ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದಪ್ಪಾ ಲೆಕ್ಕ: ಬಿಹಾರದ ಒಂದೇ ಕೇಂದ್ರದಲ್ಲಿ ಮೋದಿ, ಶಾ, ಸೋನಿಯಾ ಗಾಂಧಿ ಪಡೆದರಾ ಲಸಿಕೆ!?

|
Google Oneindia Kannada News

ನವದೆಹಲಿ, ಡಿಸೆಂಬರ್ 6: ಭಾರತದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಕಾರ್ಯಕ್ರಮವನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವು ಗಣ್ಯರು ಬಿಹಾರದ ಒಂದು ಕೇಂದ್ರದಲ್ಲಿ ಲಸಿಕೆ ಪಡೆದುಕೊಂಡಿದ್ದಾರೆ ಎಂದು ಹೇಳುವ ಪಟ್ಟಿಯೊಂದು ಸಖತ್ ಸುದ್ದಿ ಆಗುತ್ತಿದೆ.

ಬಿಹಾರದಲ್ಲಿ ಕೊವಿಡ್-19 ಲಸಿಕೆ ವಿತರಣೆಯ ಅಂಕಿ-ಅಂಶಗಳನ್ನು ನೀಡುವಲ್ಲಿ ಭಾರಿ ಅಕ್ರಮ ನಡೆದಿರುವ ಅನುಮಾನ ಹುಟ್ಟಿಕೊಂಡಿದೆ. ಬಿಹಾರ ಅರ್ವಾಲ್ ಜಿಲ್ಲೆಯಲ್ಲಿ ಕೊರೊನಾವೈರಸ್ ಲಸಿಕೆ ಪಡೆದವರ ಪಟ್ಟಿಯನ್ನು ಇತ್ತೀಚೆಗೆ ಸರ್ಕಾರದ ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಲಾಗಿತ್ತು. ಈ ಪಟ್ಟಿಯನ್ನು ಪರಿಶೀಲಿಸಿದ ವೇಳೆಯಲ್ಲಿ ಗಣ್ಯರ ಹೆಸರನ್ನು ಲಸಿಕೆ ಪಡೆದವರ ಪಟ್ಟಿಯಲ್ಲಿ ನಮೂದಿಸಲಾಗಿದ್ದು, ಇದಕ್ಕೆ ಕಾರಣರಾದ ಇಬ್ಬರು ಕಂಪ್ಯೂಟರ್ ಆಪರೇಟರ್ಸ್ ಅನ್ನು ಅಮಾನತುಗೊಳಿಸಲಾಗಿದೆ.

ಭಾರತದಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುತ್ತಾ ಓಮಿಕ್ರಾನ್ ರೂಪಾಂತರ?ಭಾರತದಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುತ್ತಾ ಓಮಿಕ್ರಾನ್ ರೂಪಾಂತರ?

ಬಿಹಾರದ ಕರ್ಪಿ ಸಮುದಾಯದ ಫಲಾನುಭವಿಗಳಿಗೆ ಲಸಿಕೆ ನೀಡಿರುವುದರ ಪಟ್ಟಿ ಸಿದ್ಧಪಡಿಸಲಾಗಿತ್ತು. ಈ ಪಟ್ಟಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಅಮಿತ್ ಶಾ, ಸೋನಿಯಾ ಗಾಂಧಿ, ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಟ ಅಕ್ಷಯ್ ಕುಮಾರ್ ಹೆಸರನ್ನು ಸೇರಿಸಲಾಗಿತ್ತು. ಅದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ತನಿಖೆಗೆ ಆದೇಶಿಸಲಾಗಿದೆ.

