಅಧಿಕ ನೀಲ್‌ಗಾಯ್‌ಗಳನ್ನು ಹೀಗೆ ಹತ್ಯೆ ಮಾಡಲಾಗಿದೆ. ನೇರವಾಗಿ ಮತ್ತೊಮ್ಮೆ ಗುಂಡಿಕ್ಕಿ ಕೊಂದರೂ ಅದನ್ನು ಇಷ್ಟು ಕ್ರೂರವೆಂದು ಕರೆಯುತ್ತಿರಲಿಲ್ಲ. ಆದರೆ, ನಡೆದಾಡಲು ಸಾಧ್ಯವಾಗದೆ ಸಂಕಟಪಡುತ್ತಿದ್ದ ಪ್ರಾಣಿಯನ್ನು ಇಷ್ಟು ಅಮಾನವೀಯವಾಗಿ ಸಮಾಧಿ ಮಾಡುವುದು ಪೈಶಾಚಿಕ ಕೃತ್ಯ ಎಂದು ಕಿಡಿಕಾರಿದ್ದಾರೆ.

ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ

English summary
One person was booked for bury an injured Nilgai in Vaishali district of Bihar. The cruel video went viral and condemned by the netizens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X