ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಮಹಾಘಟಬಂಧನ ಮೈತ್ರಿಕೂಟದಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ

|
Google Oneindia Kannada News

ಪಾಟ್ನಾ, ಅಕ್ಟೋಬರ್ 17: ಬಿಹಾರದಲ್ಲಿ ಕಾಂಗ್ರೆಸ್, ಆರ್‌ಜೆಡಿ ಸೇರಿದಂತೆ ವಿವಿಧ ಪಕ್ಷಗಳನ್ನು ಒಳಗೊಂಡ ಮಹಾಘಟಬಂಧನ ಇಂದು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.

ಕೃಷಿ ಕಾನೂನು ಹಾಗೂ ಉದ್ಯೋಗದ ಮೇಲೆ ಈ ಪ್ರಣಾಳಿಕೆ ಕೇಂದ್ರೀಕೃತವಾಗಿದೆ. ಕಾಂಗ್ರೆಸ್ ಮುಖಂಡ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ, ಆರ್‌ಜೆಡಿ ತೇಜಸ್ವಿ ಯಾದವ್ ಅವರ ನೇತೃತ್ವದಲ್ಲಿ ಚುನಾವಣೆಯಲ್ಲಿ ನಾವು ಗೆದ್ದರೆ, ಮೊದಲ ವಿಧಾನಸಭಾ ಅಧಿವೇಶನದಲ್ಲಿಯೇ ಕೇಂದ್ರ ಬಿಡುಗಡೆ ಮಾಡಿರುವ ಮೂರು ಕೃಷಿ ಮಸೂದೆಗಳನ್ನು ರದ್ದುಗೊಳಿಸಲು ಮುಂದಾಗಲಿದೆ.

ಬಿಹಾರದ ಮಹಾಘಟಬಂಧನ ಮೈತ್ರಿಕೂಟಕ್ಕೆ ಆಘಾತ ನೀಡಿದ ಮಾಂಝಿಬಿಹಾರದ ಮಹಾಘಟಬಂಧನ ಮೈತ್ರಿಕೂಟಕ್ಕೆ ಆಘಾತ ನೀಡಿದ ಮಾಂಝಿ

ಬಿಜೆಪಿಯು ಮೂರು ಮೈತ್ರಿಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದೆ. ಜನರು ನೋಡಬಹುದಾದ ಜನತಾದಳ, ಲೋಕ ಜನಶಕ್ತಿ ಪಕ್ಷ, ಮತ್ತೊಂದು ಓವೈಸಿ ಸಾಹೇಬರು ಎಂದು ಹೇಳಿದರು.

Mahagathbandhan Releases Bihar Polls Manifesto

ಕೇಂದ್ರದ ತಂಡವು ಪ್ರವಾಹದಲ್ಲಿ ನಲುಗಿರುವ ಸ್ಥಳಕ್ಕೆ ಇನ್ನೂ ಭೇಟಿ ನೀಡಿಲ್ಲ. ಎಲ್ಲರೂ ತಮ್ಮ ಖುರ್ಚಿಯನ್ನು ಪಡೆಯುವ ಸ್ಪರ್ಧೆಯಲ್ಲಿದ್ದಂತೆ ಕಾಣುತ್ತಿದೆ. ಮಹಾಘಟಬಂಧನದಿಂದ 243 ಸೀಟುಗಳಿಗೆ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೊದಲ ಹಂತ ಅಕ್ಟೋಬರ್ 28 ರಂದು ನಡೆಯಲಿದೆ. ಫಲಿತಾಂಶ ನವೆಂಬರ್ 10ಕ್ಕೆ ಪ್ರಕಟವಾಗಲಿದೆ.

ಚುನಾವಣಾ ಸಮೀಕ್ಷೆಗಳ ನಿಷೇಧವಿರುವಾಗ ಜ್ಯೋತಿಷಿ, ವಿಶ್ಲೇಷಕರ ಮುನ್ಸೂಚನೆಯನ್ನೂ ಕೂಡ ಪ್ರಸಾರ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಈ ಕುರಿತಂತೆ ನಿಬಂಧನೆಗಳನ್ನು ಹೊರಡಿಸಿರುವ ಚುನಾವಣಾ ಆಯೋಗ, 'ಚುನಾವಣೆ ಸಮೀಕ್ಷೆಗಳ ಮೇಲೆ ನಿರ್ಬಂಧವಿರುವಾಗ ಮಾಧ್ಯಮಗಳಲ್ಲಿ ಜ್ಯೋತಿಷಿಗಳು, ಸಂಖ್ಯಾಶಾಸ್ತ್ರಜ್ಞರು, ವಿಶ್ಲೇಷಕರ ಮೂಲಕ ಸೋಲು ಗೆಲುವಿನ ಮುನ್ಸೂಚನೆಯನ್ನು ಕೂಡ ಪ್ರಸಾರ ಮಾಡುವುದೂ ನಿಯಮಬಾಹಿರ ಎಂದು ಚುನಾವಣಾ ಆಯೋಗ ಗುರುವಾರ ಸ್ಪಷ್ಟಪಡಿಸಿದೆ.
2020ರ ಅಕ್ಟೋಬರ್ 28 ರಂದು (ಬುಧವಾರ) ಬೆಳಿಗ್ಗೆ 7 ಮತ್ತು ನವೆಂಬರ್ 7 ರಂದು ಸಂಜೆ 6.30ರ ನಡುವಿನ ನಿಷೇಧಿತ ಅವಧಿಯಲ್ಲಿ ಫಲಿತಾಂಶಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಕ್ರಮ ಅಥವಾ ಲೇಖನವನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ (ಎಲೆಕ್ಟ್ರಾನಿಕ್-ಮುದ್ರಣ ) ಚುನಾವಣಾ ಆಯೋಗ ಸೂಚಿಸಲಾಗಿದೆ

English summary
The grand alliance partners in Bihar - the Congress, Rashtriya Janata Dal (RJD) and Left parties - on Saturday released their manifesto for the state assembly elections slated for late October and November this year with a focus on the farm laws and jobs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X