ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಹಾರ ಚುನಾವಣೆ: "ಬಿಹಾರಿ ಪುತ್ರ"ನಿಗಾಗಿ ಮತ ಕೇಳಿದ ಶತ್ರುಜ್ಞ ಸಿನ್ಹಾ

|
Google Oneindia Kannada News

ಪಾಟ್ನಾ, ಅಕ್ಟೋಬರ್.18: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಟ ಹಾಗೂ ರಾಜಕಾರಣಿ ಶತ್ರುಜ್ಞ ಸಿನ್ಹಾ ಪುತ್ರ ಲವ ಸಿನ್ಹಾ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಪಾಟ್ನಾದ ಬಂಕಿಪುರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಪುತ್ರನನ್ನು ಬೆಂಬಲಿಸುವಂತೆ ಹಿರಿಯ ನಟ ಶತ್ರುಜ್ಞ ಸಿನ್ಹಾ ಮನವಿ ಮಾಡಿಕೊಂಡಿದ್ದಾರೆ.

ಯುವಕರು ರಾಜಕಾರಣಕ್ಕೆ ಪ್ರವೇಶಿಸುತ್ತಿರುವ ಇಂಥ ಸಂದರ್ಭದಲ್ಲಿ ಅವರನ್ನು ಬೆಂಬಲಿಸಬೇಕಿದೆ. ಹಾಗೆಂದ ಮಾತ್ರಕ್ಕೆ ನಾನು ರಾಜಕೀಯದಿಂದ ನಿವೃತ್ತಿ ಹೊಂದುತ್ತಿದ್ದೇನೆ ಎಂದು ಅರ್ಥವಲ್ಲ ಎಂದು ಹಿರಿಯ ಮುಖಂಡ ಶತ್ರುಜ್ಞ ಸಿನ್ಹಾ ಸ್ಪಷ್ಟನೆ ನೀಡಿದ್ದಾರೆ.

ಬಿಹಾರದಲ್ಲಿ ಪತ್ನಿಯನ್ನು ಸಿಎಂ ಮಾಡಿದ್ದೇ ಲಾಲೂ ಸಾಧನೆ: ಸಿಎಂ ನಿತೀಶ್ ಕುಮಾರ್ ಬಿಹಾರದಲ್ಲಿ ಪತ್ನಿಯನ್ನು ಸಿಎಂ ಮಾಡಿದ್ದೇ ಲಾಲೂ ಸಾಧನೆ: ಸಿಎಂ ನಿತೀಶ್ ಕುಮಾರ್

ಬಂಕಿಪುರ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲವ ಸಿನ್ಹಾ ಸ್ಪರ್ಧಿಸುತ್ತಿದ್ದಾರೆ. ಈಗಾಗಲೇ ಕ್ಷೇತ್ರದಲ್ಲಿ ಬಿಗಿ ಹಿಡಿತ ಹೊಂದಿರುವ ಹಾಗೂ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ನಿತಿನ್ ನಬಿನ್ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಪಾಟ್ನಾ ಸಾಹಿಬ್ ಲೋಕಸಕ್ಷಾ ಕ್ಷೇತ್ರದ ವ್ಯಾಪ್ತಿಯಲ್ಲೇ ಈ ಬಂಕಿಪುರ್ ವಿಧಾನಸಭಾ ಕ್ಷೇತ್ರವೂ ಬರುತ್ತದೆ. ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ವಿರುದ್ಧ ಸ್ಪರ್ಧಿಸಿದ ಶತ್ರುಜ್ಞ ಸಿನ್ಹಾ ಸೋಲು ಕಂಡಿದ್ದರು.

ಬಿಹಾರಿ ಬಾಬು ಎಂದೇ ಪ್ರಖ್ಯಾತಿ ಗಳಿಸಿರುವ ಶತ್ರುಜ್ಞ ಸಿನ್ಹಾ

ಬಿಹಾರಿ ಬಾಬು ಎಂದೇ ಪ್ರಖ್ಯಾತಿ ಗಳಿಸಿರುವ ಶತ್ರುಜ್ಞ ಸಿನ್ಹಾ

"ಬಿಹಾರಿ ಬಾಬು" ಎಂದೇ ಪ್ರಖ್ಯಾತಿ ಕಳಿಸಿರುವ ಶತ್ರುಜ್ಞ ಸಿನ್ಹಾ ಅವರು, ಭಾರತೀಯ ಜನತಾ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಎರಡು ಬಾರಿ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಕಳೆದ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಷ್ಟೇ ಬಿಜೆಪಿಯನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಇದೀಗ ಬಂಕಿಪುರ್ ಕ್ಷೇತ್ರದಲ್ಲಿ ಹೊಸ ಮುಖವನ್ನು ಪರಿಚಯಿಸುವುದಕ್ಕಾಗಿ ಪುತ್ರನನ್ನು ಚುನಾವಣಾ ಅಖಾಡಕ್ಕೆ ಇಳಿಸಿದ್ದಾರೆ.

