• search
  • Live TV
ಪಟ್ನಾ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತೇಜಸ್ವಿಗೆ 'ಕ್ಯಾಬಿನೆಟ್' ನ ಉಚ್ಛಾರವೂ ಬರುವುದಿಲ್ಲ:ಅಶ್ವಿನಿ ಚೌಬೆ

|

ಪಾಟ್ನಾ, ಅಕ್ಟೋಬರ್ 31: ಬಿಹಾರದಲ್ಲಿ ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರುವ ತೇಜಶ್ವಿ ಯಾದವ್ ವಿರುದ್ಧ ಕೇಂದ್ರ ಸಚಿವ ಅಶ್ವಿನಿ ಚೌಬೆ ಕಿಡಿಕಾರಿದ್ದಾರೆ.

ಬಿಹಾರದಲ್ಲಿ ಮೊದಲ ಹಂತದ ಮತದಾನ ಮುಗಿದಿದ್ದು, ಆಡಳಿತ ಹಾಗೂ ಪ್ರತಿಪಕ್ಷಗಳ ವಾಕ್ಸಮರ ಕೂಡ ಮುಂದುವರೆದಿದೆ.

ಆರ್‌ಜೆಡಿ ನಾಯಕನಿಗೆ ಕ್ಯಾಬಿನೆಟ್ ಎನ್ನುವ ಉಚ್ಛಾರ ಕೂಡ ಬರುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.10ನೇ ತರಗತಿಯನ್ನು ಪಾಸ್ ಮಾಡಲಾಗದ ವ್ಯಕ್ತಿ ಎಂಜಿನಿಯರಿಂಗ್ ಮಾಡಿರುವ ನಿತೀಶ್ ಕುಮಾರ್ ಅವರನ್ನು ಟೀಕಿಸುತ್ತಿದ್ದಾರೆ.

ಬಿಹಾರದಲ್ಲಿ ಕಿಂಗ್ ಮೇಕರ್ ಆಗಲು ತೃತೀಯ ರಂಗದ ಉಪೇಂದ್ರ ಸಜ್ಜು!

ಅವರಿಗೆ ಕ್ಯಾಬಿನೆಟ್‌ನ ಸ್ಪೆಲ್ಲಿಂಗ್ ಕೂಡ ಬರೆಯಲು ಬರುವುದಿಲ್ಲ, ಅವರ ತಂದೆಯ ಮೊದಲ ಕ್ಯಾಬಿನೆಟ್ ನಿರ್ಧಾರವು ಒಂದು ಉದ್ಯೋಗವನ್ನು ಒದಗಿಸುವುದಾಗಿ ಭರವಸೆ ನೀಡಿತ್ತು. ಆದರೆ ಅವರು ಹಣವನ್ನು ಸಂಗ್ರಹಿಸಿದರು ಮತ್ತ ಉದ್ಯೋಗದ ಅರ್ಜಿಗಳು ಇನ್ನೂ ಕಸದ ಬುಟ್ಟಿಯಲ್ಲಿವೆ ಎಂದು ಅಶ್ವಿನಿ ದೂರಿದ್ದಾರೆ.

ನಿರುದ್ಯೋಗ ಮತ್ತು ವಲಸೆಯ ವಿಷಯಗಳ ಕುರಿತು ಮಾತನಾಡಲು ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಒತ್ತಾಯಿಸಿದ್ದರು.

ಬಿಹಾರ ನಿವಾಸಿಗಳಿಗೆ ಉಚಿತವಾಗಿ ಕೊವಿಡ್ 19 ಲಸಿಕೆ ವಿತರಿಸುವುದಾಗಿ ಬಿಜೆಪಿ ನೀಡಿರುವ ಭರವಸೆಯು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಲ್ಲ ಎಂದು ತೀರ್ಪು ನೀಡಿರುವ ಭಾರತದ ಚುನಾವಣಾ ಆಯೋಗ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾವು ಆಯುಷ್ಮಾನ್ ಭಾರತ್ ಅನ್ನು ನೀಡಿದ್ದೇವೆ ಮತ್ತು ಹೆಚ್ಚಿನದನ್ನು ಉತ್ತೇಜಿಸುವ ಅಗತ್ಯವಿದೆ.

ಲಸಿಕೆ ಪ್ರಯೋಗವು 3ನೇ ಹಂತದಲ್ಲಿದೆ ಮತ್ತು ಎಲ್ಲವೂ ಸರಿಯಾಗಿ ನಡೆದರೆ ನಾವು ಅದನ್ನು ಉಚಿತವಾಗಿ ನೀಡುತ್ತೇವೆ ಎಂದರು.ಕಾಂಗ್ರೆಸ್-ಆರ್‌ಜೆಡಿ ಮೈತ್ರಿಯ ಗಪ್ಪು ಮ್ತತು ಪಪ್ಪುಗಳು ಕೇವಲ ಲಪ್ಪು ನೀಡುತ್ತಾರೆ ಅಂದರೆ ದೊಡ್ಡದಾದ ಸುಳ್ಳು ಭರವಸೆಗಳನ್ನು ನೀಡುತ್ತಾರೆ, ಹೀಗಾಗಿ ಜನರು ಎಚ್ಚರಿಕೆಯಿಂದಿರಬೇಕು ಎಂದರು.

English summary
Taking a dig at Mahagathbandan's chief ministerial candidate Tejashwi Yadav, Union Minister Ashwini Choubey on Saturday said the RJD leader can't even spell "Cabinet" correctly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X