ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಜಾಫರ್ ಕಿರುಕುಳ ಪ್ರಕರಣ, 2 ವಾರದಲ್ಲಿ ತನಿಖೆ ಮುಗಿಸಲು ಸುಪ್ರೀಂ ಸೂಚನೆ

|
Google Oneindia Kannada News

ಪಾಟ್ನಾ, ಮೇ 06:ಮುಜಾಫರ್ ಪುರ ಸೇರಿದಂತೆ ಬಿಹಾರದ 17ಕ್ಕೂ ಅಧಿಕ ಆಶ್ರಮ ತಾಣಗಳಲ್ಲಿ ನಡೆದಿರುವ ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣದ ತನಿಖೆಯನ್ನು 2 ವಾರಗಳಲ್ಲಿ ಮುಕ್ತಾಯಗೊಳಿಸುವಂತೆ ಸಿಬಿಐಗೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ.

ಬಿಹಾರ ಆಶ್ರಯತಾಣದಲ್ಲಿ 11 ಬಾಲಕಿಯರ ಬರ್ಬರ ಹತ್ಯೆ: ಮೂಳೆಗಳನ್ನು ಪತ್ತೆಹಚ್ಚಿದ ಸಿಬಿಐ ಬಿಹಾರ ಆಶ್ರಯತಾಣದಲ್ಲಿ 11 ಬಾಲಕಿಯರ ಬರ್ಬರ ಹತ್ಯೆ: ಮೂಳೆಗಳನ್ನು ಪತ್ತೆಹಚ್ಚಿದ ಸಿಬಿಐ

ಈ ಪ್ರಕರಣದಲ್ಲಿ ಎಫ್ಐಆರ್ ಹಾಕುವುದರಿಂದ ಹಿಡಿದು ಸೆಕ್ಷನ್ 377 ಸೇರಿಸುವ ತನಕ ಹಾಗೂ ಪೋಸ್ಕೋ ಕಾಯ್ದೆಯಡಿಯಲ್ಲಿ ಕೇಸು ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸುವ ತನಕ ಎಲ್ಲದರಲ್ಲೂ ವಿಳಂಬ ನೀತಿ ಅನುಸರಿಸಲಾಗಿರುವುದೇಕೆ ಎಂದು ಸರ್ಕಾರವನ್ನು ಕೋರ್ಟ್ ಪ್ರಶ್ನಿಸಿತ್ತು.

ಲೋಕಸಭಾ ಚುನಾವಣೆ ವಿಶೇಷ ಪುಟ

ನಿತೀಶ್ ಕುಮಾರ್ ಅವರ ಕ್ಯಾಬಿನೆಟ್ ನಲ್ಲಿ ಸಮಾಜ ಕಲ್ಯಾಣ ಖಾತೆ ಸಚಿವೆಯಾಗಿದ್ದ ಮಂಜು ವರ್ಮಾ ಅವರು ಈ ಪ್ರಮುಖದ ಆರೋಪಿಯಾಗಿದ್ದರು. ಮಂಜು ಅವರು ತಮ್ಮ ಮೇಲೆ ಆರೋಪ ಕೇಳಿ ಬಂದ ಬಳಿಕ, ರಾಜೀನಾಮೆ ನೀಡಿ ನಾಪತ್ತೆಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಮಾಜಿ ಸಚಿವೆ ಮಂಜು ವರ್ಮಾ ಅವರನ್ನು ಇನ್ನು ಏಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದ ಸುಪ್ರೀಂಕೋರ್ಟ್, ಬಿಹಾರದ ಟಾಪ್ ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತ್ತು. ಇದಾದ ಬಳಿಕ ಮಂಜು ವರ್ಮಾ ಅವರು ಇತ್ತೀಚೆಗೆ ಕೋರ್ಟಿಗೆ ಶರಣಾಗಿದ್ದರು

Muzzaffarpur shelter Home case : SC asks CBI to complete Probe in 2 weeks

ಮುಜಾಫರ್ ಪುರದ ಆಶ್ರಯ ಕೇಂದ್ರಗಳಲ್ಲಿ ಅತ್ಯಾಚಾರ, ಲೈಂಗಿಕ ಕಿರುಕುಳಗಳು ನಡೆದಿದ್ದು, ಬ್ರಜೇಶ್ ಠಾಕೂರ್ ಎಂಬ ವ್ಯಕ್ತಿ ಮುಖ್ಯ ಆರೋಪಿಯಾಗಿದ್ದಾನೆ ಬ್ರಜೇಶ್ ಜತೆಗೆ ಚಂದ್ರಶೇಖರ್ ವರ್ಮಾ ಅವರು ಅನೇಕ ಬಾರಿ ಫೋನ್ ಕರೆ ಮೂಲಕ ಮಾತನಾಡಿರುವುದು ಪತ್ತೆಯಾಗಿತ್ತು.

English summary
The Supreme court on Monday asked the Central Bureau of Investigation (CBI) to complete within two weeks, the probe into the alleged killing of 11 girls in Muzzaffarpur Shelter Home case in which Brajesh Thakur is the main accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X