• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಶ್ಲೀಲ ಹಾಡಿಗೆ ನರ್ತಿಸುವಂತೆ ಮಾಡಿ, ಮತ್ತು ಬರಿಸಿ ಬಾಲಕಿಯರ ರೇಪ್!

|

ಪಟ್ನಾ, ಜನವರಿ 07 : ಸರಕಾರಿ ಆಶ್ರಯತಾಣದಲ್ಲಿ ಇದ್ದ ಆ ಅಮಾಯಕ ಬಾಲಕಿಯರಿಗೆ ಅಶ್ಲೀಲವಾದ ಹಾಡಿಗೆ ನೃತ್ಯ ಮಾಡಲು ಬಲವಂತ ಪಡಿಸಲಾಗುತ್ತಿತ್ತು, ಮತ್ತು ಬರುವ ಪದಾರ್ಥ ನೀಡಿ, ನಿರ್ದಯವಾಗಿ ಅತ್ಯಾಚಾರ ಎಸಗಲಾಗುತ್ತಿತ್ತು!

ಬಿಹಾರದ ಮುಜಫರ್ ಪುರದಲ್ಲಿ ನಡೆದ ಬೆಚ್ಚಿಬೀಳಿಸುವ ಈ ಪ್ರಕರಣದ ತನಿಖೆ ನಡೆಸಿರುವ ಸಿಬಿಐ ಸಲ್ಲಿಸಿರುವ 73 ಪುಟಗಳ ಚಾರ್ಜ್ ಶೀಟ್ ನಲ್ಲಿ ಇಂತಹ ಹೃದಯ ಕಿತ್ತುಬರುವಂಥ ಹೀನಾಯ ಕಥೆಗಳಿವೆ. ಸಾಲದೆಂಬಂತೆ ಪ್ರಭಾವಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ನೆರಳಿನಲ್ಲಿಯೇ ಇದೆಲ್ಲ ನಡೆದಿದೆ.

ಬಿಹಾರ ಆಶ್ರಮ ತಾಣಗಳಲ್ಲಿನ ರೇಪ್ ಕೇಸ್ ಸಿಬಿಐ ತನಿಖೆಗೆ

ಹಲವಾರು ವರ್ಷಗಳಿಂದ ಈ ಆಶ್ರಮ ನಡೆಸಿಕೊಂಡು ಬರುತ್ತಿದ್ದ ಮತ್ತು ಈ ಕ್ರಿಮಿನಲ್ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಬ್ರಜೇಶ್ ಠಾಕೂರ್ ನಿಗೆ ರಾಜಕೀಯ ನಾಯಕರ ಆಶೀರ್ವಾದವಿದೆ. ಆತನೊಂದಿಗೆ ಈ ಕೃತ್ಯದಲ್ಲಿ ಭಾಗಿಯಾಗಿರುವ 20 ಜನರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

'ಅತಿಥಿ'ಗಳಿಂದ ಅತ್ಯಾಚಾರ : ಆರೋಪಪಟ್ಟಿಯ ಪ್ರಕಾರ, ಆ ಬಾಲಕಿಯರಿಗೆ ಅಶ್ಲೀಲ ಹಾಡಿಗೆ ಕಾಮಪ್ರಚೋದಕ ಬಟ್ಟೆ ಧರಿಸಿ ಭೋಜಪುರಿ ಹಾಡುಗಳಿಗೆ ಅಸಹ್ಯಕರವಾಗಿ ನೃತ್ಯ ಮಾಡಲು ಬಲವಂತ ಮಾಡಲಾಗುತ್ತಿತ್ತು. ನಂತರ ಅವರಿಗೆ ಮಾದಕ ವಸ್ತು ನೀಡಿ ಅವರು ಮಲಗುವಂತೆ ಮಾಡಲಾಗುತ್ತಿತ್ತು. ಅವರ ಮೇಲೆ ಬ್ರಜೇಶ್ ಠಾಕೂರ್ ಕರೆತಂದ 'ಅತಿಥಿ'ಗಳು ಮುಗಿಬಿದ್ದು ಕಾಮತೃಷೆ ತೀರಿಸಿಕೊಳ್ಳುತ್ತಿದ್ದರು. ಇದನ್ನು ಪ್ರತಿರೋಧಿಸಿದ ಬಾಲಕಿಯರನ್ನು ಹೊಡೆಯಲಾಗುತ್ತಿತ್ತು ಮತ್ತು ಚಿತ್ರಹಿಂಸೆ ನೀಡಲಾಗುತ್ತಿತ್ತು.