ಲಸಿಕೆ ವಿತರಣೆ ಅಂಕಿ-ಅಂಶಗಳಲ್ಲಿನ ವ್ಯತ್ಯಾಸದ ಬಗ್ಗೆ ತನಿಖೆ

ಲಸಿಕೆ ವಿತರಣೆ ಅಂಕಿ-ಅಂಶಗಳಲ್ಲಿನ ವ್ಯತ್ಯಾಸದ ಬಗ್ಗೆ ತನಿಖೆ

ಕೊರೊನಾವೈರಸ್ ಲಸಿಕೆ ವಿತರಣೆಗೆ ಸಂಬಂಧಿಸಿದ ಅಂಕಿ-ಅಂಶಗಳಲ್ಲಿ ಹೇಗೆ ಮತ್ತು ಯಾರ ನಿರ್ದೇಶನದ ಮೇಲೆ ವಂಚನೆ ನಡೆದಿದೆ ಎಂಬುದರ ಕುರಿತು ವಿಚಾರಣೆ ನಡೆಸಲಾಗುವುದು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಜೆ ಪ್ರಿಯದರ್ಶಿನಿ ತಿಳಿಸಿದ್ದಾರೆ. "ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ. ನಾವು ಪರೀಕ್ಷೆ ಮತ್ತು ಲಸಿಕೆಯನ್ನು ಹೆಚ್ಚಿಸಲು ತುಂಬಾ ಪ್ರಯತ್ನಿಸುತ್ತಿದ್ದು, ಇದರ ಮಧ್ಯೆ ಇಂತಹ ಅಕ್ರಮಗಳು ನಡೆಯುತ್ತಿವೆ. ಕರ್ಪಿಯಲ್ಲಿ ಮಾತ್ರವಲ್ಲದೇ ಎಲ್ಲಾ ಆರೋಗ್ಯ ಕೇಂದ್ರಗಳ ಮೇಲೆ ಗಮನ ಹರಿಸುತ್ತಿದ್ದೇವೆ. ಈಗಾಗಲೇ ಎಫ್ಐಆರ್ ದಾಖಲಿಸಿಕೊಂಡಿದ್ದು, ಮಾನದಂಡಗಳ ಪ್ರಕಾರ ಶಿಸ್ತುಕ್ರಮಗಳನ್ನು ತೆಗೆದುಕೊಳ್ಳಲಾಗುವುದು," ಎಂದರು.

ಎಲ್ಲರ ವಿಚಾರಣೆ ನಡೆಸಲಾಗುವುದು ಎಂದ ಜಿಲ್ಲಾ ಮ್ಯಾಜಿಸ್ಟ್ರೇಟ್

ಎಲ್ಲರ ವಿಚಾರಣೆ ನಡೆಸಲಾಗುವುದು ಎಂದ ಜಿಲ್ಲಾ ಮ್ಯಾಜಿಸ್ಟ್ರೇಟ್

"ಕೊವಿಡ್-19 ಲಸಿಕೆ ಪಡೆದವರ ಪಟ್ಟಿಯಲ್ಲಿ ಗಣ್ಯರ ಹೆಸರು ಸೇರ್ಪಡೆ ಆಗಿರುವುದಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ಇಬ್ಬರು ಕಂಪ್ಯೂಟರ್ ಆಪರೇಟರ್ಸ್ ಅನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಇದರ ಹೊರತಾಗಿ ಉಳಿದ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲು ನಾನು ಬಯಸುತ್ತೇನೆ," ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಪ್ರಿಯದರ್ಶಿನಿ ತಿಳಿಸಿದ್ದಾರೆ.

ಬಿಹಾರ ಆರೋಗ್ಯ ಸಚಿವರು ಲಸಿಕೆ ವಿತರಣೆ ಪಟ್ಟಿ ಬಗ್ಗೆ ಹೇಳುವುದೇನು?

ಬಿಹಾರ ಆರೋಗ್ಯ ಸಚಿವರು ಲಸಿಕೆ ವಿತರಣೆ ಪಟ್ಟಿ ಬಗ್ಗೆ ಹೇಳುವುದೇನು?

