ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಬಿಹಾರ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಗೆಲುವು ಶತಸಿದ್ಧ"

|
Google Oneindia Kannada News

ಪಾಟ್ನಾ, ಅಕ್ಟೋಬರ್.20: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟವು ಸಂಪೂರ್ಣ ಬಹುಮತದೊಂದಿಗೆ ಗೆಲುವು ಸಾಧಿಸಲಿದೆ. ನಿತೀಶ್ ಕುಮಾರ್ ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಆಗುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

"ನಾವು ಮೂರನೇ ಎರಡರಷ್ಟು ಬಹುಮತದೊಂದಿಗೆ ಗೆಲ್ಲುತ್ತೇವೆ ಮತ್ತು ನಿತೀಶ್ ಕುಮಾರ್ ಅವರೇ ಮುಂದಿನ ಮುಖ್ಯಮಂತ್ರಿ. ಫಲಿತಾಂಶವು ಉತ್ತಮವಾಗೇ ಹೊರ ಬೀಳಲಿದೆ ಎಂದು ಝೀ ನ್ಯೂಸ್ ಗೆ ನೀಡಿರುವ ಸಂದರ್ಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಬಿಹಾರ ಚುನಾವಣೆ: ಕಣದಲ್ಲಿ 328 ಕ್ರಿಮಿನಲ್ ಹಿನ್ನೆಲೆಯವರು, 375 ಕೋಟ್ಯಧಿಪತಿಗಳು ಬಿಹಾರ ಚುನಾವಣೆ: ಕಣದಲ್ಲಿ 328 ಕ್ರಿಮಿನಲ್ ಹಿನ್ನೆಲೆಯವರು, 375 ಕೋಟ್ಯಧಿಪತಿಗಳು

ವಿರೋಧ ಪಕ್ಷಗಳನ್ನು ಟೀಕಿಸಿದ ಅಮಿತ್ ಶಾ ಅವರು, ಒಂದು ಕಡೆಯಲ್ಲಿ ಖಾಲಿ ಭರವಸೆ ಮತ್ತು ಭಯಾನಕವಾದ ಹಿನ್ನೆಲೆಯಿದೆ. ಮತ್ತೊಂದು ಕಡೆಯಲ್ಲಿ ವಾಸ್ತವದ ಕಾರ್ಯ ಮತ್ತು ಭವಿಷ್ಯದ ಕಾರ್ಯತಂತ್ರದ ಲೆಕ್ಕಾಚಾರವಿದೆ. ಬಹುಶಃ ಬಿಹಾರದ ಜನತೆಯು ವಾಸ್ತವದಲ್ಲಿ ಎನ್ ಡಿಎ ಮೈತ್ರಿಕೂಟದ ಸರ್ಕಾರವು ಮಾಡಿರುುವ ಕಾರ್ಯವನ್ನು ನೋಡಿ ಮತ ನೀಡುತ್ತಾರೆ. ಬಿಹಾರದಲ್ಲಿ ನಮ್ಮ ಪಕ್ಷಕ್ಕೆ ಉತ್ತಮ ಬಹುಮತ ಸಿಗಲಿದೆ ಎಂದು ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದರು.

NDA Will Return To Power With Two-Thirds Majority In Bihar Election: Amit Shah

ಆಡಳಿತವನ್ನು ಹೋಲಿಕೆ ಮಾಡಿ ಮತ ನೀಡಿ:

ಬಿಹಾರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವು 10 ವರ್ಷಗಳ ಕಾಲ ಆಡಳಿತ ನಡೆಸಿದೆ. 15 ವರ್ಷ ಲಾಲೂ ಪ್ರಸಾದ್ ಯಾದವ್ ನೇತೃತ್ವದ ಸರ್ಕಾರವು ಆಡಳಿತ ನಡೆಸಿದೆ. ಅದರಂತೆ ನಿತೀಶ್ ಕುಮಾರ್ ನೇತೃತ್ವದ ಸರ್ಕಾರ ಕೂಡಾ 15 ವರ್ಷಗಳ ಆಡಳಿತ ನಡೆಸಿದ್ದು, ಇದೆಲ್ಲವನ್ನು ತುಲನೆ ಮಾಡಿ ನೋಡಿಕೊಂಡು ಮತ ನೀಡುವಂತೆ ಸಚಿವ ಅಮಿತ್ ಶಾ ಮನವಿ ಮಾಡಿಕೊಂಡಿದ್ದಾರೆ.

ಬಿಹಾರ ಚುನಾವಣೆಯಲ್ಲಿ ನಾಲ್ಕೇ ಪಕ್ಷ:

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಲೋಕ ಜನಶಕ್ತಿ ಪಕ್ಷವು ಸ್ಪರ್ಧಿಸಲಿದೆಯೇ ಎಂಬ ಪ್ರಶ್ನೆಗೆ ಅಮಿತ್ ಶಾ ಉತ್ತರಿಸಿದರು. ಇಲ್ಲಿ ಕೇವಲ ನಾಲ್ಕು ಪಕ್ಷಗಳು ಮಾತ್ರ ಎನ್ ಡಿಎ ಮಿತ್ರಪಕ್ಷಗಳಾಗಿ ಚುನಾವಣಾ ಕಣದಲ್ಲಿವೆ. ಹಿಂದೂಸ್ತಾನ್ ಅವಂ ಮೋರ್ಚಾ, ಜೆಡಿಯು, ವಿಐಪಿ ಮತ್ತು ಬಿಜೆಪಿ ಪಕ್ಷಗಳು ಮಾತ್ರ ಎನ್ ಡಿಎ ಮೈತ್ರಿಕೂಟದಲ್ಲಿವೆ ಎಂದು ಹೇಳಿದರು.

ಬಿಹಾರದಲ್ಲಿ ಮೂರು ಹಂತಗಳಲ್ಲಿ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಅಕ್ಟೋಬರ್.28 ಮೊದಲ ಹಂತದ ಚುನಾವಣೆ, ನವೆಂಬರ್.03 ಎರಡನೇ ಹಂತದ ಚುನಾವಣೆ ಮತ್ತು ನವೆಂಬರ್.07ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ. ಖಾಲಿ ಆಗಿರುವ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರಕ್ಕೂ ನವೆಂಬರ್.07ರಂದೇ ಮತದಾನ ನಡೆಯಲಿದೆ.

English summary
NDA Will Return To Power With Two-Thirds Majority In Bihar Election: Amit Shah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X