ರಾಜಕೀಯಕ್ಕೆ ವಿದಾಯ ಹೇಳುವುದಿಲ್ಲ ಎಂದ ಶತ್ರುಜ್ಞ ಸಿನ್ಹಾ

ರಾಜಕೀಯಕ್ಕೆ ವಿದಾಯ ಹೇಳುವುದಿಲ್ಲ ಎಂದ ಶತ್ರುಜ್ಞ ಸಿನ್ಹಾ

ಪುತ್ರನನ್ನು ರಾಜಕಾರಣಕ್ಕೆ ತರುತ್ತಿದ್ದೇನೆ ಎಂದ ಮಾತ್ರಕ್ಕೆ ನಾನು ರಾಜಕೀಯದಿಂದ ದೂರ ಸರಿಯುತ್ತಿದ್ದೇನೆ ಎಂದರ್ಥವಲ್ಲ. ನಾನು ರಾಜಕೀಯದಿಂದ ನಿವೃತ್ತಿ ಹೊಂದಿಲ್ಲ. ರಾಜಕಾರಣಕ್ಕೆ ವಿದಾಯ ಹೇಳುವುದೂ ಇಲ್ಲ. ಮೊದಲಿನಂತೆ ನಿರಂತರ ರಾಕಾರಣದಲ್ಲೇ ಮುಂದುವರಿಯಲಿದ್ದೇನೆ ಎಂದು 74 ವರ್ಷದ ಹಿರಿಯ ಕಾಂಗ್ರೆಸ್ ಮುಖಂಡ ಶತ್ರುಜ್ಞ ಸಿನ್ಹಾ ಸ್ಪಷ್ಟನೆ ನೀಡಿದ್ದಾರೆ.

"ಬಿಹಾರಿ ಪುತ್ರ"ನಿಗೆ ಮತ ನೀಡುವಂತೆ ಶತ್ರುಜ್ಞ ಸಿನ್ಹಾ ಮನವಿ

ಬಂಕಿಪುರ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಲವ ಸಿನ್ಹಾ ಈಗಾಗಲೇ ನಾಮಪತ್ರ ಸಲ್ಲಿಸಿದ್ದು, ನವೆಂಬರ್.03ರಂದು ಮತದಾನ ನಡೆಯಲಿದೆ. 2009ರಲ್ಲಿ ತಾವು ಮೊದಲ ಬಾರಿಗೆ ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ ದಿನದಿಂದಲೂ ಪುತ್ರ ಲವ ಸಿನ್ಹಾ ಕ್ಷೇತ್ರದಲ್ಲಿ ಜನರಿಗಾಗಿ ದುಡಿಯುತ್ತಿದ್ದಾರೆ. ಬಂಕಿಪುರ್ ಕ್ಷೇತ್ರದ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಲವ ಸಿನ್ಹಾರನ್ನು "ಬಿಹಾರಿ ಪುತ್ರ" ಎಂದು ಶತ್ರುಜ್ಞ ಸಿನ್ಹಾ ಕರೆದಿದ್ದಾರೆ.

Recommended Video

ಲಸಿಕೆ ಸಿಗತ್ತೋ ಇಲ್ವೋ ಗೊತ್ತಿಲ್ಲಾ ! ಆದ್ರೆ ಇದು ಮಾತ್ರ Ready ಇರ್ಬೇಕು | Oneindia Kannada
ಶತ್ರುಜ್ಞ ಸಿನ್ಹಾರಿಗೆ ಕಾಂಗ್ರೆಸ್ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ

ಶತ್ರುಜ್ಞ ಸಿನ್ಹಾರಿಗೆ ಕಾಂಗ್ರೆಸ್ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಡುಗಡೆಗೊಳಿಸಿದ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಮಾಜಿ ಸಂಸದ ಶತ್ರುಜ್ಞ ಸಿನ್ಹಾರ ಹೆಸರನ್ನೂ ಸೇರಿಸಲಾಗಿದೆ. ಬಿಹಾರದಲ್ಲಿ ಮೂರು ಹಂತಗಳಲ್ಲಿ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಅಕ್ಟೋಬರ್.28 ಮೊದಲ ಹಂತದ ಚುನಾವಣೆ, ನವೆಂಬರ್.03 ಎರಡನೇ ಹಂತದ ಚುನಾವಣೆ ಮತ್ತು ನವೆಂಬರ್.07ರಂದು ಮೂರನೇ ಹಂತದ ಚುನಾವಣೆ ನಡೆಯಲಿದೆ. ಖಾಲಿ ಆಗಿರುವ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರಕ್ಕೂ ನವೆಂಬರ್.07ರಂದೇ ಮತದಾನ ನಡೆಯಲಿದೆ.

English summary
Luv Sinha Contesting ‘Bihar putra’ From Bankipur; It Means I’m Not Saying Goodbye To Politics: Shatrughan Sinha.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X