ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆದುಳು ಜ್ವರ, ಬಿಹಾರದಿಂದ ಬರುವ ತರಕಾರಿ,ಹಣ್ಣುಗಳಿಗೆ ನೇಪಾಳ ಬ್ರೇಕ್

|
Google Oneindia Kannada News

ಮುಜಾಫರ್‌ಪುರ್, ಜೂನ್ 28: ಬಿಹಾರದಿಂದ ಬರುವ ವಾಹನಗಳು, ತರಕಾರಿ, ಹಣ್ಣುಗಳಿಗೆ ನೇಪಾಳ ಸರ್ಕಾರ ಬ್ರೇಕ್ ಹಾಕಿದೆ.

ಬಿಹಾರದಲ್ಲಿ ಅಕ್ಯೂಟ್ ಎನ್ಸೆಫಾಲಿಟಿ ಸಿಂಡ್ರೋಮ್ ಎಂಬ ಮೆದುಳಿಗೆ ಸಂಭಂಧಿಸಿದ ಕಾಯಿಲೆಯಿಂದ ಇದುವರೆಗೆ 244ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದು ಆ ಭೀತಿಯಿಂದ ಅಲ್ಲಿಂದ ರಫ್ತಾಗುತ್ತಿದ್ದ ಎಲ್ಲಾ ವಸ್ತುಗಳಿಗೂ ತಡೆ ಹಿಡಿಯಲಾಗಿದೆ.

ಬಿಹಾರ ನಿಗೂಢ ಜ್ವರ ಮೃತ ಮಕ್ಕಳ ಸಂಖ್ಯೆ 244ಕ್ಕೆ ಏರಿಕೆ ಬಿಹಾರ ನಿಗೂಢ ಜ್ವರ ಮೃತ ಮಕ್ಕಳ ಸಂಖ್ಯೆ 244ಕ್ಕೆ ಏರಿಕೆ

ತರಕಾರಿ, ಹಣ್ಣುಗಳನ್ನು ಹೊತ್ತು ಹೊರಟಿದ್ದ 100 ಟ್ರಕ್‌ಗಳು ನೇಪಾಳ ಗಡಿ ಪ್ರವೇಶಿಸಿ ಹಿಂದಿರುಗಿ ಬಂದಿವೆ. ಟ್ರಕ್ ಡ್ರೈವರ್‌ಗಳು ಮಾವು, ಬಾಳೆಹಣ್ಣನ್ನು ಸಿಕ್ಕಿದ್ದಷ್ಟು ಹಣಕ್ಕೆ ಮಾರಾಟ ಮಾಡುತ್ತಿವೆ.

Nepal puts break on Bihar vegetable and fruits

1-10 ವರ್ಷದೊಳಗಿನ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಮಳೆಗಾಲ ಆರಂಭವಾಗುವವರೆಗೂ ಈ ರೋಗ ಕಡಿಮೆಯಾಗುವುದಿಲ್ಲ ಎಂದು ತಜ್ಞರು ಹೇಳಿದ್ದಾರೆ. ಮೃತಪಟ್ಟವರ ಕುಟುಂಬಗಳಿಗೆ ನಾಲ್ಕು ಲಕ್ಷ ರೂ ಸಹಾಯಧನ ನೀಡುವುದಾಗಿ ಸಚಿವರು ತಿಳಿಸಿದ್ದಾರೆ.

ಮುಜಾಫರ್‌ಪುರದಲ್ಲಿ 131 ಮಂದಿ, ಎಸ್‌ಕೆಎಂಸಿಎಚ್‌ನಲ್ಲಿ 111, ಕೇಜ್ರಿವಾಲ್ ಆಸ್ಪತ್ರೆಯಲ್ಲಿ 20 ಮಕ್ಕಳು ಮೃತಪಟ್ಟಿದ್ದಾರೆ. ಹೆಚ್ಚಿನ ತಾಪಮಾನವೇ ಈ ರೋಗಕ್ಕೆ ಕಾರಣವಾಗಿದೆ.

ಹಾಗಾಗಿ ಮುಂಗಾರು ಪ್ರವೇಶವಾಗುವವರೆಗೂ ಮಕ್ಕಳನ್ನು ಮನೆಯಿಂದ ಹೊರಗಡೆ ಕಳುಹಿಸದಿದ್ದರೆ ಒಳಿತು. ಇದೀಗ ಈ ರೋಗ ಛತ್ತೀಸ್‌ಗಢಕ್ಕೂ ಕಾಲಿಟ್ಟಿದೆ. ಶುಕ್ರವಾರ ಛತ್ತೀಸ್‌ಗಢದಲ್ಲಿ ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಒಂದು ಮಗುವಿನ ಸ್ಥಿತಿ ಗಂಭೀರವಾಗಿದೆ.

ಛತ್ತೀಸ್‌ಗಢದ ಜಗ್ದಲ್‌ಪುರ ಜಿಲ್ಲೆಯಲ್ಲಿ ಮೆದುಳು ಜ್ವರ ಕಾಣಿಸಿಕೊಂಡಿದೆ. ನಾಲ್ಕು ಮತ್ತು ಏಳು ವರ್ಷದ ಮೂರು ಮಕ್ಕಳು ಮೆದುಳು ಜ್ವರದಿಂದ ಬಳಲುತ್ತಿದ್ದಾರೆ.

English summary
Nepal puts break on Bihar vegetable and fruits after Bihar deadly fever Acute Encephalitis Syndrome.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X