ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಸೂದ್ ಅಜರ್ ಜೀ' ಹೇಳಿಕೆ ರಾಹುಲ್ ಗಾಂಧಿ ವಿರುದ್ಧ ದೂರು

|
Google Oneindia Kannada News

ಪಾಟ್ನಾ, ಮಾರ್ಚ್ 12 : ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲು ಮಾಡಲಾಗಿದೆ. ಉಗ್ರನನ್ನು 'ಮಸೂದ್ ಅಜರ್ ಜೀ' ಎಂದು ಕರೆದಿದ್ದಕ್ಕೆ ದೂರು ನೀಡಲಾಗಿದೆ.

ಬಿಹಾರದ ಮುಜಾಫುರ್‌ಪುರದಲ್ಲಿ ತಮನ್ನಾ ಹಶ್ಮಿ ಎಂಬುವವರು ರಾಹುಲ್ ಗಾಂಧಿ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಿದ್ದಾರೆ. ದೂರನ್ನು ಸ್ವೀಕರಿಸಿದ ನ್ಯಾಯಾಲಯ ಮೇ 16ಕ್ಕೆ ವಿಚಾರಣೆ ಮುಂದೂಡಿದೆ.

'ಅಜಿತ್ ದೋವಲ್, ಜೈಶೆ ಉಗ್ರ ಮಸೂದ್ ಅಜರ್ ಜೊತೆ ಪ್ರಯಾಣಿಸಿಲ್ಲ''ಅಜಿತ್ ದೋವಲ್, ಜೈಶೆ ಉಗ್ರ ಮಸೂದ್ ಅಜರ್ ಜೊತೆ ಪ್ರಯಾಣಿಸಿಲ್ಲ'

ಸೋಮವಾರ ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥನನ್ನು 'ಮಸೂದ್ ಅಜರ್ ಜೀ' ಎಂದು ಕರೆದಿದ್ದರು.

'ಮಸೂದ್ ಅಜರ್ ಜೀ' ಎಂದ ರಾಹುಲ್ ಗೆ ಬಿಜೆಪಿಯಿಂದ ಲೇವಡಿ'ಮಸೂದ್ ಅಜರ್ ಜೀ' ಎಂದ ರಾಹುಲ್ ಗೆ ಬಿಜೆಪಿಯಿಂದ ಲೇವಡಿ

Masood Azhar Ji comment complaint against Rahul Gandhi

ರಾಹುಲ್ ಗಾಂಧಿ ಅವರ ಈ ಹೇಳಿಕೆ ಭಾರಿ ಸಂಚಲನ ಮೂಡಿಸಿತ್ತು. ಆರು ಸೆಕೆಂಡ್‌ಗಳ ವಿಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದ ಬಿಜೆಪಿ ನಾಯಕರು, ರಾಹುಲ್ ಗಾಂಧಿ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದರು.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿ ಭಾಷಣದ ವಿಡಿಯೋವನ್ನು ಹಾಕಿ,'ರಾಹುಲ್ ಲವ್ಸ್ ಟೆರರಿಸ್ಟ್' ಎಂದು ಟ್ವೀಟ್ ಮಾಡಿದ್ದರು. ಈ ಭಾಷಣ ಮುಂದಿಟ್ಟುಕೊಂಡು ಇಂದು ದೂರು ದಾಖಲು ಮಾಡಲಾಗಿದೆ.

1999ರಲ್ಲಿ ಉಗ್ರ ಮಸೂದ್ ಅಜರ್‌ನನ್ನು ಬಿಡುಗಡೆ ಮಾಡಿದ್ದು ಬಿಜೆಪಿ ಮತ್ತು ಇಂದಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಎಂದು ಟೀಕಿಸುವಾಗ ರಾಹುಲ್ ಗಾಂಧಿ 'ಮಸೂದ್ ಅಜರ್ ಜೀ' ಎಂದು ಹೇಳಿದ್ದರು.

ಬಿಜೆಪಿ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ್ದ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಅವರು, 'ಬಿಜೆಪಿ ಮತ್ತು ಒಂದು ವರ್ಗದ ಮಾಧ್ಯಮಗಳು ರಾಹುಲ್ ಹೇಳಿಕೆಯನ್ನು ತಿರುಚುತ್ತಿವೆ' ಎಂದು ಆರೋಪಿಸಿದ್ದರು.

English summary
Tamanna Hashmi has filed a complaint in a court in Muzaffarpur against Congress President Rahul Gandhi over his remark where he referred to JeM chief Masood Azhar as "Masood Azhar Ji".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X