ಕಳೆದ ಹತ್ತು ವರ್ಷಗಳಲ್ಲಿ ನಡೆದ ಇಂಥ ಹೀನಾಯ ಕೃತ್ಯಗಳು ಟಾಟಾ ಇನ್ ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ (ಟಿಐಎಸ್ಎಸ್) ನಡೆಸಿದ ನಡೆಸಿದ ಅಧ್ಯಯನ ಮೂಲಕ ಈ ಸರಕಾರಿ ಸ್ವಾಮ್ಯದ ಆಶ್ರಮದಲ್ಲಿ ನಡೆದ ಲೈಂಗಿಕ ದೌರ್ಜನ್ಯಗಳು ಬಯಲಾಗಿವೆ. ಈ ಪ್ರಕರಣವನ್ನು ಕಳೆದ ನವೆಂಬರ್ ನಲ್ಲಿ ಸಿಬಿಐಗೆ ವಹಿಸಲಾಗಿತ್ತು.

ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಹೊರಬಿದ್ದ ಭಯಾನಕ ಸತ್ಯಗಳು!

ಇದೀಗ ಕೋರ್ಟ್ ಆದೇಶದಂತೆ ನೆಲಸಮ ಮಾಡಲಾಗಿರುವ 4 ಅಂತಸ್ತಿನ ಕಟ್ಟಡದಲ್ಲಿ ಅಲ್ಲಿ ಆಶ್ರಯಕ್ಕಿದ್ದ 42 ಬಾಲಕಿಯರಲ್ಲಿ 34 ಬಾಲಕರಿಯರು ಇಂಥ ಅಮಾನವೀಯ ಕೃತ್ಯಕ್ಕೆ ಈಡಾಗಿದ್ದಾರೆ.

ಪ್ರಭಾವಶಾಲಿ ವ್ಯಕ್ತಿ : ಬಂಧಿತನಾಗಿರುವ ಬ್ರಜೇಶ್ ಠಾಕೂರ್ ಆಡಳಿತಾರೂಢ ಜೆಡಿಯು ಪಕ್ಷದ ರಾಜಕಾರಣಿಗೆ ಹತ್ತಿರವಾಗಿದ್ದು, ಸರ್ವೋಚ್ಚ ನ್ಯಾಯಾಲಯವೇ ಹೇಳಿದಂತೆ ಆತ ಭಾರೀ ಪ್ರಭಾವಶಾಲಿಯಾಗಿದ್ದ ಕಾರಣ, ಆತ ತನಿಖೆಯೆ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಆತನನ್ನು ರಾಜ್ಯದ ಹೊರಗಿನ ಜೈಲಿನಲ್ಲಿ ಇಡಲಾಗಿದೆ.

ಬ್ರಜೇಶ್ ನನ್ನು ನಿತಿಶ್ ಕುಮಾರ್ ಸರಕಾರವೇ ರಕ್ಷಿಸಲು ಯತ್ನಿಸುತ್ತಿದೆ ಎಂದು ಆರ್ಜೆಡಿ ನಾಯಕರು ಆರೋಪಿಸಿದ್ದಾರೆ. ಇದಕ್ಕೆ ಪೂರಕವೆಂಬಂತೆ, ಬಿಹಾರ ಸರಕಾರದಲ್ಲಿ ಸಮಾಜ ಕಲ್ಯಾಣ ಸಚಿವೆಯಾಗಿದ್ದ ಮಂಜು ವರ್ಮಾ ಅವರು ರಾಜೀನಾಮೆ ನೀಡಿದ್ದಾರೆ. ಅವರ ಗಂಡ ಚಂದ್ರಶೇಖರ ವರ್ಮಾ ಅವರು ಆರೋಪಿ ಬ್ರಜೇಶ್ ಜೊತೆ ಸಂಪರ್ಕದಲ್ಲಿದ್ದು, ಹಲವಾರು ಬಾರಿ ಆತನೊಂದಿಗೆ ವ್ಯವಹಾರ ಮಾಡಿರುವ ಆರೋಪವಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Muzaffarpur shelter sexual harassment case : Girls were forced to dance to vulgar songs in vulgar dress, were drugged and raped by guests of main accused Brajesh Thakur. CBI has filed 73 page chargesheet in this high profile case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more