"ಈ ವಿಷಯವು ತಮ್ಮ ಇಲಾಖೆಯ ಗಮನಕ್ಕೆ ಬಂದಾಕ್ಷಣ, ಡೇಟಾ ಎಂಟ್ರಿಯನ್ನು ವಹಿಸಿಕೊಟ್ಟ ಇಬ್ಬರು ಕಂಪ್ಯೂಟರ್ ಆಪರೇಟರ್‌ಗಳನ್ನು ವಜಾಗೊಳಿಸಲಾಗಿದೆ," ಎಂದು ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ ಹೇಳಿದ್ದಾರೆ. "ನಾನು ಜಿಲ್ಲಾಧಿಕಾರಿ ಮತ್ತು ಮುಖ್ಯ ವೈದ್ಯಕೀಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಯಾವುದೇ ದೋಷಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ಆಸ್ಪತ್ರೆಗಳಲ್ಲಿನ ಇತರ ಆಸ್ಪತ್ರೆಗಳ ದತ್ತಾಂಶವನ್ನು ಸಹ ನೋಡುವಂತೆ ಸೂಚಿಸಿದ್ದೇನೆ. ಉಳಿದ ಕಡೆಗಳಲ್ಲೂ ಇಂಥ ಲೋಪದೋಷಗಳು ಕಂಡು ಬಂದರೆ ತಪ್ಪಿತಸ್ಥರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು, ಎಂದಿದ್ದಾರೆ.

ರಾಜ್ಯದಲ್ಲಿ 2ನೇ ಡೋಸ್ ವಿತರಣೆಯಲ್ಲಿ ಗೊಂದಲ

ರಾಜ್ಯದಲ್ಲಿ 2ನೇ ಡೋಸ್ ವಿತರಣೆಯಲ್ಲಿ ಗೊಂದಲ

ಬಿಹಾರ ರಾಜಧಾನಿ ಪಾಟ್ನಾದಲ್ಲಿ ಕೊವಿಡ್-19 ಲಸಿಕೆಯ ಎರಡನೇ ಡೋಸ್ ಪಡೆದುಕೊಳ್ಳಲು ಹೋದವರಿಗೆ ಲಸಿಕೆಯನ್ನೇ ನೀಡಲಾಗುತ್ತಿಲ್ಲ. ಎರಡೂ ಡೋಸ್ ಪಡೆದಿರುವ ಬಗ್ಗೆ ಅಂಕಿ-ಅಂಶಗಳಲ್ಲಿ ನಮೂದಿಸಲಾಗಿದ್ದು, ಸಾಕಷ್ಟು ಗೊಂದಲ ಸೃಷ್ಟಿಸುತ್ತಿದೆ. ಒಂದು ಡೋಸ್ ಪಡೆದವರ ಹೆಸರನ್ನು ಎರಡೂ ಡೋಸ್ ಪಡೆದವರ ಪಟ್ಟಿಗೆ ಸೇರಿಸಲಾಗಿದೆ. ಇದರಿಂದ ಲಸಿಕೆ ಕೇಂದ್ರಕ್ಕೆ 2ನೇ ಡೋಸ್ ಪಡೆಯಲು ತೆರಳಿದವರು ಲಸಿಕೆ ಹಾಕಿಸಿಕೊಳ್ಳದೇ ವಾಪಸ್ ಆಗುವಂತಾ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಸಚಿವರನ್ನು ಪ್ರಶ್ನಿಸಲಾಯಿತು. "ಕೆಲವು ತಾಂತ್ರಿಕ ದೋಷಗಳಿಂದ ಇಂಥ ಸಮಸ್ಯೆಗಳು ಎದುರಾಗುತ್ತಿವೆ. ಹಾಗೆಂದ ಮಾತ್ರಕ್ಕೆ ನಾವು ಭರವಸೆಯನ್ನು ಕಳೆದುಕೊಳ್ಳುವಂತಿಲ್ಲ. ಒಂದು ವೇಳೆ ನೀವು ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅದಕ್ಕೆ ಪರಿಹಾರವನ್ನು ಕಂಡುಕೊಳ್ಳಲಾಗುವುದು," ಎಂದು ಹೇಳಿದರು.

Recommended Video

ಅಶ್ವಿನ್ ಮಾಡಿದ ಟ್ವೀಟ್ ನಿಂದ ಬದಲಾಯ್ತು ಎಜಾಜ್ ಪಟೇಲ್ ಲಕ್!! | Oneindia Kannada

English summary
PM Narendra Modi, Amit Shah, Sonia Gandhi Names in Coronavirus Vaccination List; Vaccination data fraud in Bihar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X